26.3 C
Bengaluru
Friday, October 4, 2024

SBI ನಲ್ಲಿ ಖಾತೆ ಇದ್ದವರಿಗೆ ಹೊಸ ಸೇವೆ ಆರಂಭ

#New #service #started #SBI #Account

ನವದೆಹಲಿ;ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಾ ಬಂದಿದೆ. ತನ್ನ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಕೂಡಾ ಪರಿಚಯಿಸುತ್ತಿದೆ.ತಂತ್ರಜ್ಞಾನ ಹೆಚ್ಚಾದಂತೆ ಜನ ಸಾಮಾನ್ಯರು ಬ್ಯುಸಿ ಆಗುತ್ತಿದ್ದಾರೆ, ಅಂದರೆ ನಾವು ಇದ್ದ ಕಡೆಯೇ ಅತಿ ವೇಗವಾಗಿ ಕೆಲಸವಾಗಬೇಕು ಯಾರಿಗೂ ಕೊಡ ಸ್ವಲ್ಪವು ಕಾಯುವ ತಾಳ್ಮೆ ಇರುವುದಿಲ್ಲ ಹಾಗಾಗಿ SBI Whatsapp Banking Service ಪ್ರಾರಂಭಿಸಿದೆ.ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ SBI ಹಲವು ಸೇವೆಗಳನ್ನು ಒದಗಿಸಿದೆ.ಈ ಸೇವೆ ಪಡೆಯಲು ಮೊಬೈಲ್ ನಲ್ಲಿ ವಾಟ್ಸಪ್‌ app ಇದ್ದರೆ ಸಾಕು, ಇವಾಗಂತೂ ವಾಟ್ಸಪ್‌ ಅನ್ನು ಎಲ್ಲರೂ ಉಪಯೋಗಿಸುತ್ತಿದ್ದಾರೆ ಇದನ್ನು ಗಮನದಲ್ಲಿ ಇಟ್ಟುಕೊಂಡ SBI ತನ್ನ ಗ್ರಾಹಕರಿಗೆ ಬ್ಯಾಂಕಿಂಗ್‌ ಸೇವೆ ಇನ್ನಷ್ಟು ಸುಲಭವಾಗಲಿ ಅನ್ನೋ ಕಾರಣಕ್ಕೆ SBI WhatsApp Banking ಸೇವೆಯನ್ನು ಒದಗಿಸಿದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನೀಡಿರುವ ಮಾಹಿತಿಯ ಪ್ರಕಾರ, ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಹಿಂದಿನ ವಹಿವಾಟಿನ ವಿವರಗಳನ್ನು ಪಡೆಯಬಹುದು. ಅಂದರೆ, ಈ ಒಂದು ಸಂಖ್ಯೆಯಿಂದ ನಿಮ್ಮ ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯುವುದು ಈಗ ಸಾಧ್ಯವಾಗುತ್ತದೆ. ಅಂದರೆ ಎಸ್‌ಬಿಐ ವಾಟ್ಸಪ್‌ ಬ್ಯಾಂಕಿಂಗ್ ಸೇವೆಯೊಂದಿಗೆ ಬ್ಯಾಂಕ್ ಖಾತೆಯನ್ನು ನೋಂದಾಯಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ WAREG A/C ಸಂಖ್ಯೆ (917208933148) ಗೆ SMS ಕಳುಹಿಸಬೇಕು. ನೋಂದಣಿ ಪೂರ್ಣಗೊಂಡ ನಂತರ, ನೀವು ಎಸ್‌ಬಿಐನ ವಾಟ್ಸಪ್‌ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ.

ನಂತರ ವಾಟ್ಸಪ್‌ನಲ್ಲಿ ಹಾಯ್ ಎಂದು ಕಳುಹಿಸಿ (+909022690226). ಈ ಪಾಪ್ ಅಪ್ ಸಂದೇಶವು ತೆರೆಯುತ್ತದೆ. ಇದರ ನಂತರ ನಿಮಗೆ ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್, ಡಿ-ರಿಜಿಸ್ಟರ್ ವಾಟ್ಸಪ್‌ ಬ್ಯಾಂಕಿಂಗ್(Whatsapbanking) ಆಯ್ಕೆಯನ್ನು ನೀಡಲಾಗುತ್ತದೆ. ನಿಮ್ಮ ಖಾತೆಯ ಬ್ಯಾಲೆನ್ಸ್(Balance) ಅನ್ನು ಪರಿಶೀಲಿಸಲು ಟೈಪ್ 1 ಮತ್ತು ಮಿನಿ ಸ್ಟೇಟ್‌ಮೆಂಟ್ ಟೈಪ್ 2 ಆಗಿರುತ್ತದೆ.ಬ್ಯಾಲೆನ್ಸ್ ವಿವರಗಳು SMS ರೂಪದಲ್ಲಿ ಬರುತ್ತವೆ. ಈ ಸಂಖ್ಯೆ ಕಾರ್ಯನಿರ್ವಹಿಸದಿದ್ದರೆ, 09223866666 ಗೆ ಮಿಸ್ಡ್ ಕಾಲ್ ಕೊಟ್ಟರೆ ಮಿನಿ ಸ್ಟೇಟ್ಮೆಂಟ್ SMS ಅನ್ನು ಸ್ವೀಕರಿಸುತ್ತದೆ.

Whatsapp Banking Service Benefits

SBI ಯ ಈ ಟೋಲ್ ಫ್ರೀ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ (Bank Ballance) ಅನ್ನು ಪರಿಶೀಲಿಸಬಹುದು,- ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ, ಕೊನೆಯ ಐದು ವಹಿವಾಟುಗಳ ಮಾಹಿತಿಯನ್ನು ಪಡೆಯಬಹುದು. -SBI ನ ಟೋಲ್ ಫ್ರೀ ಸಂಖ್ಯೆ 1800 1234 ಗೆ ಸಂದೇಶ ಕಳುಹಿಸುವ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಕೊನೆಯ ಐದು ವಹಿವಾಟುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.-ಈ ಟೋಲ್ ಫ್ರೀ ಸಂಖ್ಯೆಯ ಮೂಲಕ ಎಟಿಎಂ ಕಾರ್ಡ್ (ATM Card) ಅನ್ನು ಬ್ಲಾಕ್ ಮಾಡಬಹುದು.
-ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಎಟಿಎಂ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.ಠೇವಣಿ ಮಾಹಿತಿ, NRI Service, Debit Card ಬಳಕೆಯ ವಿವರಗಳು ಹಾಗು ಮುಖ್ಯವಾಗಿ ಅಪ್ಲಿಕೇಶನ್‌ನಲ್ಲಿ ATM ಮತ್ತು ಶಾಖೆಯನ್ನು ಹುಡುಕಲು ಸಾಧ್ಯವಾಗುತ್ತದೆ.

Related News

spot_img

Revenue Alerts

spot_img

News

spot_img