ಬೆಂಗಳೂರು, ಜು. 25 : ಭಾರತದಲ್ಲಿ ಈಗ ರಿಯಲ್ ಎಸ್ಟೇಟ್ ಉದ್ಯಮ ಅಧಿಕವಾಗಿದ್ದು, ಗೃಹ ಸಾಲದ ಬಡ್ಡಿ ದರವೂ ಹೆಚ್ಚಾಗಿದೆ. 2023 ರಲ್ಲಿ ಭಾರತದಲ್ಲಿ ಗೃಹ ಸಾಲಗಳು ಹೆಚ್ಚು ದುಬಾರಿಯಾಗಿದೆ. ಗೃಹ ಸಾಲವನ್ನು ಪಡೆಯಲು ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿಯನ್ನು ನೀಡುತ್ತೆ. ಯಾವ ಬ್ಯಾಂಕ್ ನಲ್ಲಿ ಗೃಹ ಸಾಲ ನೀಡಲು ಏನೆಲ್ಲಾ ದಾಖಲೆಗಳನ್ನು ನೀಡಬೇಕು. ಗೃಹ ಸಾಲವನ್ನು ಮಂಜೂರು ಮಾಡುವಾಗ ಹೆಚ್ಚುವರಿ ವೆಚ್ಚಗಳನ್ನು ಯಾವ ಬ್ಯಾಂಕ್ ಎಷ್ಟು ವಿಧಿಸುತ್ತದೆ.
ಭಾರತದಲ್ಲಿನ ವಿವಿಧ ಬ್ಯಾಂಕ್‌ಗಳು ಪ್ರಸ್ತುತ ನೀಡುತ್ತಿರುವ ಅತ್ಯುತ್ತಮ ಗೃಹ ಸಾಲದ ದರಗಳನ್ನು ಪರಿಶೀಲಿಸುವ ಮೂಲಕ ಅತ್ಯುತ್ತಮ ಗೃಹ ಸಾಲವನ್ನು ಪಡೆಯಲು ಈ ಮಾರ್ಗದರ್ಶಿ ನಿಮಗೆ ಸಹಾಯ ಮಾಡುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಪ್ರಧಾನ ಕಚೇರಿ ಮುಂಬೈನಲ್ಲಿದೆ. ಯೂನಿಯನ್ ಬ್ಯಾಂಕ್ ನಲ್ಲಿ ಸಂಬಳ ಪಡೆಯುತ್ತಿರುವ ವ್ಯಕ್ತಿಗೆ ಕನಿಷ್ಠ ಶೇ. 6.40 ರಷ್ಟು ಹಾಗೂ ಗರಿಷ್ಠ ಶೇ. 7.0 ರಷ್ಟು ಬಡ್ಡಿಯನ್ನು ಗೃಹ ಸಾಲಕ್ಕೆ ವಿಧಿಸಲಾಗುತ್ತೆ. ಇನ್ನು ಸ್ವಂತ ಉದ್ಯಮ ಹೊಂದಿರುವವರಿಗೆ ಕನಿಷ್ಠ ಶೇ. 6.45 ರಷ್ಟು ಹಾಗೂ ಗರಿಷ್ಠ ಶೇ. 6.80 ರಷ್ಟು ಬಡ್ಡಿ ದರವನ್ನು ಯೂನಿಯನ್ ಬ್ಯಾಂಕ್ ವಿಧಿಸುತ್ತದೆ.
ವೇಗವಾಗಿ ಬೆಳೆಯುತ್ತಿರುವ ಖಾಸಗಿ ಬ್ಯಾಂಕ್ ಗಳಲ್ಲಿ ಉದಯ್ ಕೋಟಕ್ ನೇತೃತ್ವದ ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡ ಒಂದು. ಭಾರತದಲ್ಲಿ 100 ಕ್ಕೂ ಹೆಚ್ಚು ನಗರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಸದ್ಯ ಗೃಹ ಸಾಲಗಳ ಮೇಲೆ ಉತ್ತಮ ಬಡ್ಡಿ ದರವನ್ನು ನೀಡುತ್ತಿದೆ. ಗೃಹ ಸಾಲದ ಮೇಲೆ ಸಂಬಳ ಪಡೆಯುವ ಮಹಿಳೆಯರಿಗೆ 7.50%, ಸಂಬಳ ಪಡೆಯದ ಮಹಿಳೆಯರಿಗೆ 7.55% ಬಡ್ಡಿ ದರವನ್ನು ವಿಧಿಸುತ್ತದೆ. ಬ್ಯಾಂಕ್ ಆಫ್ ಬರೋಡಾ SBI ನಂತರ ಭಾರತದಲ್ಲಿ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ನಲ್ಲಿ ಸಂಬಳ ಪಡೆಯುವ ವ್ಯಕ್ತಿಗಳಿಗೆ ಶೇ.7.40 ರಷ್ಟು ಹಾಗೂ ಸ್ವಯಂ ಉದ್ಯೋಗಿಗಳಿಗೆ ಶೇ. 8.10ರಷ್ಟು ಬಡ್ಡಿ ದರವನ್ನು ನಿಗದಿ ಪಡಿಸಿದೆ.
ಭಾರತದಲ್ಲಿ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಕಡಿಮೆ ಬಡ್ಡಿ ದರವನ್ನು ನಿಗದಿ ಪಡಿಸಿದೆ. 1894 ರಲ್ಲಿ ಈ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. 80 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, 764 ನಗರಗಳಲ್ಲಿ 6,937 ಶಾಖೆಗಳನ್ನು ಹೊಂದಿದೆ. ಈ ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ಪಡೆಯಲು ಸಂಬಳ ಪಡೆಯುವ ವ್ಯಕ್ತಿಗಳಿಗೆ ಶೇ. 7.40 ರಷ್ಟು ಬಡ್ಡಿ ದರವಿದ್ದರೆ, ಸ್ವಯಂ ಉದ್ಯೋಗಿಗಳಿಗೆ ಶೇ. 7.45 ರಷ್ಟಿದೆ.
ಭಾರತದಲ್ಲಿನ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಇದಾಗಿದೆ. ಇಲ್ಲಿಯವರೆಗೆ 30 ಲಕ್ಷ ಕುಟುಂಬಗಳಿಗೆ ಗೃಹ ಸಾಲ ನೀಡಿದೆ. 1955 ರಲ್ಲಿ ಸ್ಥಾಪಿತವಾದ ಈ ಬ್ಯಾಂಕ್, ಭಾರತ ಮತ್ತು ವಿದೇಶಗಳಲ್ಲಿ 24,000 ಶಾಖೆಗಳನ್ನು ಹೊಂದಿದೆ. ಎಸ್ ಬಿಐ ಬ್ಯಾಂಕ್ ನಲ್ಲಿ ಸಂಬಳ ಪಡೆಯುವ ಮಹಿಳೆಯರಿಗೆ ಕನಿಷ್ಠ ಶೇ.7.55 ರಷ್ಟು ಗರಿಷ್ಠ ಶೇ. 8.05 ರಷ್ಟು ಬಡ್ಡಿ ದರ ವಿಧಿಸಿದರೆ, ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ ಶೇ. 7.55 ರಷ್ಟು ಮತ್ತು ಗರಿಷ್ಠ ಶೇ.9.70 ರಷ್ಟು ಬ್ಯಾಂಕ್ ಬಡ್ಡಿ ದರವನ್ನು ವಿಧಿಸುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆಯಲು ಸಂಬಳ ಪಡೆಯುವ ಮಹಿಳೆಯರಿಗೆ ಶೇ. 7.90 ರಷ್ಟು ಹಾಗೂ ಸ್ವಯಂ ಉದ್ಯೋಗಿ ಮಹಿಳೆಯರಿಗೆ ಶೇ. 7.90 ರಷ್ಟು ಬಡ್ಡಿ ದರವನ್ನು ಬ್ಯಾಂಕ್ ವಿಧಿಸುತ್ತದೆ. ಐಸಿಐಸಿಐ ಬ್ಯಾಂಕ್ ನಲ್ಲಿ ಸಂಬಳ ಪಡೆಯುವ ವ್ಯಕ್ತಿಗಳಿಗೆ ಶೇ. 8.60 ರಷ್ಟು ನೀಡಿದರೆ, ಸ್ವಯಂ ಉದ್ಯೋಗಿಗಳಿಗೆ ಶೇ. 8.65 ರಷ್ಟು ಬಡ್ಡಿ ದರವನ್ನು ವಿಧಿಸುತ್ತದೆ.
ಕೆನರಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ನೊಂದಿಗೆ ವಿಲೀನಗೊಂಡಿದೆ. ಕೆನರಾ ಬ್ಯಾಂಕ್ ಗೃಹ ಸಾಲದ ಬಡ್ಡಿ ದರ ಸಂಬಳ ಪಡೆಯುವ ವ್ಯಕ್ತಿಗಳಿಗೆ ಕನಿಷ್ಠ ಶೇ. 6.90 ರಷ್ಟು ಹಾಗೂ ಗರಿಷ್ಠ ಶೇ. 8.90 ರಷ್ಟು ಮತ್ತು ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ ಶೇ.6.90 ರಷ್ಟು ಹಾಗೂ ಗರಿಷ್ಠ ಶೇ.8.90 ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಆಕ್ಸಿಸ್ ಬ್ಯಾಂಕ್ ಹೋಮ್ ಲೋನ್ ಮೇಲೆ ಸಂಬಳ ಪಡೆಯುವ ವ್ಯಕ್ತಿಗಳಿಗೆ ಕನಿಷ್ಠ ಶೇ.6.90 ರಷ್ಟು ಗರಿಷ್ಠ ಶೇ. 8.40 ರಷ್ಟು ಹಾಗೂ ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ ಶೇ. 7 ರಷ್ಟು ಹಾಗೂ ಗರಿಷ್ಠ ಶೇ. 8.55ರಷ್ಟು ಬಡ್ಡಿಯನ್ನು ವಿಧಿಸುತ್ತದೆ.