ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಪ್ರತಿದಿನ ಬಿಗ್ ಬಾಸ್ ಮನೆಯೊಳಗೆ ಏನ್ ನಡೆಯುತ್ತೆ ಅನ್ನೋದನ್ನ ಬಿಗ್ ಬಾಸ್ ಪ್ರೇಕ್ಷಕರು ಇಂಚು ಇಂಚಾಗಿ ನೋಡ್ತಾ ಕಾಮೆಂಟ್ ಮೂಲಕ ಅವರ ಮನಸ್ಸಿನ ಮಾತನ್ನು ಹೊರಾಗ್ತಾ ಇದ್ದಾರೆ.
ಬಿಗ್ ಬಾಸ್ ಲೈವ್ ಜಿಯೋ ಸಿನಿಮಾದಲ್ಲೂ ಸಂಗೀತ ಅಂಡ್ ಪ್ರತಾಪ್ ಕಾಣೆ…!
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂಬ ಟಾಸ್ ನಡಿತಾ ಇತ್ತು, ಈ ವೇಳೆ ರಾಕ್ಷಸರ ಗುಂಪು ಗಂಧರ್ವರ ಟೀಮ್ ನಲ್ಲಿದ್ದ ಪ್ರತಾಪ್ ಮತ್ತು ಸಂಗೀತ ಮೇಲೆ ಡಿಟರ್ಜೆಂಟ್ ಬಿಸಾಕಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಡ್ರೋನ್ ಪ್ರತಾಪ್ ಮತ್ತು ಸಂಗೀತರವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲಂತು ಸುದ್ದಿ ಹರಿತಾಡುತ್ತಿದ್ದು ಜಿಯೋ ಸಿನಿಮಾ ಬಿಗ್ ಬಾಸ್ ಲೈನ್ನಲ್ಲಿ ಕೂಡ ಸಂಗೀತ ಮತ್ತು ಪ್ರತಾಪ್ ಕಾಣಿಸಿಕೊಳ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ವಿಷಯ ನಿಜವೇ ಸುಳ್ಳೇ ಎಂದು ಬಿಗ್ ಬಾಸ್ ಆಯೋಜಕರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ಆಸ್ಪತ್ರೆಗೆ ದಾಖಲಾಗಿರುವುದು ಡ್ರೋನ್ ಸಂಗೀತ ಕುಟುಂಬಸ್ಥರಿಗೆ ಗೊತ್ತಾ…?
ಈ ವಿಷಯದ ಕುರಿತು ಬಿಗ್ ಬಾಸ್ ಕುಟುಂಬಸ್ಥರಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ, ಅದೇ ಸೋಶಿಯಲ್ ಮೀಡಿಯಾದಲಂತು ನ್ಯೂಸ್ ಭರ್ಜರಿಯಾಗಿ ಸೌಂಡ್ ಮಾಡ್ತಾ ಇದೆ. ರಾಕ್ಷಸರು ಮತ್ತು ಗಂಧರ್ವರ ಗುಂಪಿನ ನಡುವೆ ಬಾರಿ ಪೈಪೋಟಿ ನಡೆಯುತ್ತಿದ್ದು ಹಲವರು ಟಾರ್ಗೆಟ್ ಮಾಡಿ ಆಟ ಆಡ್ತಾ ಇದ್ದಾರೆ
ವಿನಯ್ ಸಂಗೀತ ವೈಯಕ್ತಿಕವಾಗಿ ಆಟ ಆಡ್ತಾ ಇದ್ದಾರಾ….!?
ಅದರಲ್ಲೂ ಸಂಗೀತ ಮತ್ತು ವಿನಯ್ ಮಧ್ಯೆ ಕಾರ್ತಿಕ್ ಮತ್ತು ವಿನಯ್ ಮಧ್ಯೆ ಸಂಗೀತಾ ಮತ್ತು ನಮ್ರತಾ ಮಧ್ಯೆ ಹೀಗೆ ವೈಯಕ್ತಿಕವಾಗಿ ಆಟಗಳನ್ನು ಆಡ್ತಾ ಇದ್ದಾರೆ ಎಂದು ಹಾಗೂ ಒಬ್ಬರಿಗೊಬ್ರುನ ಕೆಣಕ್ತಾಯಿದ್ದಾರೆ, ಅದು ಎಲ್ಲೋ ಒಂದ್ ಕಡೆ ಅನಾಹುತ ಮಾಡಿರಬಹುದು ಎಂಬ ಅಂದಾಜು ಕಾಣ್ತಾ ಇದೆ ಅಥವಾ ಅದೇ ಆಗಿರಲು ಬಹುದು…! ಇಂದು ಬಿಗ್ ಬಾಸ್ ಪ್ರೇಕ್ಷಕರ ಮಾತು. ಸಂಗೀತ ಮತ್ತು ಡ್ರೋನ್ಗೆ ನಿಜವಾಗಲೂ ಪೆಟ್ಟಾಗಿದ್ರೆ ಬೇಗ ಚೇತರಿಸಿಕೊಂಡು ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಚೈತನ್ಯ, ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು