ಬೆಂಗಳೂರು, ಜೂ. 05 : ಪ್ರತಿಯೊಬ್ಬರ ಮನೆಯ ಬಾಗಿಲುಗಳಿಗೂ ಬೀಗಗಳನ್ನು ಹಾಕಲಾಗುತ್ತದೆ. ಮೊದಲೆಲ್ಲಾ ಎಲ್ಲರ ಮನೆಗೂ ಒಂದೇ ತೆರನಾದ ಬೀಗಗಳು ಇರುತ್ತಿದ್ದವು. ಆದರೆ, ಈಗ ಸ್ಮಾರ್ಟ್ ಯುಗವಾದ್ದರಿಂದ ಪ್ರತಿಯೊಂದು ವಸ್ತುಗಳು ಸ್ಮಾರ್ಟ್ ಆಗಿರುವಂತಹದ್ದು ಸಿಗುತ್ತಿವೆ. ಹೀಗಿರುವಾಗ ಮನೆಯ ಬೀಗಗಳು ಕೂಡ ಸ್ಮಾರ್ಟ್ ಆಗಿವೆ. ಮಾರುಕಟ್ಟೆಯಲ್ಲಿ ತರಹೇವಾರಿ ಬಗೆಯ ಬೀಗಗಳು ಲಭ್ಯ ಇವೆ. ಈ ಕಾಲಕ್ಕೆ ತಕ್ಕಂತೆ ಸೂಟ್ ಆಗುವಂತಹ ಹಲವು ಬಗೆಯ ಬೀಗಗಳ ಪರಿಚಯವನ್ನು ನಾವಿಂದು ತಿಳಿಸಿಕೊಡಲಿದ್ದೇವೆ.
ಈ ಸ್ಮಾರ್ಟ್ ಬೀಗಗಳಿಗೆ ಕೀ ಬೇಕಿಲ್ಲ. ಅಂದರೆ, ಬೀಗ ಎಂದರೆ, ಅದಕ್ಕೊಂದು ಕೀ ಇರಲೇಬೇಕು. ಆದರೆ, ಮಾಡ್ರನ್ ಯುಗದ ಬೀಗಗಳಿಗೆ ಕೀಗಳ ಅವಶ್ಯಕತೆಯೇ ಇಲ್ಲ. ಅದರಲ್ಲಿ ಬಹಳ ಆಧುನಿಕವಾಗಿರುವುದೆಂದರೆ, ಬೆರಳಚ್ಚುಗಳ ಬೀಗ. ಅಂದರೆ, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬೀಗಗಳು. ಇವನ್ನು ಪಾಸ್ ವರ್ಡ್ ಬಳಸಿಯೂ ಬೀಗವನ್ನು ತೆರೆಯಬಹುದು. ಇದರಲ್ಲಿ ಪಾಸ್ ವರ್ಡ್ ಅನ್ನು ಮರೆತರೆ ಯೋಚಿಸುವ ಅಗತ್ಯವಿಲ್ಲ. ಇಲ್ಲವೇ ಮನೆ ಬಾಗಿಲನ್ನು ಒಡೆಯಬೇಕೆಂಬ ಆತಂಕವೂ ಬೇಡ. ಇದನ್ನು ಮೊಬೈಲ್ ಮೂಲಕವೂ ಆಪರೇಟ್ ಮಾಡಬಹುದು. ಇಂತಹ ಬೀಗಗಳನ್ನು ಅಳವಡಿಸಿರುವ ಬಾಗಿಲುಗಳು ತನ್ನಷ್ಟಕ್ಕೆ ತಾನೇ ಮುಚ್ಚಿಕೊಳ್ಳುತ್ತವೆ. ನೋಡಲು ಕೂಡ ಬಹಳ ಅಂದವಾಗಿ ಕಾಣುತ್ತವೆ.
ಇನ್ನು ವೀಡಿಯೋ ಇಂಟರ್ ಕಾಂ ಎಂಬ ಮತ್ತೊಂದು ಮನೆಯ ಬೀಗವಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ, ಕೆಲವೊಮ್ಮೆ ನಾವು ಬ್ಯುಸಿ ಇರುವಾಗಲೇ ಯಾರಾದರೂ ಬಂದು ಬೆಲ್ ಮಾಡುತ್ತಾರೆ. ಅವಸರದಲ್ಲಿ ಓಡಿ ಬಂದು ಬಾಗಿಲು ತೆರೆದರೆ, ಬೇಡದವರು ಅಂದರೆ, ಸೇಲ್ಸ್ ಮ್ಯಾನ್ ಸೇರಿದಮತೆ ಬೇಡದವರೇ ಆಗಮಿಸಿರುತ್ತಾರೆ. ಇನ್ನು ಕೆಲವೊಮ್ಮೆ ಸುರಕ್ಷತೆ ಧಕ್ಕೆಯಾಗುವಂತಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸಹಾಯವಅಗಲಿ ಎಂದೇ ವೀಡಿಯೋ ಇಂಟರ್ ಕಾಂ ಬೀಗವನ್ನು ಮನೆಗೆ ಅಳವಡಿಸಿಕೊಳ್ಳಬಹುದು. ಇದರಿಂದ ಮನೆಗೆ ಯಾರು ಬಂದಿದ್ದಾರೆ ಎಂಬುದನ್ನು ಕೂತಲ್ಲೇ ನೋಡಿ, ಬಾಗಿಲು ತೆರೆಯಬೇಕಾ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯವಾಗುತ್ತದೆ.
ಈ ರೀತಿಯ ಸ್ಮಾರ್ಟ್ ಬೀಗಗಳನ್ನು ನಿಮ್ಮ ಮನೆಗೂ ಅಳವಡಿಸಿದರೆ, ಸುರಕ್ಷತೆಯ ಬಗ್ಗೆಯೂ ಆತಂಕ ಪಡುವಂತಿಲ್ಲ. ಜೊತೆಗೆ ಕಳ್ಳರು ಕೂಡ ಇಂತಹ ಮನೆಗಳ ಬಾಗಿಲನ್ನು ಒಡೆದು ದರೋಡೆ ಮಾಡಲೂ ಅವಕಾಶವಿರುವುದಿಲ್ಲ. ಇಂತಹ ಸ್ಮಾರ್ಟ್ ಬೀಗಗಳಿಗೆ ಮೊಬೈಲ್ ಆಪ್, ಸ್ಮಾರ್ಟ್ ಕಾರ್ಡ್, ಫಿಂಗರ್ ಪ್ರಿಂಟ್ ಹಾಗೂ ಪಾಸ್ ವರ್ಡ್ ಗಳ ಮೂಲಕ ಆಪರೇಟ್ ಮಾಡಬಹುದಾಗಿದೆ. ಹಾಗಾಗಿ ಒಂದು ಮನೆಗೆ ಎರಡು ಮೂರು ಕೀಗಳನ್ನು ಮಾಡಿಸುವುದು. ಬಾಗಿಲಲ್ಲಿ ಕೀಗಳನ್ನು ಬಚ್ಚಿಟ್ಟು ಹೋಗುವಂತಹ ಗೋಜೇ ಇರುವುದಿಲ್ಲ.