24.8 C
Bengaluru
Sunday, May 19, 2024

ಲಂಚ ಸ್ವೀಕರಿಸುವ ವೇಳೆ ಪಿಎಸ್ ಐ ಮತ್ತು ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣೆಯ ಪಿಎಸ್ಐ ಶೀಲಾ ನ್ಯಾಮನ್ ಹಾಗು ಕಾನ್​ಸ್ಟೆಬಲ್ ಪರಶುರಾಮರೆಡ್ಡಿ ಲೋಕಾಯುಕ್ತ ಬಲೆಗೆ ಬಿದ್ದವರು. ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆ ಲಾರಿಗಳಿಗೆ ಅನುಮತಿ ನೀಡಲು ದೂರುದಾರ ಇರ್ಷಾದ್​ ಪಟೇಲ್‌ನಿಂದ 21 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಸಾಗಾಣಿಕೆಗೆ ಅನುಮತಿ‌ ಪಡೆದಿದ್ದ ಇರ್ಷಾದ್​ ಮೂರು ಲಾರಿ ಮುಖಾಂತರ ಮರಳು ಸಾಗಾಣಿಕೆ ನಡೆಸುತ್ತಿದ್ದ. ಪ್ರತಿ ಲಾರಿಗೆ ಪ್ರತಿ ತಿಂಗಳು 7 ಸಾವಿರ ರೂ. ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು.ಈ ವಿಷಯಕ್ಕೆ ಕುರಿತು ಲೋಕಾಯುಕ್ತಕ್ಕೆ ಇರ್ಷಾದ ಪಟೇಲ್ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳು ದೂರಿನ ಅನ್ವಯ ತನಿಖೆ ನಡೆಸಿದ್ದಾರೆ,ಇನ್ನುಲಂಚ ಪಡೆಯುವಾಗಲೇ ಪಿಎಸ್​ಐ ಮತ್ತು ಕಾನ್​ಸ್ಟೆಬಲ್​ನನ್ನುಲೋಕಾಯುಕ್ತ ಪೊಲೀಸರು ಬಂಧಿಸಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Related News

spot_img

Revenue Alerts

spot_img

News

spot_img