25.5 C
Bengaluru
Saturday, September 21, 2024

2,000 ನೋಟಿನ ಬಗ್ಗೆ RBI ಮಹತ್ವದ ನಿರ್ಧಾರ ಅಕ್ಟೋಬರ್ 7ರವರೆಗೆ ನೋಟು ಬದಲಾವಣೆಗೆ ಅವಕಾಶ

ನವದೆಹಲಿ;ಆರ್‌ಬಿಐ(RBI) ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, 2,000 ಮುಖಬೆಲೆಯ ನೋಟುಗಳ ವಿನಿಮಯದ ಗಡುವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಅಕ್ಟೋಬರ್ 7 ರವರೆಗೆ ನೋಟು ಬದಲಾಯಿಸಲು ಅವಕಾಶ ನೀಡಿರುವುದಾಗಿ ಪ್ರಕಟಿಸಿದೆ. ಈ ಹಿಂದೆ ಹೇಳಿದಂತೆ ನೋಟು ವಿನಿಮಯಕ್ಕೆ ಇಂದು ಕೊನೆಯ ದಿನವಾಗಿತ್ತು. ಅಲ್ಲದೆ, ಈವರೆಗೆ 96ರಷ್ಟು ಮಾತ್ರ ನೋಟುಗಳು ತಲುಪಿದ್ದು, ಉಳಿದ ನೋಟುಗಳ ವಿನಿಮಯಕ್ಕೆ ಅವಧಿ ವಿಸ್ತರಿಸಿ RBI ಪ್ರಕಟಣೆ ಹೊರಡಿಸಿದೆ. ಮೇ.19ರಂದು 72,000 ನೋಟುಗಳನ್ನು ಹಿಂಪಡೆದುಕೊಳ್ಳುವುದಾಗಿ ಆದೇಶಿಸಿತ್ತು.ಜನರು ಆರ್ಬಿಐನ(RBI) 19 ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳನ್ನ ವಿನಿಮಯ ಮಾಡಿಕೊಳ್ಳಬಹುದು. ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕ RBIನ “ವಿತರಣಾ ಕಚೇರಿಗಳಿಗೆ” ಅಂಚೆ ಮೂಲಕ ಕಳುಹಿಸಬಹುದು ಎಂದು ಆರ್‌ಬಿಐ ಹೇಳಿದೆ.

Related News

spot_img

Revenue Alerts

spot_img

News

spot_img