25.5 C
Bengaluru
Friday, September 20, 2024

ಹರಿದ ನೋಟಿನ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಆರ್ ಬಐ

ಬೆಂಗಳೂರು, ಆ. 12 : ಈಗ ಯಾರು ಕೈನಲ್ಲಿ ಹಣವನ್ನು ಹಿಡಿದು ಓಡಾಡುವುದಿಲ್ಲ. ಹಣ ಬೇಕೆಂದರೆ, ಡೆಬಿಟ್ ಕಾರ್ಡ್ ಬಳಸುತ್ತಾರೆ. ಏನಾದರೂ ಖರೀದಿಸಿದರೆ, ಮೊಬೈಲ್ ನಲ್ಲಿ ವಾಲೆಟ್ ಗಳ ಮೂಲಕವೇ ಹಣವನ್ನು ಪಾವತಿಸುತ್ತಾರೆ. ಇಲ್ಲವೇ ಕ್ಯಾಶ್ ನ ಅವಶ್ಯಕತೆ ಇದ್ದರೆ ಎಟಿಎಂಗೆ ತೆರಳಿ ಡೆಬಿಟ್ ಕಾರ್ಡ್ ಮೂಲಕ ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ. ಯಾರೂ ಕೈನಲ್ಲಿ ಹಣ ಹಿಡಿದು ಸುರಕ್ಷತೆ ಬಗ್ಗೆ ಯೋಚಿಸುವ ಗೋಜಿಗೇ ಹೋಗಲ್ಲ. ಒಮ್ಮೊಮ್ಮೆ ಈ ಎಟಿಎಂಗಳು ಕೂಡ ಕೈ ಕೊಡುತ್ತವೆ. ಎಟಿಎಂನಲ್ಲಿ ಹಣ ಖಾಲಿಯಾದರೆ, ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಆಗ ಬೇರೆ ಎಟಿಎಂಗಳನ್ನು ಹುಡುಕಬೇಕಾಗುತ್ತದೆ.

ಇನ್ನೂ ಕೆಲವೊಮ್ಮೆ ಎಟಿಎಂಗಳಲ್ಲಿ ಅರಿದ ನೋಟುಗಳು ಬರುತ್ತವೆ. ಈ ಹಿಂದೆ ಖೋಟಾ ನೋಟು ಎಟಿಎಂನಲ್ಲಿ ಸಿಕ್ಕ ಉದಾಹರಣೆಗಳಿಗೇನು ಕಡಿಮೆ ಇಲ್ಲ. ಹಾಗಿದ್ದ ಮೇಲೆ, ಅರಿದ ನೋಟುಗಳು ಬರುವುದರಲ್ಲಿ ಆಶ್ಚರ್ಯವೂ ಇಲ್ಲ. ನೀವೇನಾದರೂ ಎಟಿಎಂನಲ್ಲಿ ಹಣ ಡ್ರಾ ಮಾಡಬೇಕು ಎಂದುಕೊಂಡಿದ್ದು, ಆಗ ಅದರಲ್ಲಿ ಅರಿದ ನೋಡು ದೊರಕಿದೆ ಚಿಂತಿಸಬೇಡಿ. ಈ ಹಣವನ್ನು ಬದಲಾಯಿಸಿಕೊಳ್ಳುವುದು ತುಂಬಾನೇ ಸುಲಭ. ಯಾರೂ ಅರಿದ ನೋಟು, ಹಾಳಾದ ನೋಟುಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳುವುದು ಸುಲಭದ ಕೆಲಸ.

ಬ್ಯಾಂಕ್ ನಲ್ಲಿ ಹಣ ವಿನಿಮಯ ಹೇಗೆ..?
ಎಟಿಎಂ ನಿಂದ ಹಣ ಡ್ರಾ ಮಾಡಿದಾಗ ಕೊಳಕಾದ ನೋಟು, ಅರಿದ ನೋಟುಗಳನ್ನು ಯಾವುದೇ ಬ್ಯಾಂಕಿಗೆ ಹೋಗಿ ವಿನಿಮಯ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಬ್ಯಾಂಕಿನಲ್ಲಿ ಪ್ರತ್ಯೇಕವಾಗಿ ಯಾವ ಅರ್ಜಿಯನ್ನೂ ತುಂಬುವ ಅಗತ್ಯವಿಲ್ಲ. ಹಾಳಾಗಿರುವ ನೋಟುಗಳನ್ನು ಖಾಸಗಿ ಬ್ಯಾಂಕ್ನ ಯಾವುದೇ ಕರೆನ್ಸಿ ಚೆಸ್ಟ್ ಶಾಖೆಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಆರ್ʼಬಿಐ ವಿತರಣಾ ಕಚೇರಿಯಲ್ಲೂ ನೋಟನ್ನು ಬದಲಾಯಿಸಿಕೊಳ್ಳಬಹುದು.

 

ಟ್ರಿಪಲ್ ಲಾಕ್ ರೆಸೆಪ್ಟಕಲ್ ಕವರ್ಸ್
ಹರಿದ ನೋಟುಗಳನ್ನು ಬದಲಾಯಿಸಿಕೊಳ್ಳಲು ಆರ್ʼಬಿಐನಲ್ಲಿ ವ್ಯವಸ್ಥೆ ಇದೆ. ಟ್ರಿಪಲ್ ಲಾಕ್ ರೆಸೆಪ್ಟಕಲ್ ಕವರ್ಸ್ ಸೌಲಭ್ಯದ ಮೂಲಕವೂ ನೀವು ನಿಮ್ಮ ಅರಿದ ನೋಟನ್ನು ವಿನಿಮಯ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಆರ್ʼಬಿಐ ನಲ್ಲಿ ವಿಚಾರಣಾ ಕೌಂಟರ್ ಗೆ ತೆರಳಬೇಕು. ಇಲ್ಲಿ ಟಿಎಲ್ʼಆರ್ ಕವರ್ ಪಡೆಯಬೇಕು. ಅದೊರಳಗೆ ಅರಿದ ನೋಟುಗಳನ್ನು ಹಾಕಬೇಕು. ಬಳಿಕ ನಿಮ್ಮ ಹೆಸರು, ವಿಳಾಸ, ಹಾಗೂ ಹಣ ಜಮೆ ಮಾಡಿದ ಮೊತ್ತದ ಬಗ್ಗೆ ವಿವರವಾಗಿ ಬರೆಯಬೇಕು. ಕವರ್ ಮೇಲ್ಭಾಗದಲ್ಲಿ ಎಲ್ಲಾ ವಿವರಗಳನ್ನು ಬರೆದಿರಬೇಕು. ಬಳಿಕ ಟ್ರಿಪಲ್ ಲಾಕ್ ರೆಸೆಪ್ಟಕಲ್ ಕವರ್ಸ್ ಬಾಕ್ಸ್ ನಲ್ಲಿ ಕವರ್ ಅನ್ನು ಹಾಕಬೇಕು. ಅದಕ್ಕೆ ನಿಮಗೆ ಟೋಕನ್ ನೀಡಲಾಗುತ್ತದೆ. ಜೊತೆಗೆ ಡ್ರಾಫ್ಟ್, ಪೇ ಆರ್ಡರ್ ಮೂಲಕ ನಿಮ್ಮ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಹೀಗೆ ಹಣ ವಿನಿಮಯ ಮಾಡಿಕೊಳ್ಳಲು ಕೆಲ ಷರತ್ತುಗಳು ಕೂಡ ಇವೆ. ನೋಟುಗಳು ತುಂಡಾಗಿದ್ದರೆ, ಕೊಳಕಾಗಿದ್ದರೆ, ಮಣ್ಣಾಗಿದ್ದರೆ, ಬಳಸಲಾಗದಂತೆ ಮಡಿಚಿಕೊಮಡು ಹಾಳಾಗಿದ್ದರೆ, ಕಲೆಗಳಾಗಿದ್ದರೆ ಅಂತಹ ನೋಟುಗಳನ್ನು ಬ್ಯಾಂಕ್ ವಿನಿಮಯ ಮಾಡಿಕೊಳ್ಳುತ್ತದೆ. ಆದರೆ, ನೋಟಿನಲ್ಲಿರುವ ಸಂಖ್ಯೆಗಳು ಅರಿದಿದ್ದರೆ, ಅಂತಹ ನೋಟುಗಳನ್ನು ಯಾವ ಬ್ಯಾಂಕ್ ಕೂಡ ವಿನಿಮಯ ಮಾಡಿಕೊಳ್ಳುವುದಿಲ್ಲ. ಆದರೆ, ಇಂತಹ ನೋಟುಗಳನ್ನು ಆರ್ʼಬಿಐ ನಲ್ಲಿ ಮಾತ್ರವೇ ವಿನಿಮಯ ಮಾಡಿಕೊಳ್ಳಬಹುದು. ನೋಟಿನ ನಂಬರ್, ಲಾಂಛನ, ಸಹಿ ಜಾಗ, ಅಶೋಕ ಸ್ತಂಭ, ಮಹಾತ್ಮಾ ಗಾಂಧೀಜಿ ಫೋಟೋಗಳಿರುವಲ್ಲಿ ಹಾಳಾಗಿದ್ದರೆ, ಇವುಗಳನ್ನು ಅರಿದ ನೋಟುಗಳು ಎಂದು ಪರಿಗಣಿಸುತ್ತದೆ.

Related News

spot_img

Revenue Alerts

spot_img

News

spot_img