22.9 C
Bengaluru
Friday, April 12, 2024

2024ರಿಂದ ಡಿಎಲ್‌ ಹಾಗೂ ಆರ್‌ಸಿ ಸ್ಮಾರ್ಟ್‌ ಕಾರ್ಡ್‌ಗಳಿಗೆ ಕ್ಯು ಆರ್‌ ಕೋಡ್‌

#QR code # DL ​​and # RC smart cards # Februvary2024

ಬೆಂಗಳೂರು;ಮುಂದಿನ ವರ್ಷದ ಫೆಬ್ರವರಿಯಿಂದ ರಾಜ್ಯದಲ್ಲಿ ಏಕರೂಪದ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರ(Vehicle registration certificate) ಜಾರಿಯಾಗಲಿದೆ.ಫೆಬ್ರವರಿಯಿಂದ DL ಮತ್ತು RC ಕಾರ್ಡ್‌ಗಳಲ್ಲಿ ಕ್ಯೂ ಆರ್‌ ಕೋಡ್‌(QR code) ಕೂಡಾ ಇರಲಿದೆ.ಈಗಾಗಲೇ ನಿಮ್ಮ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳಲ್ಲಿ ಚಿಪ್ ಇದೆ. ಇನ್ಮುಂದೆ ಹೊಸ ಡಿಎಲ್‌ಗಳಲ್ಲಿ ಕ್ಯೂಆರ್ ಕೋಡ್ ಕೂಡಾ ಇರಲಿದೆ. ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ,ಸ್ಮಾರ್ಟ್‌ಕಾರ್ಡ್‌ನಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಡಿಎಲ್ ಹೊಂದಿರುವ ಪೂರ್ಣ ಮಾಹಿತಿ ಸಿಗಲಿದೆ. ಸಂಚಾರದ ಅವಧಿಯಲ್ಲಿ ಪೊಲೀಸರು ಅಥವಾ ಸಾರಿಗೆ ಇಲಾಖೆಯ ಸಿಬ್ಬಂದಿ ಸುಲಭವಾಗಿ ತಪಾಸಣೆ ಮಾಡಬಹುದಾಗಿದೆ.ಹೊಸ ಚಾಲನಾ ಪರವಾನಗಿ, ವಾಹನಗಳ ನೋಂದಣಿ ಪ್ರಮಾಣಪತ್ರ ಪಡೆಯುವವರಿಗೆ ಏಕರೂಪದ ಸ್ಕಾರ್ಟ್‌ ಕಾರ್ಡ್ ನೀಡಲಾಗುವುದು. ಹಳೇ ಡಿಎಲ್‌ಗಳನ್ನು ನವೀಕರಣ ವೇಳೆ ಬದಲಾಯಿಸಲಾಗುವುದು ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.ದೇಶದಲ್ಲಿ ಒಂದೇ ರೀತಿಯ DL ಮತ್ತು RC ಕಾರ್ಡ್‌ ಇರಬೇಕು ಎಂದು 2019ರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿತ್ತು.ಖಾಸಗಿ ಕಂಪನಿಯೊಂದು 2009ರ ಗುತ್ತಿಗೆ ಪಡೆದುಕೊಂಡಿದ್ದು, 2024 ಫೆಬ್ರವರಿವರೆಗೆ ಡಿಎಲ್(DL) ಮತ್ತು ಆರ್ ಸಿ ಸ್ಮಾರ್ಟ್ ಕಾರ್ಡ್(RC smartcard) ಗಳನ್ನು ವಿತರಿಸಲಿದೆ. ನಂತರ ಹೊಸದಾಗಿ ನೀಡುವ ಕಾರ್ಡ್ ಗಳಲ್ಲಿ ಕ್ಯುಆರ್ ಕೋಡ್ ಅಳವಡಿಸಿ ವಿತರಿಸಲು ಇಲಾಖೆ ನಿರ್ಧರಿಸಿದೆ.

 

Related News

spot_img

Revenue Alerts

spot_img

News

spot_img