34.8 C
Bengaluru
Monday, April 15, 2024

ರಾಜ್ಯದ ಆರು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಗೌರವ

#Six #teachers # state #honored # national awards

ಬೆಂಗಳೂರು : ಶಿಕ್ಷಕರ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ರಾಜ್ಯದ ಆರು ಮಂದಿಯನ್ನು ರಾಷ್ಟ್ರೀಯ ಶಿಕ್ಷಕಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು. ರಾಷ್ಟ್ರಪತಿ ದೌಪದಿ  ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪುರಸ್ಕೃತರಿಗೆ ಅರ್ಹತೆಯ ಪ್ರಮಾಣಪತ್ರ 50,000 ನಗದು ಪ್ರಶಸ್ತಿ ಮತ್ತು ಪ್ರತಿಷ್ಠಿತ ಬೆಳ್ಳಿ ಪದಕವನ್ನು ನೀಡಲಾಗುವುದು,ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಅಭಿನಂದಿಸಿದ್ದಾರೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುವ ನಾಡಿನ ಹೆಮ್ಮೆಯ ಶಿಕ್ಷಕ ಬಂಧುಗಳಿಗೆ ಅಭಿನಂದನೆಗಳು. ತಮ್ಮೆಲ್ಲರ ಸೇವಾ ಮನೋಭಾವ, ಕರ್ತವ್ಯ ನಿಷ್ಠೆ ಇಡೀ ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರು

*ನಾರಾಯಣ ಪರಮೇಶ್ವರ ಭಾಗವತ್ -ಮಾರಿಕಾಂಬ ಸರ್ಕಾರಿ ಪ್ರೌಢಶಾಲೆ, ಶಿರಸಿ

* ಸಪ್ಪಾ ಶ್ರೀಶೈಲ್ ಅನಿಗೋಳ್-ಎಸ್ ಸಿಪಿ ಹೈಸ್ಕೂಲ್ ಬಾಗಲಕೋಟೆ

*ಎಸ್.ಆರ್.ಮಹದೇವ ಪ್ರಸನ್ನ-ಧಾರವಾಡ ಐಐಟಿ

* ಪೂಜಾ ಆರ್.ಸಿಂಗ್-ಎನ್ ಎಸ್‌ ಟಿಐ, ಬೆಂಗಳೂರು

*ದಿವ್ಯಾ ಎಲ್.-ಎನ್ ಎಸ್ ಐಟಿಡಬ್ಲ್ಯು, ಬೆಂಗಳೂರು

*ದಿನೇಶ್ ಬಾಬು ಜೆ-ಐಐಟಿ ಬೆಂಗಳೂರು

Related News

spot_img

Revenue Alerts

spot_img

News

spot_img