ಬೆಂಗಳೂರು, ಜೂ. 01 : ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಆಗಿರುವ ಎಲಾನ್ ಮಸ್ಕ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಪುನಃ ಮೊದಲ ಸ್ಥಾನಕ್ಕೇರುವ ಮೂಲಕ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ. ಎಲಾನ್ ಮಸ್ಕ್ ಅವರು ಪ್ರಪಂಚದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ತಮ್ಮ ಛಲ, ನ್ಯಾಯುತವಾದ ನಡೆಯಿಂದಲೇ ಕಳೆದ ಮೂರು ದಶಕಗಳಿಂದಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಇತರರಿಗಿಂತಲೂ ವಿಭಿನ್ನವಾಗಿದ್ದಾರೆ.
ಸದಾ ನನ್ನ ದಾರಿಯೇ ಬೇರೆ, ನನ್ನ ಆಲೋಚನೆಗಳೇ ಬೇರೆ ಎನ್ನುವ ಎಲಾನ್ ಮಸ್ಕ್ ಅವರು, ಜಗತ್ತಿನಲ್ಲಿ ತಮ್ಮದೇ ಆದ ಮಾನ್ಯತೆಯನ್ನೂ ಪಡೆದಿದ್ದಾರೆ. ಚಿಕ್ಕವರಿದ್ದಾಗಲೇ ತಂದೆಯಿಂದ ದೂರಾದ ಎಲಾನ್ ಮಸ್ಕ್ ಅವರು ಯಾವಾಗಲೂ ಅವರ ತಂದೆಯನ್ನು ಬೈಯುತ್ತಲೇ ಕಷ್ಟಪಟ್ಟು ಬೆಳೆದು, ಸಿಕ್ಕ ಪುಸ್ತಕಗಳಲ್ಲೆನ್ನೇಲ್ಲಾ ಓದಿದವರು. ಏಕಾಂಗಿಯಾಗಿ ತಮ್ಮ ಬದುಕನ್ನು ಕಟ್ಟಿಕೊಂಡ ಎಲಾನ್ ಮಸ್ಕ್ ಅವರು ತಮ್ಮದೇ ಕಂಪನಿಯನ್ನೂ ಸ್ಥಾಪಿಸಿದರು.
Zip2 ಎಂಬ ಸಾಫ್ಟ್‌ವೇರ್ ಕಂಪನಿಯನ್ನು ತೆರೆದ ಎಲಾನ್ ಮಸ್ಕ್, ಅವರು ತಮ್ಮದೇ ರೀತಿಯಲ್ಲಿ ಸಂಶೋಧನೆಗಳನ್ನು ಮಾಡುತ್ತಾ ಬಂದರು. ಅಂತರ್ಜಾಲ ಆಧಾರಿತ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿತು. ಯಾರೇ ಅವರನ್ನು ಟೀಕಿಸಿದರು, ನಾನು ಇರುವುದೇ ಹೀಗೆ ಎಂದು ಮುಂದೆ ನಡೆದರು. 2008 ರಲ್ಲಿ ಮಸ್ಕ್‌ನ ಸ್ಪೇಸ್‌ಎಕ್ಸ್ ಕಂಪನಿಯ ಸ್ಥಾಪಿಸಿ ಮೂರು ಉಡಾವಣೆಗಳು ವಿಫಲವಾದವು. ಬಳಿಕ ಅವರ ಫಾಲ್ಕನ್ 1 ಭೂಮಿಯ ಸುತ್ತ ಕಕ್ಷೆಗೆ ಯಶಸ್ವಿಯಾಗಿ ಉಡಾಯಿಸಲಾಯಿತು.
ಇನ್ನು ಸುಮಾರು 44 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದದ ಮೇಲೆ ಮಸ್ಕ್ ಟ್ವಿಟ್ಟರ್‌ನ ಮಾಲೀಕರಾಗಿದ್ದಾರೆ. ಟೆಸ್ಲಾ ಮೋಟಾರ್ಸ್, ಪೇಪಾಲ್ ಮತ್ತು ಸ್ಪೇಸ್ಎಕ್ಸ್ ನಿರ್ಮಾಣ ಮಾಡಿದರು. ಈಗ ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಅವರು ಸದಾ ತಮ್ಮ ವಿಚಿತ್ರವಾದ ನಿರ್ಧಾರಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿದ್ದಾರೆ.