25.4 C
Bengaluru
Saturday, July 27, 2024

ಎಲ್‌ಪಿಜಿ ಗ್ಯಾಸ್ ʼಸಬ್ಸಿಡಿʼ ಬೇಕು ಅಂದ್ರೆ ಡಿ. 31 ರೊಳಗೆ ಈ ಕೆಲಸ ಮಾಡಿ

ಬೆಂಗಳೂರು;ಕೇಂದ್ರ ಸರ್ಕಾರವು ದೇಶಾದ್ಯಂತ LPG ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದ್ದು ಗ್ಯಾಸ್ ಸಬ್ಸಿಡಿ(Gas subsidy) ಪಡೆಯಲು ಹೊಸ ನಿಯಮ ಜಾರಿಗೆ ತಂದಿದೆ.ಗ್ಯಾಸ್ ಸಿಲಿಂಡರ್ಗಳ ಸಬ್ಸಿಡಿ ಪಡೆಯಲು ಬಯೋಮೆಟ್ರಿಕ್ ನವೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಬಯೋಮೆಟ್ರಿಕ್(Biometric) ನವೀಕರಿಸದಿದ್ದರೆ ಸಬ್ಸಿಡಿ ನಿಲ್ಲುತ್ತದೆ. ಈ ಬಯೋಮೆಟ್ರಿಕ್ ಅನ್ನು ಡಿಸೆಂಬರ್ 31 ರೊಳಗೆ ನವೀಕರಿಸಬೇಕಾಗಿದೆ. ಅನೇಕ ಗ್ರಾಹಕರಿಗೆ ಈ ಮಾಹಿತಿಯ ಬಗ್ಗೆ ಇನ್ನೂ ತಿಳಿದಿಲ್ಲ. ಬಯೋಮೆಟ್ರಿಕ್ ನವೀಕರಣ ಮಾನದಂಡಗಳ ಬಗ್ಗೆ ಗ್ಯಾಸ್ ವಿತರಕರಲ್ಲಿ ಗೊಂದಲವಿದೆ.LPG Gas ಸಂಪರ್ಕದ ಮೇಲೆ ಸರ್ಕಾರ ಸಬ್ಸಿಡಿ ಪ್ರಯೋಜನವನ್ನು ನೀಡುತ್ತಿದೆ. ನೀವು ಸರ್ಕಾರದ ಈ ಪ್ರಯೋಜನವನ್ನು ಪಡೆಯಲು ಮುಖ್ಯವಾಗಿ LPG ಸಂಪರ್ಕವನ್ನು E- KYC ಮಾಡುವುದು ಕಡ್ಡಾಯವಾಗಿದೆ. LPG ಸಂಪರ್ಕವನ್ನು E- KYC ಮಾಡಿದರೆ ಮಾತ್ರ ನೀವು LPG Subsidy ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.ನೀವು LPG ಸಂಪರ್ಕವನ್ನು E- KYC ಮಾಡಲು ಹೆಚ್ಚು ಚಿಂತಿಸುವ ಅಗತ್ಯ ಇಲ್ಲ. ನೀವು ಮನೆಯಲ್ಲಿಯೇ ಕುಳಿತು ಸುಲಭ ವಿಧಾನದ ಮೂಲಕ ಆಧಾರ್ ಲಿಂಕ್ ಮಾಡಿಕೊಳ್ಳಬಹುದು. LPG ಸಂಪರ್ಕಕ್ಕೆ E- KYC ಮಾಡಲು ಈ ಕೆಳಗಿನ ಸುಲಭ ವಿಧಾನವನ್ನು ಅನುಸರಿಸಿ.ಸಬ್ಸಿಡಿ ಪಡೆಯಲು ಗ್ರಾಹಕರು ಬಯೋಮೆಟ್ರಿಕ್ ಮಾಹಿತಿಯನ್ನು ನೀಡಬೇಕು. ಮತ್ತು ಬಯೋಮೆಟ್ರಿಕ್ ಮಾಹಿತಿಗಾಗಿ ಪ್ರತಿಯೊಬ್ಬ ವ್ಯಕ್ತಿಯ ಫಿಂಗರ್‌ಪ್ರಿಂಟ್, ಐಬಾಲ್ ಫೋಟೋ, ಫೇಸ್ ಫೋಟೋವನ್ನು ಒದಗಿಸಲು ಶಿಫಾರಸು ಮಾಡಲಾಗಿದೆ. ಇನ್ನು ಗ್ಯಾಸ್ ಮಾರಾಟಗಾರರು ಗ್ಯಾಸ್ ಆಫೀಸ್‌ಗೆ ಹೋಗಿ ಗ್ರಾಹಕರ KYC ಅನ್ನು ನವೀಕರಿಸಬೇಕು. ಇಲ್ಲ ಮನೆ ಮನೆಗೂ ತೆರಳಿ ನವೀಕರಿಸಬಹುದು.

Related News

spot_img

Revenue Alerts

spot_img

News

spot_img