ನವದೆಹಲಿ;ಕರ್ನಾಟಕ ಹೈಕೋರ್ಟ್(Highcourt) ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ(PB varale) ಅವರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಸುಪ್ರೀಂ ಕೋರ್ಟ್(Supreme court) ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಿಎಸ್ ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ವರಾಳೆ ಅವರು ದೇಶದಲ್ಲಿಯೇ ಇರುವ ಮುಖ್ಯ ನ್ಯಾಯಮೂರ್ತಿಗಳಲ್ಲಿಯೇ ಪರಿಶಿಷ್ಟ ಜಾತಿಯ ಏಕೈಕ ಮುಖ್ಯ ಹೈಕೋರ್ಟ್‌ನ್ಯಾಯಮೂರ್ತಿಗಳಾಗಿದ್ದಾರೆ.ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರು 2015ರಿಂದ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದು, 2024ರ ಫೆಬ್ರವರಿ 24ರಂದು ನಿವೃತ್ತರಾಗಲಿದ್ದಾರೆ. ನ್ಯಾಯಾಧೀಶರಾಗಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಭಾಗದಲ್ಲಿ ಸಾಕಷ್ಟು ಅನುಭವವನ್ನು ನ್ಯಾ. ದಿನೇಶ್ ಕುಮಾರ್ ಗಳಿಸಿದ್ದಾರೆ. ಫೆಬ್ರವರಿ 24, 2024 ರಂದು ನ್ಯಾ. ದಿನೇಶ್ ಕುಮಾರ್ ನಿವೃತ್ತರಾಗಲಿದ್ದು, ಮುಖ್ಯ ನ್ಯಾಯಮೂರ್ತಿಯಾಗಿ ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅಧಿಕಾರಾವಧಿಯನ್ನು ಹೊಂದಿರುತ್ತಾರೆ.2015 ರಲ್ಲಿ ನ್ಯಾಯಪೀಠಕ್ಕೆ ಬಡ್ತಿ ಪಡೆಯುವ ಮೊದಲು, ನ್ಯಾಯಮೂರ್ತಿ ದಿನೇಶಕುಮಾರ ಅವರು ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು ಮತ್ತು ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಹಾಜರಾಗಿದ್ದರು