ಬೆಂಗಳೂರು;ಕರ್ನಾಟಕ ಸರ್ಕಾರ ಆಡಳಿತ ಯಂತ್ರ ಚುರುಕುಗೊಳಿಸಲು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿದೆ. ಪ್ರಧಾನ ಕಾರ್ಯದರ್ಶಿ, ಕಾರ್ಯಕಾರಿ ನಿರ್ದೇಶಕ, ನಿರ್ದೇಶಕರು, ವಿಶೇಷ ಆಯುಕ್ತರು ಹೀಗೆ ಹಲವು ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಯನ್ನು ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಬುಧವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಮುನೀಶ್ ಮೌದ್ಗಿಲ್, ಪ್ರೀತಿ ಗೆಹ್ಲೋಟ್, ವಿನೋತ್ ಪ್ರಿಯ, ಸ್ನೇಹಲ್ ಆರ್. ಇಬ್ರಾಹಿಂ ಮೈಗೂರ್ ಸೇರಿ ಒಟ್ಟು 6 ಐಎಎಸ್ ಅಧಿಕಾರಿಗಳಿಗೆ ಈಗ ಇರುವ ಹುದ್ದೆಗಳ ಜೊತೆಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.ಮನೀಶ್ ಮೌದ್ಗಿಲ್ ಅವರು 1998 ರ ಬ್ಯಾಚ್ ಐಎಎಸ್ ಅಧಿಕಾರಿ, ಈ ಹಿಂದೆ ಸರ್ವೆ, ಸೆಟ್ಲ್ ಮೆಂಟ್ ಮತ್ತು ಭೂ ದಾಖಲೆಗಳ ಆಯುಕ್ತ ಸೇರಿದಂತೆ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಜೂನ್ 2008 ರಿಂದ ಜೂನ್ 2009 ರವರೆಗೆ ರಾಮನಗರದ ಜಿಲ್ಲಾಧಿಕಾರಿಯಾಗಿದ್ದರು.
6 ಐಎಎಸ್ ಅಧಿಕಾರಿಗಳಿಗೆ ಬಿಬಿಎಂಪಿಯಲ್ಲಿ ಹೆಚ್ಚುವರಿ ಜವಾಬ್ದಾರಿ
1.ಮುನೀಶ್ ಮೌದ್ಗಿಲ್-ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ)
2.ವಿನೋತ್ ಪ್ರಿಯಾ-ಬಿಬಿಎಂಪಿ ದಕ್ಷಿಣ ವಲಯ ಆಯುಕ್ತೆ
3.ಕರೀಗೌಡ-ಬಿಬಿಎಂಪಿ ಯಲಹಂಕ ವಲಯ ಆಯುಕ್ತ
4.ಆರ್.ಸ್ನೇಹಲ್-ಬಿಬಿಎಂಪಿ ಪೂರ್ವ ವಲಯ ಆಯುಕ್ತೆ
5.ಪ್ರೀತಿ ಗೆಹ್ಲೋಟ್-ಬಿಬಿಎಂಪಿ ದಾಸರಹಳ್ಳಿ ವಲಯ ಆಯುಕ್ತೆ
6.ಇಬ್ರಾಹಿಂ ಮೈಗೂರ್-ಬಿಬಿಎಂಪಿ ಮಹದೇವಪುರ ವಲಯ ಆಯುಕ್ತ