ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದಿಂದ ಗ್ರಾಹಕರಿಗೆ ವಿಶೇಷ ಸಾಲ ಸೌಲಭ್ಯ ಕಲ್ಪಿಸಲಾಗಿದೆ.ಬ್ಯಾಂಕ್ ಆಫ್ ಬರೋಡಾ ವತಿಯಿಂದ ನೂತನವಾಗಿ ನಾಲ್ಕು ಎಸ್ ಬಿ ಖಾತೆಯನ್ನು ಆರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಡಿಸೆಂಬರ್ 31ರವರಗೆ ಬ್ಯಾಂಕ್ ಆಫ್ ಬರೋಡಾ ಕೆ ಸಂಗ್ ತ್ಯೋಹಾರ್ ಕಿ ಉಮಂಗ್’ ಕೊಡುಗೆ ಘೋಷಿಸಲಾಗಿದೆ. ಇದರಲ್ಲಿ ನಾಲ್ಕು ಉಳಿತಾಯ ಖಾತೆ ಯೋಜನೆಯನ್ನು ಆರಂಭಿಸಿದೆ. ಆಕರ್ಷಕ ಬಡ್ಡಿ ದರ ಸೇರಿದಂತೆ ವಿವಿಧ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಬ್ಯಾಂಕ್, ಮನೆ, ಕಾರು, ವೈಯಕ್ತಿಕ, ಶಿಕ್ಷಣ ಸಾಲಗಳ ಮೇಲಿನ ಆಕರ್ಷಕ ಬಡ್ಡಿದರದಲ್ಲಿ ಸಾಲವನ್ನು ನೀಡಲು ತೀರ್ಮಾನಿಸಿರುವ ಬ್ಯಾಂಕ್ ಶೂನ್ಯ ಸಂಸ್ಕರಣಾ ಶುಲ್ಕದೊಂದಿಗೆ ಗೃಹ ಸಾಲವನ್ನು ಶೇ.8.40 ಬಡ್ಡಿ ದರದಲ್ಲಿ ಕಾರಿನ ಮೇಲಿನ ಸಾಲವನ್ನು ಶೇ.8.70 ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು ಶೇ.8.55 ಬಡ್ಡಿದರದಲ್ಲಿ ಹಾಗೂ ವೈಯಕ್ತಿಕ ಸಾಲವನ್ನು ಶೇ.10 .10 ಬಡ್ಡಿದರದಲ್ಲಿ ನೀಡುತ್ತಿದೆ. ಇದರೊಂದಿಗೆ ಹಬ್ಬದ ಕೊಡುಗೆಯಾಗಿ ಡೆಬಿಟ್ ಮತ್ತು ಕ್ರೆಡಿಟ್ ಕಾಡ್ ೯ಗಳ ಮೇಲೆ ಆಕರ್ಷಕ ಸೌಲಭ್ಯವನ್ನು ಒದಗಿಸಿದೆ. ಈ ಬಗ್ಗೆ ಬ್ಯಾಂಕ್ ಆಫ್ ಬರೋಡಾ ಎಂಡಿ ದೆಬಾದತ್ತ ಚಂದ್ ಮಾತನಾಡಿ, ಬ್ಯಾಂಕ್ ಹಬ್ಬದ ಸಾಲಿಗಾಗಿ ವಿಶೇಷ ಯೋಜನೆಗಳನ್ನು ಆರಂಭಿಸಿದೆ ಎಂದು ಹೇಳಿದ್ದಾರೆ.