ಬೆಂಗಳೂರು;ವಾಸ್ತು ಪ್ರಕಾರ ಮನೆಯಲ್ಲಿ ಅಕ್ಕ ಪಕ್ಕದಲ್ಲಿ ಹಾಗು ಮನೆಯಲ್ಲಿ ಯಾವ ಗಿಡವಿದ್ದರೆ ಉತ್ತಮ ಮತ್ತು ಅದರಿಂದಾಗುವ ಧನಾತ್ಮಕ ಬದಲಾವಣೆ ಬಗ್ಗೆ ತಿಳಿಯುವುದಾರೆ ಮೊದಲಿಗೆ ಬೇವಿನ ಮರ. ಬೇವು ಆಯುರ್ವೇದ ಗುಣಗಳನ್ನು ಹೊಂದಿದೆ, ಔಷಧ ತಯಾರು ಮಾಡಲು ಬೇವನ್ನು ಉಪಯೋಗಿಸುತ್ತಾರೆ. ಭಾರತದಲ್ಲಿ ಶಾಸ್ತ್ರ ಸಂಪ್ರದಾಯ ಹಾಗು ದೇವರ ಮೇಲೆ ನಂಬಿಕೆ ಜನರಲ್ಲಿ ಹೆಚ್ಚಾಗಿರುತ್ತದೆ. ಮೈಗಳ ಮೇಲೆ ದೇವರ ಗುಳ್ಳೆಗಳಾದರೆ ಅದನ್ನು ಹೋಗಲಾಡಿಸಲು ಬಿಸಿನೀರಿಗೆ ಬೇವಿನ ಸೊಪ್ಪನ್ನು ಹಾಕಿ ರಸ ಬಿಟ್ಟ ನಂತರ ಸ್ನಾನ ಮಾಡುತ್ತಾರೆ. ಬೇವಿನ ಮರದಿಂದ ಹವನ ಮಾಡುವುದರಿಂದ ಶನಿದೇವನ ಕೋಪವು ಕಡಿಮೆಯಾಗುತ್ತದೆ. ದೈವಿಕ ಶಕ್ತಿಗಳು ಬೇವಿನ ಮರದಲ್ಲಿ ನೆಲೆಯೂರಿರುತ್ತವೆ. ಇದರ ಗಾಳಿ ಕುಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಬೇವಿನ ಮರವು ಬಹಳ ಶ್ರೇಷ್ಠ ಎಂದು ನಂಬಲಾಗಿದೆ. ಇದನ್ನು ಭಾರತೀಯ ನೀಲಕ ಎಂದೂ ಕರೆಯಲಾಗುತ್ತದೆ. ಬೇವಿನ ಮರವು ಔಷಧೀಯ ಗುಣವನ್ನು ಹೊಂದಿದೆ. ಬೇವಿನ ಮರದ ಸಕಾರಾತ್ಮಕ ಪರಿಣಾಮಗಳನ್ನು ಆನಂದಿಸಲು, ಅದನ್ನು ನೀವು ಮಲಗುವ ಕೋಣೆಯ ಪಕ್ಕದಲ್ಲಿ ಅಥವಾ ವಾಯುವ್ಯ ದಿಕ್ಕಿನಲ್ಲಿ ನೆಡಬೇಕು. ಬೇವಿನ ಮರವು ತಾಜಾ ಆಮ್ಲಜನಕವನ್ನೂ ನೀಡುತ್ತದೆ.ಧಾರ್ಮಿಕ ನಂಬಿಕೆಗಳ ಪ್ರಕಾರ, ಆರೋಗ್ಯದ ಗಣಿ ಎಂದು ಬಣ್ಣಿಸಲ್ಪಡುವ ಬೇವಿನ ಮರದಲ್ಲಿ ರಾಮನ ಭಂಟ ಹನುಮಂತ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ, ಮನೆಯ ಮುಂದೆ ಬೇವಿನ ಮರ ಇರುವುದನ್ನು ಅತ್ಯಂತ ಶುಭ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಬೇವಿನ ಸಸಿ ನೆಡುವುದನ್ನು ಅತ್ಯಂತ ಮಂಗಳಕರ. ಬೇವು ಶನಿ ಮತ್ತು ಕೇತುವಿಗೆ ಸಂಬಂಧಿಸಿದೆ.
ಬೇವಿನ ಮರದ ಪ್ರಯೋಜನ :
* ಬೇವಿನ ಮರವನ್ನು ನೆಟ್ಟು ಪೂಜಿಸುವುದರಿಂದ ಗ್ರಹದೋಷ ಇದ್ದರೆ ಪರಿಹಾರ ದೊರೆಯುತ್ತದೆ
* ಶನಿದೇವನ ಕೋಪ ಕಡಿಮೆ ಬೇವಿನ ಮರ ದಹನ ಮಾಡಿ
* ಮನೆಯ ದಕ್ಷಿಣ ದಿಕ್ಕಿನಲ್ಲಿ ಮರವನ್ನು ನಟ್ಟರೆ ಮಂಗಳಕರವಾಗುತ್ತದೆ