25.5 C
Bengaluru
Friday, September 20, 2024

ಮನೆಯ ಯಜಮಾನನಿಗೆ ತೊಂದರೆ ಆಗಬಾರದೆಂದರೆ, ಈ ದಿಕ್ಕಿನ ಬಗ್ಗೆ ಇರಲಿ ಗಮನ..

ಬೆಂಗಳೂರು, ಆ. 30 : ನೈರುತ್ಯ ದಿಕ್ಕು ಯಜಮಾನನಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ನೈರುತ್ಯದಲ್ಲಿ ಯಜಮಾನ ಈ ದಿಕ್ಕಿನಲ್ಲಿ ತನ್ನ ಆದಾಯದ ಕೆಲಸಗಳನ್ನು ಮಾಡಿದರೆ ಒಳಿತಾಗುತ್ತದೆ. ಆದರೆ, ಈ ದಿಕ್ಕಿನಲ್ಲಿ ನೀರು ಇದ್ದರೆ, ಯಜಮಾನನ ಫಲ ಕಡಿಮೆಯಾಗುತ್ತದೆ. ನೈರುತ್ಯದಲ್ಲಿ ಬೇಡದ ವಸ್ತುಳನ್ನು ತುಂಬಿಸಿಟ್ಟರೂ ಯಜಮಾನನ ಮೇಲಿನ ಗೌರವಗಳು ಕಡಿಮೆಯಾಗುತ್ತದೆ. ಈಶಾನ್ಯದಲ್ಲಿ ಸಮಸ್ಯೆ ಇದ್ದಾಗ ಮಕ್ಕಳಿಂದ ಪೋಷಕರಿಗೆ ತೊಂದರೆಯಾಗುತ್ತದೆ. ಆಗ ತಾಯಿ ಹಾಗೂ ತಂದೆಯ ಅಭಿಪ್ರಾಯಗಳು ಬೇರೆಯಾದಾಗಲೂ ಕೂಡ ಜಗಳಗಳು ಶುರುವಾಗುತ್ತವೆ.

ನೈರುತ್ಯ ದಿಕ್ಕಿನಲ್ಲಿ ನೀರು ನಿಲ್ಲುವುದರಿಂದ ಅಥವಾ ನೈರುತ್ಯದಲ್ಲಿ ಬಾವಿ, ಸಂಪು, ಟಾಯ್ಲೆಟ್ ಅಥವಾ ಬೋರ್ ವೆಲ್ ಇರುವುದರಿಂದ ಏನಾಗುತ್ತದೆ ಎಂದು ತಿಳಿಯೋಣ. ನೈರುತ್ಯ ದಿಕ್ಕು ಪೃಥ್ವಿಗೆ ಸಂಬಂಧಿಸಿದ್ದು, ನೈರುತ್ಯ ಕೋಣೆಯನ್ನು ಪೃಥ್ವಿ ತತ್ವ ರೂಲ್ ಮಾಡುತ್ತದೆ. ಈ ಪೃಥ್ವಿ ಮೇಲೆ ನೀರು ಬಿದ್ದಾಗ ಕೆಸರು ರೀತಿ ಆಗಿ ಪೃಥ್ವಿ ತನ್ನ ಧೃಢತೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ವಾಸ್ತುವಿನಲ್ಲಿ ಏನು ಪರಿಣಾಮ ಎಂದು ತಿಳಿದುಕೊಳ್ಳಬಹುದು.

ಈಗಾಗಲೇ ನೈರುತ್ಯ ದಿಕ್ಕು ಮನೆಯ ಯಜಮಾನನ ಕೋಣೆ. ಈ ಜಾಗದಲ್ಲಿ ಬಾವಿ ಅಥವಾ ಬೋರ್ ಅನ್ನು ಹಾಕಿದಾಗ ಅಲ್ಲಿ ಇರಬೇಕಿರುವ ಪೃಥ್ವಿಯ ಧೃಢತೆ ಕಡಿಮೆಯಾಗಿ ಮನೆಯ ಯಜಮಾನನ ಶಕ್ತಿ ಕುಗ್ಗುತ್ತದೆ. ಮೊದಲನೇಯದಾಗಿ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಯಜಮಾನ ಸಂಪೂರ್ಣವಾಗಿ ಹಾಸಿಗೆ ಹಿಡಿಯುವ ಸಾಧ್ಯತೆ ಇರುತ್ತದೆ. ಇನ್ನೊಂದು ಸಾವು ಕೂಡ ಸಂಭವಿಸಬಹುದು. ಅದರಲ್ಲೂ ಹೃದಯಾಘಾತಗಳು ಹೆಚ್ಚಾಗಿ ಆಗಿರುವುದು ಕಂಡು ಬಂದಿದೆ.

ಸಂಪನ್ನು ನೈರುತ್ಯದಲ್ಲಿ ಹಾಕಿದ್ದರೂ ಕೂಡ ಇದೇ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನೀರು ಓಡಾಡುವುದರಿಂದಾಗಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇನ್ನು ಟಾಯ್ಲೆಟ್ ಏನಾದರೂ ಇದ್ದರೆ, ನೀರು ಅಶುದ್ಧವಾಗುವುದರಿಂದ ಯಜಮಾನನ ಮರಿಯಾದೆ ಹೋಗುತ್ತದೆ. ಆಗ ಯಜಮಾನನಿಗೆ ಮನೆಯಲ್ಲಿ ಬೆಲೆಯೇ ಇಲ್ಲದಂತೆ ಆಗುತ್ತದೆ. ಯಜಮಾನ ಸಂಪೂರ್ಣವಾಗಿ ಮೂಲೆ ಗುಂಪಾಗುತ್ತಾನೆ.

ಇನ್ನು ನೈರುತ್ಯದಲ್ಲಿ ಮನೆಯ ತ್ಯಾಜ್ಯ ನೀರು ಹರಿದರೆ, ಇದರಿಂದ ಮನೆಯ ಹಣ ಖಾಲಿಯಾಗಿ ಮನೆಯನ್ನು ಸಂಪೂರ್ಣವಾಗಿ ತೊಳೆಯುವಂತೆ ಮಾಡುತ್ತದೆ. ಇನ್ನು ಓವರ್ ಹೆಡ್ ಟ್ಯಾಂಕ್ ಅನ್ನು ನೈರುತ್ಯದಲ್ಲಿ ಹಾಕುವುದರಿಂದ ಸದಾ ನೀರು ಲೀಕೇಜ್ ಆಗುತ್ತಿದ್ದರೆ, ಅದರಿಂದಲೂ ಮನೆಯ ಯಜಮಾನನಿಗೆ ಅಶುಭವಾಗುತ್ತದೆ. ಹಾಗಾಗಿ ನೈರುತ್ಯದಲ್ಲಿ ನೀರಿನ ಹರಿವು ಇರದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಮನೆಯಿಂದ ಹೊರಗೆ ಹೋಗುವ ನೀರು ಉತ್ತರದಿಂದ ನೈರುತ್ಯಕ್ಕೆ ಹರಿಯುತ್ತಿದ್ದರೆ, ಇದು ದುಂದು ವೆಚ್ಚಕ್ಕೆ ಕಾರಣವಾಗುತ್ತದೆ. ಪೂರ್ವದಿಂದ ನೈರುತ್ಯಕ್ಕೆ ನೀರು ಹರಿದರೂ ಈ ಸಮಸ್ಯೆ ಇರುತ್ತದೆ. ನೈರುತ್ಯ ದಿಕ್ಕಿಗೆ ಮನೆಯಿಂದ ನೀರು ಹೊರಗೆ ಹರಿಯದಂತೆ ನೋಡಿಕೊಳ್ಳಬೇಕಾಗುತ್ತದೆ. ಇನ್ನು ಮನೆಗೆ ಆದಾಯ ಹೆಚ್ಚಾಗಬೇಕು ಎಂದಿದ್ದರೆ, ನೈರುತ್ಯ ಹಾಗೂ ಈಶಾನ್ಯ ದಿಕ್ಕು ಸರಿಯಾಗಿದ್ದು, ಇಲ್ಲಿ ಯಾವುದೇ ಸಮಸ್ಯೆ ಕಾಣದಂತೆ ನೋಡಿಕೊಳ್ಳಬೇಕು.

Related News

spot_img

Revenue Alerts

spot_img

News

spot_img