22.1 C
Bengaluru
Saturday, July 13, 2024

Lokayukta raid;ಲೋಕಾಯುಕ್ತ ಬಲೆಗೆ ಬಿದ್ದ ಮಾಸ್ತಿ ಪೊಲೀಸ್ ಕಾನ್‌ಸ್ಟೆಬಲ್‌

ಮಾಲೂರು;ವ್ಯಕ್ತಿಯೊಬ್ಬರಿಂದ ವಾಹನ ಬಿಡುಗಡೆಗೆ ₹30,000 ಲಂಚ ಪಡೆಯುವ ಸಂದರ್ಭದಲ್ಲಿ ಪಟ್ಟಣದ ಜೆಎಂಎಫ್‌ಸಿ(JMFC) ನ್ಯಾಯಾಲಯದ ಮುಖ್ಯ ರಸ್ತೆಯ ಬದಿಯಲ್ಲಿ ಮಾಸ್ತಿ ಪೊಲೀಸ್ ಕಾನ್‌ಸ್ಟೆಬಲ್‌ ಲೋಕಾಯುಕ್ತ ಪೊಲೀಸ್ ಬೆಲೆಗೆ ಸಿಕ್ಕಿ ಬಿದ್ದಿರುವ ಘಟನೆ ಬುಧವಾರ ನಡೆದಿದೆ. ತಮ್ಮ ವಾಹನ(Vechicle) ಬಿಡುಗಡೆಗಾಗಿ ಬೆಂಗಳೂರಿನ ಗಿರೀಶ್ ಎಂಬುವರು ಮಾಸ್ತಿ(Maasti) ಪೊಲೀಸ್‌ ಠಾಣೆಯಲ್ಲಿ(police station) ಪ್ರಕರಣವೊಂದಕ್ಕೆ ಸಂಬಂಧಿಸಿದ ತಮ್ಮ ವಾಹನ ಬಿಡುಗಡೆಗಾಗಿ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿದ್ದರು.ನ್ಯಾಯಾಲಯದಲ್ಲಿ ₹ 30,000 ಪಾವತಿಸಬೇಕೆಂದು ಬೇಡಿಕೆ ಇಟ್ಟಿದ್ದ ಪೊಲೀಸ್ ಕಾನ್‌ಸ್ಟೆಬಲ್‌ ಶಶಿಕುಮಾರ್ ಮಾಲೂರು ಪಟ್ಟಣದ ನ್ಯಾಯಾಲಯದ ರಸ್ತೆ ಬದಿಯಲ್ಲಿ ಗಿರೀಶ್ ಎಂಬುವವರಿಂದ ಹಣ ಪಡೆಯುತ್ತಿರುವ ವೇಳೆ ಸಿಕ್ಕಿ ಬಿದ್ದಿದ್ದಾರೆ.ಲೋಕಾಯುಕ್ತ ಎಸ್‌ಪಿ ಉಮೇಶ್ ಮಾರ್ಗದರ್ಶನದಲ್ಲಿ ಜಿಲ್ಲಾ ಲೋಕಾಯುಕ್ತ ಪೋಲಿಸ್ ನಿರೀಕ್ಷಕ ಯಶವಂತ್ ಕುಮಾರ್ ತನಿಖಾ ಕಾರ್ಯಾಚರಣೆ ನಡೆಸಿದರು.

Related News

spot_img

Revenue Alerts

spot_img

News

spot_img