ನವದೆಹಲಿ;ಬ್ಯಾಂಕ್‌ಗಳಿಗೆ ಆರ್‌ಬಿಐ(RBI) ಮಹತ್ವದ ಆದೇಶ ಜಾರಿ ಮಾಡಿದೆ. ವಾರ್ಷಿಕ ಲೆಕ್ಕಪತ್ರಗಳ(Annual accounts) ಕ್ಲೋಸಿಂಗ್ ದಿನವಾಗಿರುವ ಕಾರಣಕ್ಕೆ ಮಾರ್ಚ್ 31ರಂದು (Sunday) ಸರ್ಕಾರಿ ಇಲಾಖೆಗಳ ಖಾತೆಗಳನ್ನು ನಿರ್ವಹಿಸಲು ಬ್ಯಾಂಕ್ ರಜೆಯನ್ನು ರದ್ದುಗೊಳಿಸಿದೆ. ದೇಶದ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳ ಶಾಖೆಗಳನ್ನು ತೆರೆದಿರಬೇಕು ಎಂದು ಸ್ಪಷ್ಟಪಡಿಸಿದೆ. 2023-24ರ ಹಣಕಾಸು ವರ್ಷಕ್ಕೆ ಸರ್ಕಾರದ ಹಣಕಾಸು ವ್ಯವಹಾರಗಳನ್ನು ಪೂರ್ಣಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್(RBI) ಈ ನಿರ್ಧಾರವನ್ನು ತೆಗೆದುಕೊಂಡಿದೆ.ಶುಕ್ರವಾರ 29ರಿಂದ ಭಾನುವಾರ 31ರವರೆಗೆ 3 ದಿನಗಳ ಸುದೀರ್ಘ ರಜೆ ಇತ್ತು. ಇದರಿಂದ ಇಲಾಖೆಯ ಹಲವು ಕೆಲಸಗಳು ಹಣಕಾಸು ವರ್ಷಾಂತ್ಯದಲ್ಲಿ ಸ್ಥಗಿತಗೊಳ್ಳುತ್ತವೆ. 2023-24ರ ಆರ್ಥಿಕ ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಈ ಕಾರಣಕ್ಕಾಗಿ, ಮಾರ್ಚ್ 29, 30 ಮತ್ತು 31 ರಂದು ದೇಶಾದ್ಯಂತ ಐಟಿ ಕಚೇರಿಗಳು ತೆರೆದಿರುತ್ತವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.ಆರ್ಥಿಕ ವರ್ಷದ ಕೊನೆಯ ವಾರದಲ್ಲಿ ಕಾಮಗಾರಿ ಮೇಲೆ ಯಾವುದೇ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಈ ಅವಧಿಯಲ್ಲಿ ಷೇರು ಮಾರುಕಟ್ಟೆಗಳು ಬಂದ್ ಇರಲಿವೆ. ಗ್ರಾಹಕರಿಗೆ ಈ ಅವಧಿಯಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಚೆಕ್‌ಗಳನ್ನು ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮಾಡಬಹುದು. ಇದರೊಂದಿಗೆ ಆನ್‌ಲೈನ್ ಬ್ಯಾಂಕಿಂಗ್ ಕೂಡ ಪ್ರಸ್ತುತ ಮುಂದುವರಿಯಲಿದೆ. ಮಾರ್ಚ್ 31 ರ ನಂತರ ಅಂದರೆ ಏಪ್ರಿಲ್ 1 ಮತ್ತು 2 ರ ನಂತರ ಸತತ 2 ದಿನಗಳವರೆಗೆ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.
RBI : ಮಾರ್ಚ್ 31 ರಂದು ಎಲ್ಲಾ ಬ್ಯಾಂಕ್‌ಗಳ ಶಾಖೆಗಳನ್ನು ತೆರೆದಿರಲು ಆರ್‌ಬಿಐ ಮಹತ್ವದ ಆದೇಶ
by RF Desk