34.8 C
Bengaluru
Monday, April 15, 2024

ವಿಶ್ವದ ಅತಿ ದೊಡ್ಡ ಸುರಂಗ ಸೆಲಾ ಟನಲ್ ಇಂದು ಉದ್ಘಾಟನೆ

ನವದೆಹಲಿ;ವಿಶ್ವದ ಅತಿ ದೊಡ್ಡ ಸುರಂಗ ಇಂದು ಉದ್ಘಾಟನೆ ಅರುಣಾಚಲ ಪ್ರದೇಶದಲ್ಲಿ(Arunachalapradesha) ಕೇಂದ್ರ ಸರ್ಕಾರ ನಿರ್ಮಿಸಿರುವ ಸೆಲಾ ಟನಲ್ ಇಂದು ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆಗೊಳ್ಳಲಿದೆ. 13 ಸಾವಿರ ಅಡಿ ಎತ್ತರದಲ್ಲಿ, ರೂ.825 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸುರಂಗವು ವಿಶ್ವದ ಅತಿ ಉದ್ದದ ದ್ವಿಪಥ ಸುರಂಗವಾಗಿದೆ. ಚೀನಾದೊಂದಿಗಿನ ಗಡಿ ವಿವಾದದ ಹಿನ್ನೆಲೆಯಲ್ಲಿ ಈ ಸುರಂಗದ ಲಭ್ಯತೆ ಬಹಳ ಮುಖ್ಯವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಈ ಸುರಂಗ ಯೋಜನೆಯು ತವಾಂಗ್ ಪ್ರದೇಶಕ್ಕೆ ಎಲ್ಲಾ-ಹವಾಮಾನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ.ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಮೂಲಕ ಅವರ ಪ್ರವಾಸ ಪ್ರಾರಂಭವಾಯಿತು, ನಂತರ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದ ವಿಕ್ಷಿತ್ ಭಾರತ್ ವಿಕ್ಷಿತ್ ಈಶಾನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಸೆಲಾ ಸುರಂಗ(Sela tunnel) ವನ್ನು ಉದ್ಘಾಟಿಸಿದರು ಮತ್ತು ಸುಮಾರು 10,000 ಕೋಟಿ ರೂಪಾಯಿ ಮೌಲ್ಯದ ಉನ್ನತಿ ಯೋಜನೆಯನ್ನು ಅನಾವರಣಗೊಳಿಸಿದರು. ಸೆಲಾ ಸುರಂಗ ಮಾರ್ಗ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 9, 2019 ರಂದು ಅಡಿಪಾಯ ಹಾಕಿದ್ದರು,ಭಾರತ- ಚೀನಾ ಗಡಿಯ ಪೂರ್ವ ವಲಯದ ಕಡೆಗೆ ಉತ್ತಮ ಸಂಪರ್ಕಕ್ಕಾಗಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಸೆಲಾ ಸುರಂಗ ಯೋಜನೆಯು ಎರಡು ಸುರಂಗಗಳನ್ನು ಒಳಗೊಂಡಿದೆ. ಸುರಂಗ 1, ಇದು 980 ಮೀಟರ್ ಉದ್ದದ ಏಕ ಮಾರ್ಗದ ಸುರಂಗ ಮತ್ತು ಸುರಂಗ 2 ಇದು 1555 ಮೀಟರ್ ಉದ್ದದ ದ್ವಿಮಾರ್ಗ ಸುರಂಗವಾಗಿದೆ.ಸೆಲಾ ಸುರಂಗ ಯೋಜನೆಯು ಎರಡು ಸುರಂಗಗಳನ್ನು ಒಳಗೊಂಡಿದೆ. ಸುರಂಗ 1 ಇದು 980 ಮೀಟರ್ ಉದ್ದದ ಏಕ ಮಾರ್ಗದ ಸುರಂಗ ಮತ್ತು ಸುರಂಗ 2 ಇದು 1555 ಮೀಟರ್ ಉದ್ದದ ದ್ವಿಮಾರ್ಗ ಸುರಂಗವಾಗಿದೆ. ಸೆಲಾ ಸುರಂಗವು ಸೆಲಾ ಪಾಸ್‌ನಿಂದ 400 ಮೀಟರ್‌ಗಳಷ್ಟು ಕೆಳಗಿದೆ,ಸೆಲಾ ಸುರಂಗ ಮಾರ್ಗ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 9, 2019 ರಂದು ಅಡಿಪಾಯ ಹಾಕಿದ್ದರು. ಅದರ ನಿರ್ಮಾಣವು ಏಪ್ರಿಲ್ 1, 2019 ರಂದು ಪ್ರಾರಂಭವಾಯಿತು.

Related News

spot_img

Revenue Alerts

spot_img

News

spot_img