21 C
Bengaluru
Friday, October 25, 2024

Brazza Grand Vitara ಸೇರಿ 17000 ಹೊಸ ಕಾರ್ ಹಿಂಪಡೆದ ಮಾರುತಿ ಸುಜುಕಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ಬೆಂಗಳೂರು, ಜ.18: ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿಯೇ ಬಡವರ ವಾಹನವೆಂದು ಪ್ರಖ್ಯಾತವಾಗಿರುವ ದೈತ್ಯ ಮಾರುತಿ ಸುಜುಕಿ ಕಾರ್ ಕಂಪನಿಯು 08 ಡಿಸೆಂಬರ್ 2022 ಮತ್ತು ಜನವರಿ 12, 2023 ರ ನಡುವೆ ತಯಾರಿಸಲಾದ 17,000 ಕ್ಕೂ ಹೆಚ್ಚು ವಾಹನಗಳನ್ನು ತನ್ನ ಏರ್‌ಬ್ಯಾಗ್ ನಿಯಂತ್ರಕದಲ್ಲಿ ಸಂಭವನೀಯ ದೋಷದ ಕಾರಣದಿಂದ ಹಿಂಪಡೆಯುತ್ತಿರುವುದಾಗಿ ಬುಧವಾರ ಹೇಳಿದೆ.

ಈ ಕಂಪನಿಯು ತನ್ನ ಹೇಳಿಕೆಯಲ್ಲಿ, “ಕಂಪನಿಯು 8 ಡಿಸೆಂಬರ್ 2022 ಮತ್ತು 12 ಜನವರಿ, 2023 ರ ನಡುವೆ ತಯಾರಿಸಲಾದ ವಾಹನಗಳ ಪೈಕಿ ಅನುಮಾನ ವಿರುವ ಮಾಡೆಲ್‌ ಗಳಾದ Alto K10, S-Presso, Eeco, Brezza, Baleno ಮತ್ತು Grand Vitara ಸೇರಿದಂತೆ ಒಟ್ಟು 17,362 ವಾಹನಗಳನ್ನು ಹಿಂಪಡೆಯಲು ಘೋಷಿಸಿದೆ. ಇವುಗಳಲ್ಲಿ ದೋಷಗಳಿದ್ದಲ್ಲಿ ಏರ್‌ಬ್ಯಾಗ್ ನಿಯಂತ್ರಕವನ್ನು (ತೊಂದರೆ ಇರುವ ಭಾಗ)ಉಚಿತವಾಗಿ ಪರಿಶೀಲಿಸಲು ಮತ್ತು ಬದಲಾಯಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ ಎಂದು ಈ ಬಗ್ಗೆ ಮಿಂಟ್ ವರದಿ ಮಾಡಿದೆ. ಯಾವುದೇ ದೋಷವಿದ್ದಲ್ಲಿ, ಕಾರು ಅಪಘಾತದ ಸಮಯದಲ್ಲಿ ಏರ್‌ಬ್ಯಾಗ್‌ಗಳು ಮತ್ತು ಸೀಟ್ ಬೆಲ್ಟ್, pretensioners ನಿಯೋಜಿಸದೇ ಇರುವುದಕ್ಕೆ ಕಾರಣವಾಗಬಹುದು ಎಂದು ಕಂಪನಿ ಹೇಳಿದೆ.

ಇದರಿಂದ ತೊಂದರೆಗೆ ಒಳಗಾಗುವ ಗ್ರಾಹಕರು ಅಧಿಕೃತ ಕಾರ್ಯಾಗಾರಗಳು ಮತ್ತು ಆಟೋಮೊಬೈಲ್ ಸಂಪರ್ಕಿಸಿ ತೊಂದರೆಗೆ ಒಳಗಾಗಿರುವ ಭಾಗವನ್ನು ಬದಲಾಯಿಸುವವರೆಗೆ ಅವರು ತಮ್ಮ ವಾಹನಗಳನ್ನು ಓಡಿಸದಂತೆ ಅಥವಾ ಬಳಸದಂತೆ ಸೂಚಿಸಲಾಗಿದೆ.

ಮಾರುತಿ ಸುಜುಕಿ ಇಂಡಿಯಾ ಸೋಮವಾರ ತನ್ನ ವಾಹನಗಳ ಬೆಲೆಯನ್ನು ಸುಮಾರು 1.1 ಪ್ರತಿಶತದಷ್ಟು ಹೆಚ್ಚಿಸಿದೆ ಎಂದು ಘೋಷಿಸಿದ ನಂತರ ಈ ಕಾರಣದಿಂದಾಗಿ ಹಿಂಪಡೆಯಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾರು ತಯಾರಕರು ಕೈಗೊಂಡ ಎರಡನೇ ಬೆಲೆ ಏರಿಕೆ ಇದಾಗಿದೆ.

ಇದರಂತೆಯೇ ಜಪಾನಿನ ವಾಹನ ತಯಾರಕ ಸುಬಾರು ಮತ್ತು ಯುಎಸ್ ಜನರಲ್ ಮೋಟಾರ್ಸ್ ಸಹ ತಮ್ಮ ತಯಾರಿಕ ಕಾರುಗಳಲ್ಲಿ ಶಂಕಿತ ದೋಷಗಳಿರುವ ಸಾವಿರಾರು ವಾಹನಗಳನ್ನು ಹಿಂಪಡೆದಿವೆ. ಬೆಂಕಿಯ ಹೆಚ್ಚಿನ ಅಪಾಯದ ಬಗ್ಗೆ ಸುಬಾರು ಕಂಪನಿ ಸುಮಾರು 271,000 ವಾಹನಗಳನ್ನು ಹಿಂಪಡೆದಿದ್ದಾರೆ. USನ ಅತಿ ದೊಡ್ಡ ವಾಹನ ತಯಾರಕ, ಜನರಲ್ ಮೋಟಾರ್ಸ್ ಸುಮಾರು 825,000 ವಾಹನಗಳನ್ನು, US ನಿಂದ 740,000 ಮತ್ತು ಕೆನಡಾದಿಂದ 85,000 ವಾಹನಗಳನ್ನು ಹೆಡ್‌ಲೈಟ್ ಸಮಸ್ಯೆಗಳಿಂದ ಹಿಂಪಡೆದಿದೆ.

Related News

spot_img

Revenue Alerts

spot_img

News

spot_img