26.3 C
Bengaluru
Friday, October 4, 2024

ತಂದೆಗಾಗಿ ‘ವರುಣಾ’ ತ್ಯಾಗ ಮಾಡಿದ ಅಧುನಿಕ ಕರ್ಣ ” Dr ಯತೀಂದ್ರ” ಪ್ರಾಮಾಣಿಕತೆಯ ಸ್ಟೋರಿ

#dr Yatindra #Siddaramaih, #Yatidra siddaramaih #Karnataka News

ಬೆಂಗಳೂರು, ಮೇ.15 ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಪ್ರಭಾವಿ ರಾಜಕಾರಣಿಗಳು ತಮ್ಮ ಮಕ್ಕಳಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ತಮ್ಮ ಕ್ಷೇತ್ರಗಳನ್ನೇ ಬಿಟ್ಟುಕೊಟ್ಟು ತ್ಯಾಗಮೂರ್ತಿಗಳಾಗಿದ್ದಾರೆ. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಇದಕ್ಕೆ ತದ್ವಿರುದ್ಧ. ತನ್ನ ತಂದೆಯ ರಾಜಕೀಯ ಭವಿಷ್ಯಕ್ಕಾಗಿ ತನ್ನ ಕ್ಷೇತ್ರವನ್ನು ಅಪ್ಪನಿಗೆ ಬಿಟ್ಟುಕೊಡುವ ಮೂಲಕ ಆಧುನಿಕ ಕರ್ಣ ಎನಿಸಿದ್ದಾರೆ.

Dr Yatindra Siddaramaih
Dr Yatindra Siddaramaiha vs ex Cm Siddaramaih

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ನಿಚ್ಚಳತೆ ಕಾಣುತ್ತಿದೆ. ಸಿದ್ದರಾಮಯ್ಯ ಚುನಾವಣೆ ಮುನ್ನ ಕೋಲಾರ, ಚಾಮರಾಜಪೇಟೆಯಲ್ಲಿ ಕಣಕ್ಕೆ ಇಳಿಯುವ ಮಾತುಗಳು ಕೇಳಿ ಬಂದಿದ್ದವು. ಕೊನೆಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸ್ವತಃ ಅಪ್ಪನಿಗಾಗಿ ವರುಣಾ ಕ್ಷೇತ್ರ ಬಿಟ್ಟುಕೊಟ್ಟರು. ತನ್ನ ತಂದೆಯ ರಾಜಕೀಯ ಭವಿಷ್ಯಕ್ಕಾಗಿ ಡಾ. ಯತೀಂದ್ರ ಸಿದ್ದರಾಮಯ್ಯ ತನ್ನ ಕ್ಷೇತ್ರವನ್ನು ತ್ಯಾಗ ಮಾಡಿ ಇಡೀ ರಾಜಕೀಯ ಕ್ಷೇತ್ರದಲ್ಲಿ ಆದರ್ಶತೆ ಮರೆದಿದ್ದಾರೆ.

ರಾಜ್ಯದಲ್ಲಿ ಸಾಕಷ್ಟು ರಾಜಕಾರಣಿಗಳು ತಮ್ಮ ಮಕ್ಕಳಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ತಮ್ಮ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದಾರೆ. ಆ ಸಾಲಿನಲ್ಲಿ ನೋಡುವುದಾದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಬಿ.ಎಸ್. ಯಡಿಯೂರಪ್ಪ ತನ್ನ ಪುತ್ರ ವಿಜಯೇಂದ್ರ ಅವರಿಗೆ ಶಿಕಾರಿಪುರವನ್ನು ಬಿಟ್ಟುಕೊಟ್ಟರು.

ವರುಣಾ ಮತ್ತು ಚಾಮರಾಜಪೇಟೆಯಲ್ಲಿ ಸೋತ ತನ್ನ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡಿರುವ ಮಾಜಿ ಸಚಿವ ವಿ. ಸೋಮಣ್ಣ ತನ್ನ ಪುತ್ರ ಅರುಣ್ ಸೋಮಣ್ಣನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಟ್ಟು ರಾಜಕೀಯ ನಿವೃತ್ತಿಯಾಗುವುದಾಗಿ ಘೋಷಣೆ ಮಾಡಿದ್ದಾರೆ. ಇತ್ತ ಆನಂದ್‌ ಸಿಂಗ್ ತಮ್ಮ ಪುತ್ರನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಹೆಣಗಾಡಿ ಸೋತರು. ಹಿರಿಯ ರಾಜಕಾರಣಿಗಳು ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ಕ್ಷೇತ್ರಗಳನ್ನು ತ್ಯಾಗ ಮಾಡಿದ್ದಾರೆ.

ಆದ್ರೆ ಡಾ. ಯತೀಂದ್ರ ಸಿದ್ದರಾಮಯ್ಯ ತನ್ನ ತಂದೆಗಾಗಿ ಕ್ಷೇತ್ರವನ್ನು ಬಿಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬ ಶಾಸಕರಾಗಿ ತನ್ನ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಮಾಡಿರುವ ಯತೀಂದ್ರ ಸಿದ್ದರಾಮಯ್ಯ ಸಾಮಾನ್ಯ ವ್ಯಕ್ತಿಯಾಗಿ ಜನರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥ ಪಡಿಸುವ ಮೂಲಕವೇ ಮನೆ ಮಾತನಾಗಿದ್ದಾರೆ. ಪ್ರಭಾವಿ,ಹಿರಿಯ ರಾಜಕಾರಣಿ ವಿ. ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಮಿಗಿಲಾಗಿ ರಾಜಕೀಯ ಒಳ ತಂತ್ರಗಳು ಕೆಲಸ ಮಾಡಿದ್ದವು. ಇದರ ನಡುವೆಯೂ ಸಿದ್ದರಾಮಯ್ಯ ವರುಣಾದಲ್ಲಿ ಗೆಲ್ಲಲು ಶ್ರೀ ರಕ್ಷೆಯಾಗಿರುವುದು ಯತೀಂದ್ರ ಅವರ ಜನರೊಂದಿಗಿನ ಆತ್ಮೀಯ ನಡೆ ಹಾಗೂ ಸರಳತೆ ಎಂದು ಸ್ಥಳೀಯರು ಹೇಳುತ್ತಾರೆ.

ಇದೇ ವರುಣಾ ಕ್ಷೇತ್ರದಲ್ಲಿ ಈ ಹಿಂದೆ ಸಿದ್ದರಾಮಯ್ಯ ಸೋತಿದ್ದರು. ಇದರಿಂದ ಬೇಸತ್ತಿದ್ದ ಸಿದ್ದರಾಮಯ್ಯ ಬಾದಾಮಿಗೆ ವಲಸೆ ಹೋಗಿದ್ದರು. ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅಕಾಲಿಕ ನಿಧನದ ಬಳಿಕ ಯತೀಂದ್ರ ಸಿದ್ದರಾಮಯ್ಯ ಅನಿವಾರ್ಯವಾಗಿ ರಾಜಕೀಯಕ್ಕೆ ಪ್ರವೇಶ ಮಾಡಬೇಕಾಯಿತು. ರಾಜಕೀಯದಿಂದ ಅಂತರ ಕಾಯ್ದುಕೊಂಡು ನಿಷ್ಠಾವಂತ ವೈದ್ಯನಾಗಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಒಬ್ಬ ಸಾಮಾನ್ಯ ಪ್ರಜೆಯಂತೆ ಜನರೊಂದಿಗೆ ನಡೆದುಕೊಳ್ಳುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅಪ್ಪನಿಗೆ ಸೋಲುಣಿಸಿದ್ದ ಕ್ಷೇತ್ರವನ್ನು ಮರಳಿ ಕಟ್ಟಿದ್ದು ಯತೀಂದ್ರ ಸಿದ್ದರಾಮಯ್ಯ ಪ್ರಾಮಾಣಿಕ ಕೆಲಸಗಳು. ಸಿದ್ದರಾಮಯ್ಯ ಅವರು ಸಿಎಂ ಆಗಲಿಕ್ಕೆ ಶ್ರೀ ರಕ್ಷೆ ಆಗಿದ್ದು ಡಾ. ಯತೀಂದ್ರ ಅವರ ತ್ಯಾಗ ಎಂದರೆ ತಪ್ಪಾಗಲಾರದು.

ನನ್ನನ್ನು ಸಾರ್ವಜನಿಕ ಸೇವೆ ಮಾಡೋಕೆ ಜನರು ಅಯ್ಕೆ ಮಾಡಿದ್ದಾರೆ. ನನಗೆ ಹೆಂಡತಿ ಇಲ್ಲ. ಮಕ್ಕಳು ಇಲ್ಲ. ನನಗೆ ಹಣ ಏನಕ್ಕೆ ? ನನಗೊಂದು ಆಸ್ಪತ್ರೆ ಕಟ್ಟಿಕೊಟ್ಟರೆ ಸಾಕು ಅದರಿಂದಲೂ ಜನರಿಗೆ ನನ್ನ ಕೈಯಲ್ಲಾದ ಸೇವೆ ಮಾಡುತ್ತೇನೆ. ಇದು ಯತೀಂದ್ರ ಅವರು ತನ್ನ ಆಪ್ತರೊಂದಿಗೆ ಹೇಳಿಕೊಂಡಿರುವ ಮನದಾಳದ ಮಾತು. ಹಣ ಮಾಡುವುದಕ್ಕೆ ರಾಜಕಾರಣಕ್ಕೆ ಬರುವ ಇಂದಿನ ಕಾಲದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರಂತಹ ಪ್ರಮಾಣಿಕ ವ್ಯಕ್ತಿತ್ವಗಳು ರಾಜಕಾರಣದಲ್ಲಿ ಸಿಗುವುದು ಬಹು ಅಪರೂಪ. ಇಂತಹ ವ್ಯಕ್ತಿತ್ವಗಳು ರಾಜಕಾರಣದಲ್ಲಿ ಹೆಚ್ಚಾಗಲಿ ಅಲ್ಲವೇ ?

Related News

spot_img

Revenue Alerts

spot_img

News

spot_img