21.4 C
Bengaluru
Saturday, July 27, 2024

ಎಲ್ಲಾ ಸಮುದಾಯಗಳ ನಾಯಕರಿಗೆ ಸಚಿವ ಸ್ಥಾನ: ಸಚಿವ ಸ್ಥಾನ ಹಂಚಿಕೆಯಲ್ಲಿ ಕಾಂಗ್ರೇಸ್ ಎಚ್ಚರಿಕೆಯ ನಡೆ:

ಬೆಂಗಳೂರು: ಮೇ:27;ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸಿದ್ದ ಕಾಂಗ್ರೇಸ್ ಪಕ್ಷ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲಗಳಿದ್ದರು ಸಮಯತೆಗೆದುಕೊಂಡು ಸಿಎಂ ರೇಸ್ ನಲ್ಲಿದ್ದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ (DK Shivakumar) ರವರ ಮನವೊಲಿಕೆ ಮಾಡಿ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಿ ಯಶಸ್ವಿಯಾಗಿತ್ತು. ಆದರೆ ಈ ಇಬ್ಬರು ನಾಯಕರ ಬಣದಲ್ಲಿರುವ  ಶಾಸಕರುಗಳಿಗೆ ಸಚಿವ ಸ್ಥಾನ ಹಂಚಿಕೆ ಮಾಡುವುದು ಕೂಡ ಕೈ ಹೈಕಮಾಂಡ್​ಗೆ  ತಲೆನೋವು ತಂದಿತ್ತು. ಈ ನಡುವೆ ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೆ ಡೆ​ಲ್ಲಿಗೆ ತೆರಳಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಎಲ್ಲಾ ಸಮುದಾಯಗಳ ನಾಯಕರಿಗೆ ಅದರಲ್ಲೂ ಪ್ರಾದೇಶಿಕತೆಗೆ ಒತ್ತುಕೊಟ್ಟು ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಿನಿನ್ನೆ ತಡರಾತ್ರಿ ನೂತನ ಸಚಿವ ಪಟ್ಟಿಯನ್ನು (Ministers List) ಬಿಡುಗಡೆ ಮಾಡಿದೆ.  ಈ ಸಂಬಂಧ ಇಂದು ಬೆಳಗ್ಗೆ 11:30ಕ್ಕೆ ರಾಜಭವನದ (Raj Bhavan) ಗಾಜಿನ ಮನೆಯಲ್ಲಿ ನೂತನ ಸಚಿವ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಯಾವ ಯಾವ ಸಮಯದಾಯದ ಕೈ ನಾಯಕರಿಗೆ ಸಚಿವ ಸ್ಥಾನ ಸಿಕ್ಕಿದೆ?
ಭೈರತಿ ಸುರೇಶ್ – ಕುರುಬ
ಕೆ.ವೆಂಕಟೇಶ್ – ಒಕ್ಕಲಿಗ
ಕೃಷ್ಣ ಬೈರೇಗೌಡ – ಒಕ್ಕಲಿಗ
ಡಾ.ಎಚ್.ಸಿ ಮಹದೇವಪ್ಪ – ಎಸ್.ಸಿ
ಈಶ್ವರ ಖಂಡ್ರೆ- ಬಣಜಿಗ ಲಿಂಗಾಯತ
ದಿನೇಶ್ ಗುಂಡುರಾವ್ – ಬ್ರಾಹ್ಮಣ
ಶರಣಬಸಪ್ಪ ದರ್ಶನಪುರ- ರೆಡ್ಡಿ ಲಿಂಗಾಯುತ
ಆರ್.ಬಿ ತಿಮ್ಮಾಪುರ – ಎಸ್.ಸಿ (ಎಡ ಗೈ)
ಎಸ್.ಎಸ್. ಮಲ್ಲಿಕಾರ್ಜುನ – ಸಾದರ ಲಿಂಗಾಯತ
ಶಿವರಾಜ ತಂಗಡಗಿ –  ಎಸ್.ಸಿ (ಭೋವಿ)
ನಾಗೇಂದ್ರ – ವಾಲ್ಮೀಕಿ (ಎಸ್.ಟಿ)
ಕೆ.ಎನ್. ರಾಜಣ್ಣ – ವಾಲ್ಮೀಕಿ (ಎಸ್.ಟಿ)
ರಹೀಂ ಖಾನ್ – ಮುಸ್ಲಿಂ
ಡಿ.ಸುಧಾಕರ್- ಜೈನ
ಎನ್.ಎಸ್. ಬೋಸರಾಜು – ರಾಜು ಕ್ಷತ್ರೀಯ
ಮಧು ಬಂಗಾರಪ್ಪ- ಈಡಿಗ
ಮಂಕಾಳ ವೈದ್ಯ – ಮೋಗವೀರ
ಹೆಚ್.ಕೆ ಪಾಟೀಲ್ – ನಾಮಧಾರಿ ರೆಡ್ಡಿ
ಲಕ್ಷ್ಮಿ ಹೆಬ್ಬಾಳ್ಕರ್ – ಪಂಚಮಸಾಲಿ
ಶಿವಾನಂದ ಪಾಟೀಲ್ – ಪಂಚಮಸಾಲಿ
ಚಲುವರಾಯಸ್ವಾಮಿ- ಒಕ್ಕಲಿಗ
ಡಾ.ಎಂ.ಸಿ ಸುಧಾಕರ್- ಒಕ್ಕಲಿಗ
ಬಿ.ನಾಗೇಂದ್ರ – ವಾಲ್ಮೀಕಿ (ಎಸ್.ಟಿ)

Related News

spot_img

Revenue Alerts

spot_img

News

spot_img