ಏಪ್ರಿಲ್ 4 ರಂದು ಬಿಡುಗಡೆಯಾದ ಫೋರ್ಬ್ಸ್ ಬಿಲಿಯನೇರ್ 2023 ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಜನವರಿ 24 ರಂದು ಸುಮಾರು $126 ಶತಕೋಟಿ ಮೌಲ್ಯದ ಅದಾನಿ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದರು. ಫೋರ್ಬ್ಸ್ ಬಿಡುಗಡೆ ಮಾಡಿದ ‘ದಿ ರಿಯಲ್-ಟೈಮ್ ಬಿಲಿಯನೇರ್’ಗಳ ಪಟ್ಟಿ ಯ ಪ್ರಕಾರ, ಮುಖೇಶ್ ಅಂಬಾನಿಯವರು ಗೌತಮ್ ಅದಾನಿಯನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ಭಾರತೀಯರಾಗಿದ್ದಾರೆ ಎಂದು ತಿಳಿಸಿದೆ. ಒಟ್ಟು ಹತ್ತು ಮಂದಿ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರ ಪೈಕಿ ಅವರು ಮುಖೇಶ್ ಅಂಬಾನಿಯವರು ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಅವರ ನಂತರ ಗೌತಮ್ ಅದಾನಿಯವರು 9ನೇ ಸ್ಥಾನ ಪಡೆದಿದ್ದಾರೆ
ಕಳೆದ ವರ್ಷ, ಅಂಬಾನಿಯವರ ತೈಲದಿಂದ ದೂರಸಂಪರ್ಕ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ $100 ಬಿಲಿಯನ್ ಆದಾಯವನ್ನು ಮೀರಿದ ಮೊದಲ ಭಾರತೀಯ ಕಂಪನಿಯಾಗಿದೆ ಎಂದು ಫೋರ್ಬ್ಸ್ ಹೇಳಿದೆ.ಫೋರ್ಬ್ಸ್‌ನ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ವಿಶ್ವದ 25 ಶ್ರೀಮಂತರು ಸಾಮೂಹಿಕ $2.1 ಟ್ರಿಲಿಯನ್ ಮೌಲ್ಯವನ್ನು ಹೊಂದಿದ್ದಾರೆ, ಇದು 2022 ರಲ್ಲಿ $2.3 ಟ್ರಿಲಿಯನ್‌ನಿಂದ $200 ಬಿಲಿಯನ್ ಕಡಿಮೆಯಾಗಿದೆ.ವಿಶ್ವದ ಮೊದಲ 55 ಬಿಲಿಯನೇರ್‌ಗಳಲ್ಲಿ ಭಾರತದ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ್ ನಡಾರ್ ಇದ್ದಾರೆ.ಭಾರತದಲ್ಲಿ 2022ರಲ್ಲಿ 166 ಬಿಲಿಯನೇರ್‌ಗಳಿದ್ದರೆ 2023ರಲ್ಲಿ 169 ಕ್ಕೆ ಏರಿಕೆಯಾಗಿದೆ. ಷೇರುಗಳ ದರ ಪತನ, ಯುನಿಕಾರ್ನಗಳ ಬಿಕ್ಕಟ್ಟು, ಹೆಚ್ಚುತ್ತಿರುವ ಬಡ್ಡಿ ದರದ ಪರಿಣಾಮ ಬಿಲಿಯನೇರ್‌ಗಳ ಸಂಪತ್ತು ಇಳಿಕೆಯಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ.ಫೋರ್ಬ್ಸ್ ಪ್ರಕಾರ ಅಮೆರಿಕದಲ್ಲಿ ಈಗಲೂ ಅತಿ ಹೆಚ್ಚು ಬಿಲಿಯನೇರ್‌ಗಳು ಇದ್ದಾರೆ.
ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ . ಈ ವರ್ಷದ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೈಕ್ರೋಸಾಫ್ಟ್‌ನ ಸ್ಟೀವ್ ಬಾಲ್ಮರ್, ಗೂಗಲ್‌ನ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್ ಮತ್ತು ಡೆಲ್ ಟೆಕ್ನಾಲಜೀಸ್‌ನ ಮೈಕೆಲ್ ಡೆಲ್‌ಗಿಂತ ಮೇಲಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ, ಬರ್ನಾರ್ಡ್ ಅರ್ನಾಲ್ಟ್ ಮೊದಲ ಸ್ಥಾನದಲ್ಲಿದ್ದಾರೆ, ಎಲೋನ್ ಮಸ್ಕ್ ಎರಡನೇ ಮತ್ತು ಜೆಫ್ ಬೆಜೋಸ್ ಮೂರನೇ ಸ್ಥಾನದಲ್ಲಿದ್ದಾರೆ.