ಬೆಂಗಳೂರು (ಜು.26): ಈ ವರ್ಷದ ಆರಂಭದಲ್ಲಿ ಬೆಂಗಳೂರು ನಗರದ ನಾಗವಾರದ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣದ ಸರಳುಗಳು ಉರುಳಿಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ತೇಜಸ್ವಿನಿ ಎಲ್ ಸುಲಾಖೆ (26) ಆಕೆಯ ಪುತ್ರ ವಿಹಾನ್ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ 10 ಕೋಟಿ ರು. ನಷ್ಟ ಪರಿಹಾರ ನೀಡಲು ಆದೇಶಿಸುವಂತೆ ಕೋರಿ ಮೃತ ಮಹಿಳೆಯ ಪತಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ತುರ್ತು ನೋಟಿಸ್ ನೀಡಿದೆ.ಬಿಎಂಆರ್‌ಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು 2023ರ ಜನವರಿ 10ರಂದು ನಾಗವಾರ ಬಳಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಬಿದ್ದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಅರ್ಜಿದಾರರ ಪತ್ನಿ ತೇಜಸ್ವಿನಿ ಎಲ್ ಸುಲಾಖೆ (26) ಮತ್ತು ಅವರ ಎರಡೂವರೆ ವರ್ಷದ ಮಗ ವಿಹಾನ್ ಮೃತಪಟ್ಟಿದ್ದರು.ಸಂತ್ರಸ್ತರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಬಿಎಂಆರ್‌ಸಿಎಲ್ ಲೋಹಿತ್‌ಕುಮಾರ್‌ಗೆ ತಿಳಿಸಿತ್ತು.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ವಿಚಾರಣೆ ನಡೆಸಿದ ತಮ್ಮ ಅರ್ಜಿಯಲ್ಲಿ ಲೋಹಿತ್‌ಕುಮಾರ್ ಅವರು, “ನಿಷ್ಕ್ರಿಯತೆ, ಅಸಮರ್ಪಕ ಸುರಕ್ಷತಾ ಕ್ರಮಗಳು ಮತ್ತು ಅಸಡ್ಡೆಯಿಂದ ಬಲಿಯಾದ ಅಮಾಯಕರ ಜೀವಕ್ಕೆ ಕೇವಲ 20 ಲಕ್ಷ ರೂಪಾಯಿ ಪರಿಹಾರ ಸಾಕಾಗುವುದಿಲ್ಲ. ಮತ್ತು ಇದು ಕೇವಲ ಸುರಕ್ಷತಾ ಕೆಲಸದ ನಿರ್ಲಕ್ಷ್ಯವನ್ನು ಮರೆಮಾಡಲು ಕೇವಲ ಪರಿಹಾರವಾಗಿದೆ ,ಇತ್ತೀಚೆಗಷ್ಟೇ ಸಾಲ ಮಾಡಿ ಫ್ಲ್ಯಾಟ್‌ಗೆ ತೆರಳಿದ್ದ ಕುಟುಂಬಕ್ಕೆ ತೇಜಸ್ವಿನಿ ಆಧಾರವಾಗಿದ್ದವರು ಎಂದು ತಿಳಿಸಿರುವ ಅರ್ಜಿಯಲ್ಲಿ ಸಂತ್ರಸ್ತ ಕುಟುಂಬಕ್ಕೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಲಾಗಿದೆ.ಅರ್ಜಿಯ ಇತರ ಪ್ರತಿವಾದಿಗಳಲ್ಲಿ ಬಿಎಂಆರ್‌ಸಿಎಲ್‌ನ ಎಂಡಿ, ಮುಖ್ಯ ಎಂಜಿನಿಯರ್ ಮತ್ತು ಆಪರೇಷನ್ ಎಂಜಿನಿಯರ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್, ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಯ ಎಂಡಿ ಮತ್ತು ಅದರ ಪ್ರಾಜೆಕ್ಟ್ ಮ್ಯಾನೇಜರ್ ಸೇರಿದ್ದಾರೆ.