ಲಕ್ನೋ;ಅಯೋಧ್ಯಾದಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಹಲವು ಯೋಜನೆಗಳ ಲೋಕಾರ್ಪಣೆ ಶನಿವಾರ (ಡಿ.30) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, 15,700 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ ಮಂದಿರ ಮಾದರಿಯ ವಿಮಾನ ನಿಲ್ದಾಣ, ನವೀಕರಣಗೊಳಿಸಲಾಗಿರುವ ರೈಲು ನಿಲ್ದಾಣ, ರಾಮಪಥ, ಭಕ್ತಿಪಥ ಹಾಗೂ 6 ವಂದೇ ಭಾರತ್ & 2 ಅಮೃತ ಭಾರತ್ ರೈಲುಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲುಗಳ ಪೈಕಿ 2 ವಂದೇ ಭಾರತ್ ರೈಲು ಮತ್ತು 1 ಅಮೃತ್ ಭಾರತ್ ರೈಲು ಕರ್ನಾಟಕದಲ್ಲೂ ಹಾದುಹೋಗಲಿವೆ.ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಎರಡು ಹಾಗೂ ಹೊಸ ಮಾದರಿಯ ಒಂದು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ವಂದೇ ಭಾರತ್ ರೈಲುಗಳು ಮಂಗಳೂರು-ಮಡ್ತಾಂವ್ ಹಾಗೂ ಬೆಂಗಳೂರು-ಕೊಯಮತ್ತೂರು ನಡುವೆ ಹೊಸ ಮತ್ತು ಅಮೃತ ಭಾರತ್ ರೈಲು ಮಾಲಾ-ಬೆಂಗಳೂರು ನಡುವೆ ಸಂಚರಿಸಲಿವೆ. ಎರಡು ರೈಲಿನ ಪೈಕಿ ರಾಜ್ಯಕ್ಕೆ 1 ರೈಲು ಲಭಿಸಲಿದೆ.ಭದ್ರತೆಗಾಗಿ ಮೂವರು ಡಿಐಜಿ, 17 ಎಸ್ಪಿ, 38 ಹೆಚ್ಚುವರಿ ಎಸ್ಪಿ, 82 ಡೆಪ್ಯುಟಿ ಎಸ್ಪಿ, 90 ಇನ್ಸ್‌ಪೆಕ್ಟರ್, 325 ಸಬ್ ಇನ್‌ಸ್ಪೆಕ್ಟರ್, 35 ಮಹಿಳಾ ಸಬ್ ಇನ್‌ಸ್ಪೆಕ್ಟರ್, 2000 ಕಾನ್‌ಸ್ಟೆಬಲ್, 14 ಕಂಪನಿ ಪಿಎಸಿ, 6 ಕಂಪನಿ ಸಿಆರ್‌ಪಿಎಫ್‌ಗಳನ್ನು ನಿಯೋಜಿಸಲಾಗುವುದು ಎಂದು ಮೊರ್ಡಿಯಾ ತಿಳಿಸಿದರು.ಪ್ರಧಾನಿ ರೈಲುಗಳಿಗೆ ಹಸಿರು ಬಾವುಟ ತೋರಿಸಲಿದ್ದಾರೆ. ನಂತರ ವಿಮಾನ ನಿಲ್ದಾಣದ ಮುಂದಿನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಅವರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ಅಯೋಧ್ಯೆಯ ಆಯುಕ್ತರು ತಿಳಿಸಿದ್ದಾರೆ.