24.9 C
Bengaluru
Tuesday, June 25, 2024

ಹೈದರಾಬಾದ್‌ನಲ್ಲಿ ಸಚಿವ ಜಮೀರ್‌ ಅಹ್ಮದ್ ಖಾನ್ ತಂಗಿದ್ದ ಹೋಟೆಲ್‌ ಮೇಲೆ ಪೊಲೀಸ್‌ ದಾಳಿ

#Police attack # the hotel # Minister #Jamir was staying

ಹೈದರಾಬಾದ್;ಹೈದರಾಬಾದ್‌ನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅವರ ಆಪ್ತರು ತಂಗಿದ್ದ ಹೋಟೆಲ್ ಮೇಲೆ ತೆಲಂಗಾಣ(Telagana) ಪೊಲೀಸರು ದಾಳಿ ಮಾಡಿದ್ದಾರೆ.ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರು ಸಹ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಅದರಂತೆ ಸಚಿವ ಜಮೀರ್ ಅಹಮ್ಮದ್ ಖಾನ್ (zameer ahmed khan) ಮತ ಬೇಟೆ ನಡೆಸಿದ್ದಾರೆ.ಪ್ರಚಾರದ ವೇಳೆ ಅವರು ಹಣ ಹಂಚಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಜಮೀರ್ ಅಹಮ್ಮದ್ ಖಾನ್ ಉಳಿದುಕೊಂಡಿದ್ದ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ನಿನ್ನೆ(ನವೆಂಬರ್ 22) ತಡರಾತ್ರಿ ದಾಳಿಯಾಗಿದೆ. ತೀವ್ರ ಶೋಧ ನಡೆಸಿದ್ದಾರೆ. ಆದರೆ, ಹಣ ಸಿಗದೆ ಅವರು ವಾಪಸ್‌ ಹೋಗಿದ್ದಾರೆ ಎಂದು ವರದಿಯಾಗಿದೆ.ಹೈದರಾಬಾದ್‌ನಲ್ಲಿ ತಾವು ತಂಗಿದ್ದ ಹೋಟೆಲ್ ಮೇಲೆ ಪೊಲೀಸ್‌ ದಾಳಿ ನಡೆದ ಬಗ್ಗೆ ಸ್ವತಃ ಸಚಿವ ಜಮೀರ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ತಡರಾತ್ರಿ ದಾಳಿ ನಡೆಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.’ಬಿಜೆಪಿ ಮತ್ತು ಟಿಆರ್‌ಎಸ್‌ನವರಿಗೆ ಸೋಲುವ ಭಯವಿದೆ. ಹೀಗಾಗಿ ಹತಾಶೆಯಿಂದ ಈ ದಾಳಿ ಮಾಡಿಸಿದ್ದಾರೆ. ರಾತ್ರಿ 12:30 ರಿಂದ 2ಗಂಟೆಯವರೆಗೆ ಪೊಲೀಸರು ನನ್ನ ಮತ್ತು ನನ್ನ ಆಪ್ತರ ಕೊಠಡಿಗಳಲ್ಲಿ ಪರಿಶೀಲನೆ ನಡೆಸಿದರು. ಆದರೆ ಏನೂ ಸಿಗದೆ ವಾಪಸ್ ಹೋದರು’ ಎಂದಿದ್ದಾರೆ.ಚುನಾವಣೆಗೆ ಅಕ್ರಮ ಹಣ ವರ್ಗಾವಣೆ ಶಂಕೆ ಮೇರೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಜಮೀರ್ ಅಹಮ್ಮದ್ ಖಾನ್ ಸಾಮಾಜಿ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

Related News

spot_img

Revenue Alerts

spot_img

News

spot_img