22.3 C
Bengaluru
Thursday, June 20, 2024

ಸ್ಟಾರ್‌ ಪ್ರಚಾರಕರ ಲಿಸ್ಟ್‌ನಲ್ಲಿ ಸಿದ್ದರಾಮಯ್ಯ

ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ ಮುಂತಾದ ಪಂಚ ರಾಜ್ಯಗಳ ಚುನಾವಣಾ ಕಣದಲ್ಲಿರುವ ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು,ಛತ್ತೀಸ್‌ಗಢ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಶುಕ್ರವಾರ ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 40 ನಾಯಕರ ಪಟ್ಟಿ ಸೇರಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚ ರಾಜ್ಯಗಳ  ವಿಧಾನಸಭೆ(Vidhanasabhe) ಚುನಾವಣೆಗಳ ಪೈಕಿ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನ(Congress) ಪ್ರಚಾರಕರಾಗಿ ಕೆಲಸ ಮಾಡಲಿದ್ದಾರೆ.ಹೆಚ್ಚುವರಿಯಾಗಿ, ಸಿದ್ದರಾಮಯ್ಯ ಛತ್ತೀಸ್‌ಗಢದಲ್ಲಿ ಕೆಲ ದಿನಗಳ ಕಾಲ ವಾಸ್ತವ್ಯ ಹೂಡಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಕರ್ನಾಟಕದಿಂದ ಶ್ರೀನಿವಾಸ್ ಬಿವಿ ಕೂಡ ಪಟ್ಟಿಯಲ್ಲಿದ್ದಾರೆ.ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತವು ನವೆಂಬರ್ 7 ರಂದು ನಡೆಯಲಿದ್ದರೆ, ಎರಡನೇ ಹಂತವು ನವೆಂಬರ್ 17 ರಂದು ನಡೆಯಲಿದೆ.

Related News

spot_img

Revenue Alerts

spot_img

News

spot_img