ಅಹಮದಾಬಾದ್;ಪ್ರಧಾನಿ ಮೋದಿ ಗುಜರಾತ್‌ನ(Gujrat) ಅಹಮದಾಬಾದ್‌ನಲ್ಲಿ 185 ಸಾವಿರ ಕೋಟಿ ವೆಚ್ಚದ ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ಈ ಸಮಯದಲ್ಲಿ 10 ವಂದೇ ಭಾರತ್ ರೈಲುಗಳಿಗೆ ಗ್ರೀನ್ ಸಿಗ್ನಲ್ ನೀಡಿದರು. ಜೊತೆಗೆ ನಾಲ್ಕು ವಂದೇ ಭಾರತ್ ರೈಲುಗಳ ವಿಸ್ತರಣೆಗೆ ಚಾಲನೆ ನೀಡಿದರು. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಸಿಎಂ ಭೂಪೇಂದ್ರ ಪಟೇಲ್ ಅವರು ಉಪಸ್ಥಿತರಿದ್ದರು.ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನಾನು ನನ್ನ ಜೀವನವನ್ನು ರೈಲ್ವೆ ಹಳಿಗಳ ಮೇಲೆ ಪ್ರಾರಂಭಿಸಿದೆ. ಹಾಗಾಗಿ ನಮ್ಮ ರೈಲ್ವೆ ಸಂಪರ್ಕ ಎಷ್ಟು ಕೆಟ್ಟದಾಗಿದೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ರೈಲ್ವೆ ಅಭಿವೃದ್ಧಿಗೆ ಹಿಂದಿನ ಸರ್ಕಾರಕ್ಕಿಂತಲೂ 6 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಹೇಳಿದರು.ಭಾರತೀಯ ರೈಲ್ವೆ 41 ವಂದೇ ಭಾರತ್ ಎಕ್ಸೆಸ್ ಸೇವೆಗಳನ್ನು ನಿರ್ವಹಿಸುತ್ತಿದೆ, ಇದು ರಾಜ್ಯಗಳನ್ನು ಬ್ರಾಡ್ ಗೇಜ್ (ಬಿಜಿ) ವಿದ್ಯುದ್ದೀಕೃತ ಜಾಲಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು 24 ರಾಜ್ಯಗಳು ಮತ್ತು 256 ಜಿಲ್ಲೆಗಳಲ್ಲಿ ವ್ಯಾಪಿಸಿದೆ.ದೆಹಲಿ-ಕತ್ರಾ, ದೆಹಲಿ-ವಾರಣಾಸಿ, ಮುಂಬೈ-ಅಹಮದಾಬಾದ್, ಮೈಸೂರು-ಚೆನ್ನೈ ಕಾಸರಗೋಡು ತಿರುವನಂತಪುರಂ ಮತ್ತು ಈಗ ವಿಶಾಖಪಟ್ಟಣಂ-ಸಿಕಂದರಾಬಾದ್ ಸೇರಿದಂತೆ ಆರು ಮಾರ್ಗಗಳಲ್ಲಿ ಎರಡು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸಲಿವೆ.
10 ಹೊಸ ವಂದೇ ಭಾರತ್ ರೈಲುಗಳ ಉದ್ಘಾಟನೆ
ಕಲಬುರಗಿ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು,
ಅಹಮದಾಬಾದ್-ಮುಂಬೈ ಸೆಂಟ್ರಲ್,
ಸಿಕಂದರಾಬಾದ್-ವಿಶಾಖಪಟ್ಟಣಂ,
ಮೈಸೂರು-ಡಾ ಎಂಜಿಆರ್ ಸೆಂಟ್ರಲ್ (ಚೆನ್ನೈ),
ಪಾಟ್ನಾ-ಲಖನೌ,
ನ್ಯೂ ಜಲಪೈಗುರಿ-ಪಾಟ್ನಾ,
ಪುರಿ-ವಿಶಾಖಪಟ್ಟಣಂ,
ಲಖನೌ-ಡೆಹ್ರಾಡೂನ್,
ರಾಂಚಿ-ವಾರಣಾಸಿ ,
ಖಜುರಾಹೊ- ದೆಹಲಿ (ನಿಜಾಮುದ್ದೀನ್)