24.4 C
Bengaluru
Sunday, September 8, 2024

ಕಂದಾಯ ನಿವೇಶನಗಳ ಅಕ್ರಮ ನೋಂದಣಿ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ !

#Revenesite, #Registration #Real-estate, #Belagavi session,

ಬೆಳಗಾವಿ, ಡಿ. 13: ಕರ್ನಾಟಕ ರಾಜ್ಯದಲ್ಲಿ ನಿಯಮ ಬಾಹಿರವಾಗಿ ನಿರ್ಮಾಣವಾಗುತ್ತಿರುವ ರೆವಿನ್ಯೂ ಲೇಔಟ್‌ ಹಾಗೂ ರೆವಿನ್ಯೂ ನಿವೇಶನಗಳ ನೋಂದಣಿ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.
ಯಲಹಂಕ ಶಾಸಕ ಎಸ್‌.ಅರ್‌. ವಿಶ್ವನಾಥ್‌ ಅವರು ನಿಯಮ 73 ರ ಅಡಿಯಲ್ಲಿ ಅಧಿವೇಶನದಲ್ಲಿ ಚರ್ಚೆ ನಡೆಸಲು ಗಮನ ಸೆಳೆದಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ಪ್ರಶ್ನೆಗೆ ಉತ್ತರ ನೀಡಲಿದ್ದಾರೆ.
ಎಸ್‌.ಆರ್‌. ವಿಶ್ವನಾಥ್‌ ಅವರು ಪ್ರಸ್ತಾಪಿಸಿರುವ ಕಂದಾಯ ನಿವೇಶನಗಳ ಅಕ್ರಮ ನೋಂದಣಿ ಹಾಗೂ ರೆವಿನ್ಯೂ ಲೇಔಟ್‌ ಅಕ್ರಮ ನಿರ್ಮಾಣ ಕುರಿತ ವಿಷಯವನ್ನು ಸಭಾಧ್ಯಕ್ಷರು ಅಂಗೀಕರಿಸಿದ್ದು ಬೆಳಗಾವಿ ಅಧಿವೇಶನದಲ್ಲಿ ಬುಧವಾರ ಚರ್ಚೆಗೆ ಬರಲಿದೆ.

ರೆವಿನ್ಯೂ ಬಡಾವಣೆ ನಿರ್ಮಾಣ: ಕೃಷಿ ಜಮೀನಿನಲ್ಲಿ ಯಾವುದೇ ನೀತಿ ನಿಯಮಗಳು ಇಲ್ಲದೇ ನಿವೇಶನಗಳನ್ನು ವಿಂಗಡಿಸಿ ಹಂಚಿಕೆ ಮಾಡುವ ದೊಡ್ಡ ವಹಿವಾಟು ಬೆಂಗಳೂರನ್ನು ಆವರಿಸಿದೆ. ಕಡಿಮೆ ಬೆಲೆಗೆ ಮಾರಾಟ ಎಂಬ ನೆಪವೂಡಿ ಮೂಲ ಸೌಕರ್ಯ ಇಲ್ಲದೆ, ಭೂ ಪರಿವರ್ತನೆ ಮಾಡದೇ ಲೇಔಟ್‌ ನಿರ್ಮಾಣ ಮಾಡಿ ಮಾರಾಟ ಮಾಡುತ್ತಾರೆ. ಈ ಸಂಪ್ರದಾಯದಿಂದಲೇ ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಸರಿಯಾದ ರಸ್ತೆಗಳು ಇಲ್ಲದೇ ಮೂಲ ಸೌಕರ್ಯ ಇಲ್ಲದೇ ಜನರು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆಯ ಮೂಲ ಈ ರೆವಿನ್ಯೂ ಲೇಔಟ್‌ಗಳ ನಿರ್ಮಾಣ ಎಂದರೆ ತಪ್ಪಾಗಲಾರದು.

ಇನ್ನು ರೆವಿನ್ಯೂ ನಿವೇಶನಗಳ ನೋಂದಣಿ ರದ್ದು ಮಾಡಿ ಕಂದಾಯ ಇಲಾಖೆ 2009 ರಲ್ಲಿಯೇ ಸುತ್ತೋಲೆ ಹೊರಡಿಸಿತ್ತು. ಕಂದಾಯ ಇಲಾಖೆಯ ಈ ಸುತ್ತೋಲೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಅದರೆ ಸುಪ್ರೀಂಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ ಬಳಿಕ ಅರ್ಜಿ ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ. ಇದರ ಪ್ರಕಾರ ರಾಜ್ಯದಲ್ಲಿ ರೆವಿನ್ಯೂ ನಿವೇಶನಗಳನ್ನು ನೋಂದಣಿ ಮಾಡುವಂತಿಲ್ಲ. ಆದರೆ ಬೆಂಗಳೂರಿನಲ್ಲಿ ಕೆಲವು ಉಪ ನೋಂದಣಾಧಿಕಾರಿಗಳನ್ನು ಹೊರತು ಪಡಿಸಿದರೆ ಬಹುತೇಕ ಕಡೆ ಕಂದಾಯ ನಿವೇಶನಗಳನ್ನು ನೋಂದಣಿ ಮಾಡುತ್ತಾರೆ.

ರೆವಿನ್ಯೂ ನಿವೇಶನಗಳ ನೋಂದಣಿಯೆ ಒಂದು ದಂಧೆಯಾಗಿ ರೂಪಾಂತರಗೊಂಡಿದೆ.ರೆವಿನ್ಯೂ ನಿವೇಶನಗಳ ಅಕ್ರಮ ನೋಂದಣಿಗೆ ಕಾವೇರಿ 2.0 ತಂತ್ರಾಂಶದಲ್ಲಿ ಮಣೆ ಹಾಕಲು ಅವಕಾಶ ವಿತ್ತು. ಆರಂಭದಲ್ಲಿ ರೆವಿನ್ಯೂ ನಿವೇಶನಗಳ ನೋಂದಣಿ ರದ್ದು ಪಡಿಸಲಾಗಿತ್ತು. ಆದರೆ ತಂತ್ರಜ್ಞಾನದಲ್ಲಿಯೇ ರೆವಿನ್ಯೂ ನಿವೇಶನಗಳ ನೋಂದಣಿಗೆ ಅವಕಾಶ ಕೊಟ್ಟಿರುವುದು ಎಲ್ಲೋ ಇಡೀ ಕಂದಾಯ ಇಲಾಖೆಯೇ ಈ ದಂಧೆಯಲ್ಲಿ ಶಾಮೀಲಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಬೆಂಗಳೂರಿನಲ್ಲಿ ರೆವಿನ್ಯೂ ನಿವೇಶನಗಳ ನೋಂದಣಿಗಾಗಿಯೇ ಉಪ ನೋಂದಣಾಧಿಕಾರಿ ಹುದ್ದೆಗಳಿಗೆ ಕೆಲವು ಉಪ ನೋಂದಣಾಧಿಕಾರಿಗಳು ಬಿಡ್ಡಿಂಗ್‌ ಹಾಕುತ್ತಾರೆ ಎಂಬ ಮಾತು ಚಾಲ್ತಿಯಲ್ಲಿದೆ.ಖಡಕ್ ಮಿನಿಸ್ಟರ್ ಎಂದೇ ಖ್ಯಾತಿಯಾಗಿರುವ ಕೃಷ್ಣಬೈರೆಗೌಡ ಅವರು ಕಂದಾಯ ಸಚಿವರಾದ ಬಳಿಕ ಕಂದಾಯ ಇಲಾಖೆಯಲ್ಲಿ ಪಾರದರ್ಶಕತೆ ತರುವಲ್ಲಿ ಹಗಳಿರುಳು ಶ್ರಮಿಸುತ್ತಿದ್ದಾರೆ. ಇದೀಗ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬಂದಿದ್ದು, ಕಂದಾಯ ನಿವೇಶನಗಳ ನೋಂದಣಿಗೆ ಬ್ರೇಕ್ ಹಾಕುತ್ತಾರಾ ಅದು ನೋಡಬೇಕಿದೆ.

Related News

spot_img

Revenue Alerts

spot_img

News

spot_img