23 C
Bengaluru
Tuesday, November 12, 2024

ತಕರಾರುಗಳನ್ನು ಇತ್ಯರ್ಥಪಡಿಸಲು ಉಪತಹಶೀಲ್ದಾರರಿಗೆ ಲಾಗಿನ್ ಸೃಜಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯಿಂದ ಆದೇಶ!

ಬೆಂಗಳೂರು ಜೂನ್ 24: ರಾಜ್ಯದಲ್ಲಿ ಹಾಗೆ ಉಳಿದಿರುವ ಹಕ್ಕು ಬದಲಾವಣೆಯಂತಹ ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲು ಹೋಬಳಿಯ ವ್ಯಾಪ್ತಿಯಲ್ಲಿಬರುವ ಉಪತಹಶೀಲ್ದಾರ್ ರವರಿಗೆ ಲಾಗಿನ್ ಸೃಜಿಸುವ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಭೂಮಾಪನ ಇಲಾಖೆ ಹಾಗೂ ಪದನಿಮಿತ್ತ ನಿರ್ದೇಶಕರು,ಭೂಮಿ & ಯುಪಿಓಆರ್, ಬೆಂಗಳೂರು. ಅವರಿಂದ ಆದೇಶಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರದ ಅಧಿಸೂಚನೆಯಲ್ಲಿ, ಹಕ್ಕು ಬದಲಾವಣೆಗಳ ಸಂಬಂಧ (ಬಾಕಿ ಇರುವ ಪ್ರಕರಣಗಳು ಸೇರಿ) ತಕರಾರು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ದೃಷ್ಟಿಯಿಂದ ಕಂದಾಯ ಇಲಾಖೆಯ ಹೋಬಳಿಯಲ್ಲಿ ಕಾರ್ಯನಿರ್ವಹಿಸುವ ಉಪ ತಹಸೀಲ್ದಾರ್ ಹುದ್ದೆಯು ಶಿರಸ್ತೇದಾರ್ ಹುದ್ದೆಗೆ ಸಮಾನಾಂತರವಾಗಿರುವುದರಿಂದ ಸಂಬಂಧಪಟ್ಟ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಉಪ ತಹಸೀಲ್ದಾರ್ ರವರು ತಕರಾರು ಪ್ರಕರಣಗಳನ್ನುಇತ್ಯರ್ಥಪಡಿಸಲು ಹಾಗೂ ಕಸಬಾ ಹೋಬಳಿಯಲ್ಲಿ ತಹಶೀಲ್ದಾರ್ ರವರು ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲು ಅಧಿಸೂಚನೆ ಹೊರಡಿಸಿರುತ್ತಾರೆ.

ಈ ಹಿನ್ನಲೆಯಲ್ಲಿ, ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶವಾಗುವಂತೆ, ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಉಪತಹಶೀಲ್ದಾರ್ ‌ರವರಿಗೆ ತಂತ್ರಾಂಶದಲ್ಲಿ ಲಾಗಿನ್ ಸೃಜಿಸಬೇಕಾಗಿದ್ದು, ಈ ಕುರಿತು ತಮ್ಮ ಅಧೀನದಲ್ಲಿ ಬರುವ ತಾಲ್ಲೂಕುಗಳ ಕಸಬಾ ಹೋಬಳಿಗಳನ್ನು ಹೊರತುಪಡಿಸಿ, ಉಳಿದ ಹೋಬಳಿಗಳ ಉಪತಹಶೀಲ್ದಾರರ ಮಾಹಿತಿಯನ್ನು ನೀಡಲು ಕಂದಾಯ ಇಲಾಖೆಯ ಭೂಮಾಪನ ಇಲಾಖೆ ಹಾಗೂ ಪದನಿಮಿತ್ತ ನಿರ್ದೇಶಕರು,ಭೂಮಿ & ಯುಪಿಓಆರ್, ಬೆಂಗಳೂರು. ಅವರಿಂದ ಆದೇಶಿಸಲಾಗಿದೆ.

Related News

spot_img

Revenue Alerts

spot_img

News

spot_img