22.6 C
Bengaluru
Friday, September 20, 2024

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದRTO ಅಧಿಕಾರಿ

ಆರ್​ಟಿಒ (RTO) ಕಚೇರಿ ಮೇಲೆ ಲೋಕಾಯುಕ್ತ(Lokayukta) ಅಧಿಕಾರಿಗಳು ದಾಳಿ(attack) ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.15 ಸಾವಿರ ರೂಪಾಯಿ ಲಂಚ(Bribe) ಪಡೆಯುತ್ತಿದ್ದ ವೇಳೆ ಆರ್‌ಟಿಒ ಅಧಿಕಾರಿಯೊಬ್ಬರು ಲೋಕಾಯುಕ್ತರಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆರ್​ಟಿಒ(RTO) ಅಧಿಕಾರಿ ಚಂದ್ರಕಾಂತ್ ಗುಡಿಮನಿ ಹಾಗೂ ಏಜೆಂಟ್ ಮಹಮ್ಮದ್ ರಾಜ್ ಸದ್ಯ ಲೋಕಾಯುಕ್ತ ವಶದಲ್ಲಿದ್ದಾರೆ.ಗುರುವಾರ ರಾತ್ರಿ 10.20ರ ಸುಮಾರಿಗೆ ನಗರದ ಕಚೇರಿಯಲ್ಲಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಚಂದ್ರಕಾಂತ್ ಮತ್ತು ಮೊಹಮ್ಮದ್​ ರಾಜ್ ರನ್ನು ರೆಡ್ ಹ್ಯಾಂಡ್ಆಗಿ ವಶಕ್ಕೆ ಪಡೆಯಲಾಗಿದೆ. ಇವರು ಕ್ಲಿಯರೆನ್ಸ್ ಸರ್ಟಿಫಿಕೇಟ್(Clearance certificate) ಗಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿ ಚಂದ್ರಕಾಂತ್ ಮತ್ತು ಏಜೆಂಟ್ ಮಹಮ್ಮದ್ ರಾಜ್ ಲಂಚ ಪಡೆಯುತ್ತಿದ್ದರು.ಸದ್ಯ ಇಬ್ಬರನ್ನು ಬಳ್ಳಾರಿಯ ಲೋಕಾಯುಕ್ತ(Lokayukta) ಕಚೇರಿಯಲ್ಲಿ ವಿಚಾರಣೆ ನಡೆಸಿ, ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗವುದು ಎಂದು ಮೂಲಗಳಿಂದ ತಿಳಿದುಬಂದಿದೆ.ಲೋಕಾಯುಕ್ತ ಎಸ್ಪಿ(SP) ಶಶಿಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ

Related News

spot_img

Revenue Alerts

spot_img

News

spot_img