28.6 C
Bengaluru
Thursday, May 23, 2024

ಅಪಘಾತ ತಡೆಗಟ್ಟಲು ಕ್ರಮ –ಪೊಲೀಸರಿಂದ ಬಿಎಂಟಿಸಿ ಚಾಲಕರಿಗೆ ತರಬೇತಿ

# Bmtc # , Accident # City traffic police # Bmtc Drivers

ಬೆಂಗಳೂರು: ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಸುಗಳಿಂದ ಅಪಘಾತಗಳು ಸಂಭವಿಸೋದು ಹೆಚ್ಚಾಗುತ್ತಿದೆ. ಇದನ್ನ ಕಡಿಮೆ ಮಾಡಲು ಈಗ ನಗರ ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಇದರ ಅಂಗವಾಗಿ ನಿತ್ಯ 50 ಮಂದಿ ಬಿಎಂಟಿಸಿ ಚಾಲಕರಿಗೆ ತರೆಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದಾರೆ.

ಬೆಂಗಳೂರು ಮಹಾನಗರಲ್ಲಿ ಸುಲಭ ಸಂಚಾರ ಅನ್ನೋದು ಸುಲಭವಲ್ಲ. ಎಷ್ಟೇ ಜಾಗೃತಿ ವಹಿಸಿದ್ರೂ ಅಪಘಾತಗಳು ಸಂಭವಿಸಿ ಬಿಡುತ್ವೆ. ಇದು ಬಿಎಂಟಿಸಿ ಚಾಲಕರ ವಿಷಯದಲ್ಲೂ ಅಷ್ಟೇ. ಸಮಯದ ಒತ್ತಡ, ಸಂಚಾರ ದಟ್ಟಣೆ, ಕೆಲವೊಮ್ಮೆ ಅಡ್ಡಾದಿಡ್ಡಿಯಾಗಿ ನುಗ್ಗುವ ದ್ವಿಚಕ್ರ ವಾಹನಗಳ ಸವಾರರನ್ನ ತಪ್ಪಿಸಿ ಬಸ್ ಚಾಲನೆ ಮಾಡೋದು ಅಂದ್ರೆ ಅವರಿಗೆ ಸವಾಲೇ ಸರಿ. ಇಂಥ ಸಮಯದಲ್ಲೇ ಕೆಲವೊಮ್ಮೆ ಅಪಘಾತಗಳು ನಡೆದು ಹೋಗುತ್ವೆ. ಇದನ್ನ ಅರಿತುಕೊಂಡ ಸಂಚಾರಿ ಪೊಲೀಸರು ಈ ತರಬೇತಿ ಕಾರ್ಯಗಾರ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಕಾರ್ಯಗಾರದಲ್ಲಿ ಏನೆಲ್ಲಾ ತರಬೇತಿ ನೀಡಲಾಗುತ್ತೆ ಅಂದರೆ..

ಹೇಗಿದೆ ಚಾಲಕರಿಗೆ ತರಬೇತಿ.?
1.ಡಿಫೆನ್ಸಿವ್ ಡ್ರೈವಿಂಗ್
2.ಸುರಕ್ಷಿತವಾಗಿ ಬಸ್ ಚಾಲನೆ ಹೇಗೆ.?
3. ಕ್ಯಾಮೆರಾಗಳು ಹೇಗೆಲ್ಲಾ ಟ್ರಾಫಿಕ್ ಉಲ್ಲಂಘನೆ ದಾಖಲು ಮಾಡುತ್ತೆ
4.ಟ್ರಾಫಿಕ್ ರೂಲ್ಸ್ ಪಾಲಿಸೋದು ಹೇಗೆ.?
5. ಅಪಘಾತಕ್ಕೆ ಏನೆಲ್ಲಾ ಕಾರಣಗಳು ಆಗುತ್ತವೆ.?
6. ಮಕ್ಕಳು ಹಾಗೂ ಮಹಿಳೆಯರನ್ನ ಕಾಪಾಡುವುದು
7.ಚಾಲಕರು-ನಿರ್ವಾಹಕರು ಹೇಗೆ ಪೊಲೀಸರಿಗೆ ಸಹಕರಿಸಬೇಕು.?

ಒಂದು ಮಾಹಿತಿಯ ಆಧಾರದಂತೆ ಬೆಂಗಳೂರಿನಲ್ಲಿ ಪ್ರತಿವರ್ಷ ನೂರಾರು ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲಿ ಸುಮಾರು 100 ಅಪಘಾತಗಳು ಪ್ರಾಣಕ್ಕೆ ಎರವಾಗುತ್ತವೆ. 200ಕ್ಕೂ ಹೆಚ್ಚು ಗಂಭೀರ ಗಾಯಗಳ ಪ್ರಕರಣಗಳು ದಾಖಲಾಗ್ತಿವೆ. ಇದರಿಂದ ಇವುಗಳನ್ನ ಕಡಿಮೆ ಮಾಡಿ ಅಪಘಾತ ತಪ್ಪಿಸಲು ಈ ಕಾರ್ಯಗಾರ ನಡೆಸಲಾಗ್ತಿದೆ. ಇನ್ನು ಇದರಲ್ಲಿ ಪಾಲ್ಗೊಂಡ ಚಾಲಕರು ಇದರಿಂದ ತಮಗೆ ಸಾಕಷ್ಟು ಅನುಕೂಲ ಆಗಿದೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Related News

spot_img

Revenue Alerts

spot_img

News

spot_img