32.2 C
Bengaluru
Wednesday, April 17, 2024

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಈ ಹೊಸ ಸ್ಕೀಮ್ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ

ಬೆಂಗಳೂರು, ಜೂ. 22 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗಾಗಿ ಅಮೃತ್ ಕಲಶ್ ಠೇವಣಿಯನ್ನು ಪರಿಚಯಿಸಿತ್ತು. ಇದು ಹಿರಿಯ ನಾಗರಿಕರಿಗೆ ಶೇಕಡಾ 7.6 ಮತ್ತು ಇತರರಿಗೆ ಶೇಕಡಾ 7.1 ರ ಬಡ್ಡಿದರವನ್ನು ನೀಡುತ್ತದೆ. ಮೊದಲು ಈ ಯೋಜನೆಯನ್ನು ಪ್ರಾರಂಭಿಸಿದಾಗ ಫೆಬ್ರವರಿ 15, 2023 ರಿಂದ ಹೂಡಿಕೆದಾರರಿಗೆ ಲಭ್ಯವಿತ್ತು. ಮಾರ್ಚ್ 31, 2023 ರವರೆಗೆ ಈ ಯೋಜನೆ ಮಾನ್ಯವಾಗಿತ್ತು. ಬಳಿಕ ಎಸ್ಬಿಐ ಪುನಃ ಈ ಯೋಜನೆಯ ಅವಧಿಯನ್ನು ಮುಂದುವರೆಸಿದ್ದು, ಜೂನ್ 30, 2023ರ ವರೆಗೆ ಮಾನ್ಯವಾಗಿರಲಿದೆ.

ಅಂದರೆ, ಈ ತಿಂಗಳು ಈ ಯೋಜನೆ ಮುಕ್ತಾಯಗೊಳ್ಳಲಿದೆ. ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶೀಯ ಮತ್ತು ಎನ್ಆರ್ಐ ಗ್ರಾಹಕರಿಗೆ ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು ಪ್ರಕಟಿಸಿದೆ. ದೇಶೀಯ ಮತ್ತು ಎನ್ಆರ್ಐ ಗ್ರಾಹಕರಿಗೆ ಎಸ್ಬಿಐ ಅಮೃತ್ ಕಲಾಶ್ ಠೇವಣಿ ಎಫ್ಡಿ ಯೋಜನೆಯು ‘ಆಕರ್ಷಕ ಬಡ್ಡಿದರಗಳೊಂದಿಗೆ’ ಬರುತ್ತದೆ ಮತ್ತು 400 ದಿನಗಳ ಅವಧಿಯನ್ನು ಹೊಂದಿದೆ ಎಂದು ಎಸ್ಬಿಐ ಹೇಳಿದೆ.

ಎಸ್ಬಿಐ ಅಮೃತ್ ಕಲಾಶ್ ಠೇವಣಿ ಎಫ್ಡಿ ಯೋಜನೆಯು 7.10 ಪ್ರತಿಶತ ಬಡ್ಡಿದರಗಳನ್ನು ನೀಡುತ್ತದೆ, ಆದರೆ ಹಿರಿಯ ನಾಗರಿಕರು ಎಫ್ಡಿಯಲ್ಲಿ 7.60 ಬಡ್ಡಿಯನ್ನು ಪಡೆಯುತ್ತಾರೆ. ಹಾಗಿದ್ದರೂ, ಎಸ್ಬಿಐ ಅಮೃತ್ ಕಲಶ್ ಠೇವಣಿ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಎಫ್ಡಿ ಪಡೆದುಕೊಳ್ಳುವ ಗ್ರಾಹಕರು 31 ಮಾರ್ಚ್ 2023 ರವರೆಗೆ ಹಾಗೆ ಮಾಡಬಹುದು. “ಅಮೃತ್ ಕಲಶ್ ಠೇವಣಿ” ಅನ್ನು ದೇಶೀಯ ಮತ್ತು ಎನ್ಆರ್ಐ ಗ್ರಾಹಕರಿಗೆ ಆಕರ್ಷಕ ಬಡ್ಡಿ ದರಗಳು, 400 ದಿನಗಳ ಅವಧಿ ಮತ್ತು ಹೆಚ್ಚಿನವುಗಳೊಂದಿಗೆ ಪರಿಚಯಿಸಿದೆ.

ಅಮೃತ್ ಕಲಶ್ ಯೋಜನೆ ಅಡಿಯಲ್ಲಿ 1 ಲಕ್ಷ ರೂಪಾಯಿ ಹಣವನ್ನು ಠೇವಣಿ ಮಾಡಿದರೆ ನಿಮಗೆ ಒಟ್ಟು ಬಡ್ಡಿಯು ಸಾಮಾನ್ಯ ಹೂಡಿಕೆದಾರರಿಗೆ ರೂ 8,017 ಬಂದರೆ, ಹಿರಿಯ ನಾಗರಿಕರಿಗೆ ರೂ 8,600 ಬರುತ್ತದೆ. ಇನ್ನೆಂಟು ದಿನಗಳಲ್ಲಿ ಈ ಯೋಜನೆಯು ಮುಕ್ತಾಯವಾಗಲಿದ್ದು, ನಿಮ್ಮ ಬಳಿ ಚಿಲ್ಲರೆ ಹಣವಿದ್ದರೆ, ಆದಷ್ಟು ಬೇಗನೇ ಠೇವಣಿ ಮಾಡಿ ಹೆಚ್ಚಿನ ಬಡ್ಡಿ ಪಡೆಯಿರಿ.

Related News

spot_img

Revenue Alerts

spot_img

News

spot_img