22.6 C
Bengaluru
Saturday, July 27, 2024

Public Provident Fund:ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಸಿಗಲಿವೆ ಅನೇಕ ಪ್ರಯೋಜನಗಳು

ಬೆಂಗಳೂರು;ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅನ್ನು ಅತ್ಯುತ್ತಮ ತೆರಿಗೆ ಉಳಿಸುವ ಸಾಧನವೆಂದು ಪರಿಗಣಿಸಲಾಗಿದೆ.ಸಾರ್ವಜನಿಕ ಭವಿಷ್ಯ ನಿಧಿ (PPF) ಕೇಂದ್ರ ಸರ್ಕಾರದಿಂದ ಬೆಂಬಲಿತವಾದ ತೆರಿಗೆಮುಕ್ತ (tax free)ಉಳಿತಾಯ ಯೋಜನೆಗಳಲ್ಲಿ(Savings Plan) ಪ್ರಮುಖವಾದುದು. ನೀವೂ ಸಹ ಪಿಪಿಎಫ್‌(PPF)ನಲ್ಲಿ ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದರೆ ಮತ್ತು ಈಗ ಖಾತೆಯ 15 ವರ್ಷಗಳು ಪೂರ್ಣಗೊಂಡಿದ್ದರೆ ಅಂದರೆ ಖಾತೆಯು ಮೆಚ್ಯೂರ್(mature) ಆಗಿದ್ದರೆ ಒಂದು ಉತ್ತಮ ಮೊತ್ತ ನಿಮ್ಮ ಬಳಿ ಇರುತ್ತದೆ. ಈಗ ಒಂದು ದೊಡ್ಡ ಮೊತ್ತದಲ್ಲಿ (Money) ಏನು ಮಾಡಬೇಕು ಎಂಬುದು ಎಲ್ಲರ ಪ್ರಶ್ನೆ,ಈ ಯೋಜನೆಗಳಲ್ಲಿ ಹೂಡಿಕೆ(Investment) ಮಾಡುವ ಮೂಲಕ ಮೂಲಕ ಗೃಹಿಣಿಯ ಲಕ್ಷ ಗಳಿಸುವುದು ಸಾಧ್ಯವಾಗುತ್ತದೆ. ಮಹಿಳೆಯರು ಈ ಯೋಜನೆಯಲ್ಲಿ ಕೇವಲ 500 ಅಥವಾ 1000 ರೂ.ಗಳಿಂದ ಹೂಡಿಕೆ ಪ್ರಾರಂಭಿಸಿದರೂ ಸಾಕು, ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸುವುದು ಸಾಧ್ಯವಾಗುತ್ತದೆ.ಸಾರ್ವಜನಿಕ ಭವಿಷ್ಯ ನಿಧಿ ಖಾತೆಯು 15 ವರ್ಷಗಳ ಕಾಲ ಹೂಡಿಕೆ ಮಾಡುವ ಸಾಧನವಾಗಿದೆ. ನೀವು ಪಿಪಿಎಫ್ ಖಾತೆಗಳನ್ನು ಬ್ಯಾಂಕುಗಳು ಅಥವಾ ಅಂಚೆ ಕಚೇರಿಗಳು ಎಲ್ಲಿ ಬೇಕಾದರೂ ತೆರೆಯಬಹುದು.

ಈ ಯೋಜನೆಯಲ್ಲಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ(Investment) ಮಾಡಬಹುದು. ಇದರಲ್ಲಿ ಮಾಡುವ ಹೂಡಿಕೆ ಮೇಲೆ ಸರ್ಕಾರವು ಶೇಕಡಾ 7.1 ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ(Public Provident Fund Scheme) 15 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಬೇಕು.ಆಗ ಸಂಪೂರ್ಣ ಹಣವನ್ನು ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ.15 ವರ್ಷಗಳವರೆಗೆ ಪ್ರತಿ ತಿಂಗಳು 1000 ರೂಗಳನ್ನು ಠೇವಣಿ(Deposit) ಮಾಡಿದರೆ, ಒಂದು ವರ್ಷದಲ್ಲಿ 12,000 ಮತ್ತು 15 ವರ್ಷಗಳಲ್ಲಿ 1,80,000 ಠೇವಣಿ ಮಾಡಿದಂತೆ ಆಗುತ್ತದೆ. ಇದರ ಬಡ್ಡಿಯಾಗಿ 1,45,457 ರೂಪಾಯಿಗಳನ್ನು ಪಡೆಯಬಹುದು. ಅಂದರೆ ಮೆಚ್ಯೂರಿಟಿ(Meturity) ಅವಧಿಯಲ್ಲಿ ಒಟ್ಟು 3,25,457 ರೂಪಾಯಿಗಳು ನಿಮ್ಮ ಕೈ ಸೇರುತ್ತದೆ.ಆನ್‌ಲೈನ್ ಮೂಲಕ ಪಿಪಿಎಫ್(PPF) ಖಾತೆಯನ್ನು ತೆರೆಯಲು, ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ(postoffice) ಉಳಿತಾಯ ಖಾತೆಯನ್ನು ಹೊಂದಿರಬೇಕು ಇದರೊಂದಿಗೆ ನೀವು ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಸಂಪರ್ಕ ಹೊಂದಿರಬೇಕು.ನೀವು ಪಿಪಿಎಫ್‌ನಲ್ಲಿ ಸಹ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳ 5ರೊಳಗೆ ಹಣವನ್ನು ಠೇವಣಿ ಮಾಡಬೇಕು. ಏಕೆಂದರೆ ಪ್ರತಿ ತಿಂಗಳು 5ನೇ ತಾರೀಖಿನಿಂದ ಬಡ್ಡಿಯ ಲೆಕ್ಕಾಚಾರ ಮಾಡಲಾಗುತ್ತದೆ.

Related News

spot_img

Revenue Alerts

spot_img

News

spot_img