24.2 C
Bengaluru
Friday, September 20, 2024

Republic Day 2024:ಇಂದು ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ

#Republic Day 2024 #Today # 75th Republic Day #celebration # country

ಬೆಂಗಳೂರು;ರಾಷ್ಟ್ರ ರಾಜಧಾನಿ ನವದೆಹಲಿ 75ನೇ ಗಣರಾಜ್ಯೋತ್ಸವವನ್ನು(Republic day) ಆಚರಿಸಲು ಸಜ್ಜಾಗಿದೆ. ಪ್ರಧಾನಿ ಮೋದಿ ಅವರು ಬೆಳಗ್ಗೆ 9:30ಕ್ಕೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್(Emmanuel Macron) ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಕರ್ತವ್ಯಪಥದಲ್ಲಿ 90 ನಿಮಿಷಗಳ ಕಾಲ ಮೆರವಣಿಗೆ ನಡೆಯಲಿದೆ. ಮೊದಲ ಬಾರಿಗೆ ಮೂರು ಪಡೆಗಳ ಮಹಿಳಾ ಅಧಿಕಾರಿಗಳು ಈ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ.ರಾಷ್ಟ್ರಪತಿ ದೌಪದಿ ಮುರ್ಮು ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಬಾರಿ 90 ಸದಸ್ಯರ ಫ್ರೆಂಚ್ ಪಡೆ ಪರೇಡ್‌ನಲ್ಲಿ ಭಾಗವಹಿಸುತ್ತಿದೆ. ನಾರಿಶಕ್ತಿ ಹೆಸರಿನಲ್ಲಿ 260 ಮಹಿಳಾ ಸೈನಿಕರು ಸಹ ತಮ್ಮ ಸಾಹಸವನ್ನು ಪ್ರದರ್ಶನ ಮಾಡಲಿದ್ದಾರೆ.ಈ ವರ್ಷದ ಗಣರಾಜ್ಯೋತ್ಸವದ ಥೀಮ್ ‘ವೀಕ್ಷಿತ್ ಭಾರತ್’ ಮತ್ತು ‘ಭಾರತ ಲೋಕತಂತ್ರ ಕಿ ಮಾತೃಕಾ’, ಇದು ದೇಶದ ಆಕಾಂಕ್ಷೆಗಳನ್ನು ಮತ್ತು ಪ್ರಜಾಪ್ರಭುತ್ವದ ಪೋಷಕನ ಪಾತ್ರವನ್ನು ಸಂಕೇತಿಸುತ್ತದೆ.‘ಭಾರತವು ನಿಜವಾಗಿಯೂ ಪ್ರಜಾಪ್ರಭುತ್ವದ ತಾಯಿ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯಗಳಿಗೆ ಅನುಗುಣವಾಗಿ ಥೀಮ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಪುನರುಚ್ಚರಿಸಿದರು.

ಬೆಳಗ್ಗೆ 10.30ಕ್ಕೆ ಆರಂಭವಾಗುವ ಮೆರವಣಿಗೆ ಸುಮಾರು 90 ನಿಮಿಷಗಳ ಕಾಲ ಮುಂದುವರಿಯಲಿದೆ.“ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳೆಯರ ಅತ್ಯುತ್ತಮ ಪ್ರಾತಿನಿಧ್ಯವನ್ನು ಕಾಣಬಹುದು” ಎಂದು ರಕ್ಷಣಾ ಕಾರ್ಯದರ್ಶಿ ಹೇಳಿದರು.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪ್ರಮುಖ ದಿನವಾಗಿದೆ. 40 ವರ್ಷದ ಬಳಿಕ ರಾಷ್ಟ್ರಪತಿಗಳು ಸಮಾರಂಭಕ್ಕೆ ಸಾರೋಟಿನಲ್ಲಿ ಬರಲಿದ್ದಾರೆ. ಅವರು ಕರ್ತವ್ಯ ಪಥದಲ್ಲಿ ಸಾರೋಟಿನಲ್ಲಿ ಸಾಗಲಿದ್ದಾರೆ,ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಫ್ರೆಂಚ್‌ ವಿದೇಶಿ ಪಡೆ ಭಾಗಿಯಾಗಲಿರುವುದು ಮತ್ತೊಂದು ವಿಶೇಷವಾಗಿದೆ. ಕ್ಯಾಪ್ಟನ್ ಖೌರ್ಡಾ(Captain Khourda) ನೇತೃತ್ವದಲ್ಲಿ ಫ್ರೆಂಚ್‌ ಸೇನಾ ಬ್ಯಾಂಡ್‌ ಭಾಗಿಯಾಗಲಿದೆ. 30 ಮಂದಿ ಸಂಗೀತಗಾರರಿಂದ ರೆಜಿಮೆಂಟ್‌ ಗೀತೆ ಗಾಯನ ನಡೆಯಲಿದೆ. ಫ್ರಾನ್ಸ್‌ ಸೇನೆಯ ‘2ನೇ ಇನ್‌ಫ್ಯಾಂಟ್ರಿ’ ತುಕಡಿ ಪಥಸಂಚಲನ ನಡೆಸಲಿದ್ದು, ಕ್ಯಾಪ್ಟನ್ ನೋಯೆಲ್‌ ನೇತೃತ್ವದಲ್ಲಿ 90 ಮಂದಿ ಯೋಧರು ಭಾಗಿಯಾಗಲಿದ್ದಾರೆ.

Related News

spot_img

Revenue Alerts

spot_img

News

spot_img