26.4 C
Bengaluru
Wednesday, December 4, 2024

Pan Aadhaar link ದಿನಾಂಕ ವಿಸ್ತರಣೆ: ಜೂ.30ರವರೆಗೆ ಅವಕಾಶ

Aadhar#Pancard#june30#Date extended#CBDT

ಹೊಸದಿಲ್ಲಿ: ಪಾನ್ ಮತ್ತು ಆಧಾರ್ ಕಾರ್ಡ್ಗಳನ್ನು ಜೋಡಣೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ.ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಜತೆಗೆ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್ ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ನೀಡಿದ್ದರು.

ಈಗ ದಿನಾಂಕವನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದೆ.

ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ಜುಲೈ 1 ರಿಂದ ನಿಷ್ಕ್ರಿಯಗೊಳ್ಳುತ್ತವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಆಧಾರ್ ಮತ್ತು ಪಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಜೋಡಣೆ ಮಾಡದಿದ್ದರೆ ಪಾನ್ ಕಾರ್ಡ್‌ ರದ್ದಾಗಲಿದೆ, ಬ್ಯಾಂಕಿಂಗ್ ವ್ಯವಹಾರಗಳು ಸಾಧ್ಯವಾಗುವುದಿಲ್ಲ.

ಆಧಾರ್ ಮತ್ತು ಪಾನ್ ಲಿಂಕ್ ಇಂಟರ್‌ನೆಟ್‌ನಲ್ಲಿ ಎಸ್‌ಎಂಎಸ್ ಮೂಲಕ ತಿಳಿಯುವುದು ಹೇಗೆ

ಜನರು 567678 ಅಥವ 56161 ಸಂಖ್ಯೆಗೆ UIDPAN ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ಬಳಿಕ 12 ಡಿಜಿಟ್ ಆಧಾರ್ ಸಂಖ್ಯೆ ನಮೂದಿಸಿ ಬಳಿಕ ಮತ್ತೊಂದು ಸ್ಪೇಸ್‌ ನೀಡಿ ಪ್ಯಾನ್ ಸಂಖ್ಯೆಯನ್ನು ಬರೆದು ಕಳಿಸಿದರೆ
ಆಧಾರ್ ಮತ್ತು ಪಾನ್ ಲಿಂಕ್ ಮಾಹಿತಿ ಲಭ್ಯವಾಗುತ್ತದೆ

Related News

spot_img

Revenue Alerts

spot_img

News

spot_img