22.1 C
Bengaluru
Friday, July 19, 2024

ರಾಮಮಂದಿರದಲ್ಲಿ ಹರಿಯುತ್ತಿದೆ ಹಣದ ಹೊಳೆ-14 ಸಿಬ್ಬಂದಿಗೆ ಬಿಡುವಿಲ್ಲದ ಕೆಲಸ

# Ayodhya # Rammaondir # Devotes # Money# Bank empolyes#Ramalal

ಅಯೋಧ್ಯೆ: ಕಳೆದ ತಿಂಗಳ 22ರಂದು ರಾಮಲಾಲ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಅಂದಿನಿಂದಲೂ ಜನರು ರಾಮನ ಸನ್ನಿಧಿಗೆ ಬಿಡುವಿಲ್ಲದೇ ಆಗಮಿಸುತ್ತಾ ಇದ್ದಾರೆ. ಹೀಗೆ ಬರುವ ಭಕ್ತರು ಅಪಾರ ಪ್ರಮಾಣದಲ್ಲಿ ಕಾಣಿಕೆ ಅರ್ಪಿಸುತ್ತಾ ಇದ್ದಾರೆ. ಭಕ್ತರು ನೀಡುತ್ತಿರುವ ಕಾಣಿಕೆ ಹಣವನ್ನ ಎಣಿಸಲು 14 ಮಂದಿ ಸಿಬ್ಬಂದಿಯನ್ನ ನೇಮಿಸಲಾಗಿದೆ. ಇದರಲ್ಲಿ 11 ಮಂದಿ ಬ್ಯಾಂಕ್ ಹಾಗೂ 3 ಮಂದಿ ದೇವಸ್ಥಾನದ ಆಡಳಿತ ಮಂಡಳಿಯವರಾಗಿದ್ದಾರೆ. ಇನ್ನೊಂದು ಅಚ್ಚರಿಯ ವಿಷಯ ಅಂದರೆ ದಿನಕ್ಕೆ ಹಲವು ಬಾರಿ ಕಾಣಿಕೆ ಡಬ್ಬಗಳನ್ನು ಬದಲಿಸಲಾಗುತ್ತಿದೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಿ ಕೇವಲ 12 ದಿನವಷ್ಟೇ ಕಳೆದಿದೆ. ಆದ್ರೆ ಇಷ್ಟು ದಿನದಲ್ಲೇ ಹೀಗೆ ಅಪಾರ ಪ್ರಮಾಣದಲ್ಲಿ ದೇಣಿಗೆ ಸಂಗ್ರಹ ಆಗ್ತಾ ಇರೋದನ್ನ ನೋಡಿದ್ರೆ ಮುಂದಿನ ದಿನದಲ್ಲಿ ಅದು ಮತ್ತಷ್ಟು ಹೆಚ್ಚಾಗಬಹುದು ಅನ್ನೋ ನಿರೀಕ್ಷೆ ಇದೆ. ಒಂದು ಅಂದಾಜಿನ ಪ್ರಕಾರ ಇಲ್ಲಿಯವರೆಗೂ 25 ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಆಗಮಿಸಿದ್ದಾರೆ. ಅವರಿಂದ ಸುಮಾರು 8 ಕೋಟಿ ರೂಪಾಯಿಗಳು ಕಾಣಿಕೆ ಪೆಟ್ಟಿಯಲ್ಲಿ ಸಂಗ್ರಹವಾಗಿದೆ. ಆನ್ ಲೈನ್ ನಲ್ಲಿ 3.50 ಕೋಟಿಗೂ ಅಧಿಕ ಹಣ ಬಂದಿದೆ.

ರಾಮಲಾಲ ಗರ್ಭಗುಡಿಯ ಮುಂಭಾಗದ ದರ್ಶನ ಪಥದ ಬಳಿ ನಾಲ್ಕು ಕಾಣಿಕೆ ಡಬ್ಬಗಳನ್ನ ಇಡಲಾಗಿದೆ. ಅದರಲ್ಲಿ ದೇಗುಲಕ್ಕೆ ಬರುವ ಭಕ್ತರು ತಮ್ಮ ಕೈಲಾದ ಕಾಣಿಕೆಗಳನ್ನು ಹಾಕ್ತಾರೆ. ಇದಲ್ಲದೇ ಆನ್ ಲೈನ್ ನಲ್ಲೂ ಸೇವೆಗೆ ಅವಕಾಶ ಇದ್ದು, 10 ಗಣಕೀಕೃತ ಕೌಂಟರ್‌ಗಳನ್ನ ತೆರೆಯಲಾಗಿದೆ. ಸಿಬ್ಬಂದಿ ಹಣ ಎಣಿಸಿದ ಬಳಿಕ ಪ್ರತಿದಿನ ಸಂಜೆ ರಾಮಮಂದಿರದ ಟ್ರಸ್ಟ್ ಕಚೇರಿಯಲ್ಲಿ ಜಮಾ ಮಾಡ್ತಾರೆ. ಈ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲಿನಲ್ಲೇ ನಡೆಯುತ್ತೆ.

Related News

spot_img

Revenue Alerts

spot_img

News

spot_img