20.8 C
Bengaluru
Thursday, December 5, 2024

Navaratri2023;ನವರಾತ್ರಿ ಹಬ್ಬದಲ್ಲಿ ಭೇಟಿ ನೀಡಲೇಬೇಕಾದ ದೇವಸ್ಥಾನಗಳು ಇಲ್ಲಿವೆ

ಬೆಂಗಳೂರು;ಭಾರತದಲ್ಲಿ ಸಾಕಷ್ಟು ಧಾರ್ಮಿಕ ವೈವಿಧ್ಯತೆಗಳಿವೆ. ಪ್ರತಿಯೊಂದು ಹಬ್ಬಕ್ಕೂ ಇಲ್ಲಿ ತನ್ನದೇ ಆದ ಪ್ರಾಮುಖ್ಯತೆಯಿದೆ. ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯಗಳಲ್ಲಿ ಇಂದಿಗೂ ಪೂಜೆ ಸಲ್ಲಿಸುವ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಜೀವಂತವಾಗಿರಿಸಲಾಗಿದೆ.ನವರಾತ್ರಿ ಭಾನುವಾರ ಅಕ್ಟೋಬರ್ 15ರಿಂದ ಆರಂಭವಾಗುತ್ತದೆ. ಅಕ್ಟೋಬರ್ 23ರವರೆಗೆ ಅಂದರೆ ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿ ದುಷ್ಟ ಮಹಿಷಾಸುರನೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿ ಜಯ ಗಳಿಸಿದ ಸಂಕೇತವಾಗಿ ಹತ್ತನೇ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ.ನವರಾತ್ರಿ ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತೀಯರಿಗೆ ಬಹಳ ಮುಖ್ಯವಾದ ಹಬ್ಬ. 9 ದಿನಗಳ ಕಾಲವೂ ದೇವಿಯನ್ನು ಆರಾಧಿಸಲಾಗುತ್ತದೆ. ದೇವತೆಗಳಾದ ಕರ್ನಾಟಕದ ಶೃಂಗೇರಿ ಶಾರದಾಂಬ, ಮೈಸೂರು ಚಾಮುಂಡೇಶ್ವರಿ, ಹೊರನಾಡು ಅನ್ನಪೂರ್ಣೇಶ್ವರಿ, ಮಾರಿಕಾಂಬ, ಕೊಲ್ಲೂರು ಮೂಕಾಂಬಿಕೆ, ಸಿಗಂದೂರು ಚೌಡೇಶ್ವರಿ ಹೀಗೆ ದೇವಿಯ ನಾನಾ ಮುಖಗಳನ್ನು ನಾವು ಕಾಣಬಹುದು.

ನವರಾತ್ರಿ ವೇಳೆ ಭೇಟಿ ನೀಡಲೇಬೇಕಾದ ದೇವಿಯರ ಪ್ರಮುಖ ದೇವಸ್ಥಾನಗಳ ಪಟ್ಟಿ ಇಲ್ಲಿದೆ.

*ಮೈಸೂರು ಚಾಮುಂಡೇಶ್ವರಿ ದೇವಸ್ಥಾನ(Mysore chamundeshwari temple)

ಮೈಸೂರಿನ ಚಾಮುಂಡೇಶ್ವರಿ ದೇವಾಲಯವು ಶ್ರೀಮಂತ ಪರಂಪರೆಯಿಂದಾಗಿ ಅಂತಹ ದೇವಾಲಯಗಳಲ್ಲಿ ಒಂದಾಗಿದೆ. ಅದರಲ್ಲೂ ಆಷಾಢ ಮಾಸದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವುದೇ ವಿಶೇಷ.ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಈ ಸಂದರ್ಭದಲ್ಲಿ ವಿಶೇಷ ಪೂಜೆ ಇರುತ್ತದೆ. ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, ‘ದೇವಿ ಮಹಾತ್ಮೆ’ ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿ ಬೆಟ್ಟವೆಂಬ ಹೆಸರು ಬಂದಿದೆ.

*ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ(Kolluru mookambika temple)

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ.ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿದೆ. ಈ ದೇವಾಲಯವು ಕಲೆ ಮತ್ತು ಜ್ಞಾನಕ್ಕೆ ಸಮರ್ಪಿಸಲಾಗಿದೆ.ಕೊಲ್ಲೂರು ಮೂಕಾಂಬಿಕಾ ದೇವಿ ಎಂಬುದು ಎಲ್ಲಾ ಜೀವಗಳ ಸೃಷ್ಟಿಕರ್ತೆ ಮತ್ತು ರಕ್ಷಕಿ ಆದಿ ಲಕ್ಷ್ಮಿಯ ರೂಪ. ಈ ದೇವಾಲಯವು ಅನೇಕ ಶತಮಾನಗಳಿಂದ ಶಕ್ತಿ ಪೂಜೆಯ ಸ್ಥಳವಾಗಿತ್ತು. ಶಕ್ತಿ ದೇವತೆಗಳಲ್ಲಿ ಒಬ್ಬಳಾದ ಕಾರಣ ನವರಾತ್ರಿಗೆ ಇಲ್ಲಿ ವಿಶೇಷ ಪೂಜೆ ಇರುತ್ತದೆ.

*ನಿಮಿಷಾಂಭ ದೇವಿ ದೇವಸ್ಥಾನ (Shri Nimishamba Devi Temple)

ಇದು ಬೆಂಗಳೂರಿನ ಅತ್ಯಂತ ಪ್ರಸಿದ್ಧ ಹಾಗೂ ಶಕ್ತಿಯುತ ದೇವಸ್ಥಾನಗಳಲ್ಲಿ ಒಂದಾಗಿದೆ. ಕೆಂಪು ಲ್ಯಾಟರೈಟ್ ಕಲ್ಲಿನಿಂದ ದೇವಸ್ಥಾನವನ್ನು ನಿರ್ಮಿಸಲಾಗಿದೆ.ಶಕ್ತಿಯುತ ಶ್ರೀ ಚಕ್ರದ ಜೊತೆಗೆ ದುರ್ಗೆಯ ರೂಪವಾದ ನಿಮಿಷಾಂಭ ದೇವಿಗೆ ಸಮರ್ಪಿತವಾಗಿದೆ.ದೇವಾಲಯವು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿದೆ.ನವರಾತ್ರಿ ಸಮಯದಲ್ಲಿ ನಿಮಿಷಾಂಭ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಈ ವೇಳೆ ಭಕ್ತ ಸಾಗರವೇ ದೇವಸ್ಥಾನಕ್ಕೆ ಹರಿದು ಬರುತ್ತದೆ.

*ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ(Horanadu annapoorneshwari Temple)

ಕರ್ನಾಟಕದ ಜನಪ್ರಿಯ ದೇವಿ ದೇವಾಲಯಗಳಲ್ಲಿ, ಶ್ರೀ ಅನ್ನಪೂರ್ಣೇಶ್ವರಿಗೆ ಸಮರ್ಪಿತವಾದ ಶ್ರೀ ಹೊರನಾಡು ದೇವಾಲಯವು ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳ ಪಟ್ಟಿಗಳಲ್ಲಿ ಒಂದಾಗಿದೆ. 9 ದಿನಗಳ ದೀರ್ಘ ನವರಾತ್ರಿ ಉತ್ಸವದೊಂದಿಗೆ 5-ದಿನಗಳ ಭವ್ಯವಾದ ರಥೋತ್ಸವವನ್ನು ಕೂಡ ಆಯೋಜಿಸಲಾಗುತ್ತದೆ.ದೇವಾಲಯದಲ್ಲಿನ ದೇವಿಯ ವಿಗ್ರಹವು ತನ್ನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಶ್ರೀ ಚಕ್ರ ಮತ್ತು ದೇವಿ ಗಾಯತ್ರಿಯನ್ನು ಹಿಡಿದಿರುವ ಅನ್ನಪೂರ್ಣೇಶ್ವರಿಯು ಪೀಠದ ಮೇಲೆ ನಿಂತಿರುವ ದೈವಿಕ ವಿಗ್ರಹವನ್ನು ಹೊಂದಿದೆ.

Related News

spot_img

Revenue Alerts

spot_img

News

spot_img