30.2 C
Bengaluru
Sunday, February 25, 2024

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಆರ್.ಟಿ.ಸಿ ತಿದ್ದುಪಡಿ ಶಾಖೆಯ ವಿಷಯ ನಿರ್ವಾಹಕ

ಮಂಡ್ಯಜು. 19 :ಮದ್ದೂರು ತಾಲೂಕು ಕಛೇರಿಯ ಕೊಪ್ಪ ಹೋಬಳಿಯ ಆರ್.ಟಿ.ಸಿ ತಿದ್ದುಪಡಿ ಶಾಖೆಯ ವಿಷಯ ನಿರ್ವಾಹಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಮದ್ದೂರಿನಲ್ಲಿತಾಲೂಕು ಕಚೇರಿಯ ಹಕ್ಕು ದಾಖಲಾತಿ ತಿದ್ದುಪಡಿ (ಆರ್ ಆರ್ ಟಿ) ಶಾಖೆಯ ಡಿ.ಜೆ.ಮಂಜುನಾಥ್ ಎಂಬ ನೌಕರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಕೊಪ್ಪ ಹೋಬಳಿಯ ಬಿದರಮೊಳೆ ಕೊಪ್ಪಲು ಗ್ರಾಮದ ಮೋಹನ್ ಕುಮಾರ್ ಅವರ ಜಮೀನಿನ ಆದೇಶವನ್ನು ಜಿಲ್ಲಾಧಿಕಾರಿ ಕೋರ್ಟ್ ವಿಳಂಬ ಮಾಡಲು ಮಂಜುನಾಥ್ 10 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.ಬಿದರ ಮೇಳೆಕೊಪ್ಪಲು ಗ್ರಾಮದ ಸರ್ವೇ ನಂಬರ್ 226 ಜಮೀನಿನ ವಿವಾದ ಉಪ ವಿಭಾಗಾಧಿಕಾರಿ ಕೋರ್ಟ್ ನಲ್ಲಿದೆ, ಈ ಸಂಬಂಧ ಹಣ ಕೇಳಿದ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಮೋಹನ್ ದೂರು ಸಲ್ಲಿಸಿದ್ದರು.ಲೋಕಾಯುಕ್ತ ಎಸ್ ಪಿ ಸುಜಿತ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಡಿವೈಎಸ್ ಪಿ ಸುನಿಲ್ ಕುಮಾರ್,ಇನ್ ಸ್ಪೆಕ್ಟರ್ ಪ್ರಕಾಶ್, ಸಿಬ್ಬಂದಿಗಳಾದ ಶಂಕರ್, ಶರತ್,ಮಹಾದೇವಯ್ಯ ,ಮಹಾದೇವಸ್ವಾಮಿ, ನಂದೀಶ್ ,ಯೋಗೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Related News

spot_img

Revenue Alerts

spot_img

News

spot_img