22.6 C
Bengaluru
Saturday, July 27, 2024

LPG Subsidy; ಮಾ.31ರೊಳಗೆ ಗ್ಯಾಸ್ ಸಿಲಿಂಡರ್ e-kyc ಮಾಡಿಲ್ಲ ಅಂದ್ರೆ ಸಬ್ಸಿಡಿ ಹಣ ಬಂದ್,

#LPG Subsidy# Gas cylinder #e-kyc # done #March 31. #Subsidy ban.

ಬೆಂಗಳೂರು;ಇಂದಿನ ದಿನಗಳಲ್ಲಿ ಗ್ಯಾಸ್ ಸಂಪರ್ಕವಿಲ್ಲದ ಮನೆಯೇ ಇಲ್ಲ ಎನ್ನಬಹುದು. ಈ ಹಿನ್ನಲೆಯಲ್ಲಿ ಅಡುಗೆ ಅನಿಲ ಬಳಸುವವರಿಗೆ ಮಹತ್ವದ ಅಪ್ಡೇಟ್ ಬಂದಿದೆ.ನೀವೇನಾದರೂ ಗ್ಯಾಸ್ ಸಿಲೆಂಡರ್ ಗಳನ್ನು ಹೊಂದಿದ್ದು ಅದರಿಂದ ಸಬ್ಸಿಡಿ (Subsidy) ಯನ್ನು ಪಡೆಯುತ್ತಿದ್ದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು.ಸಿಲಿಂಡ‌ರ್ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮುಂದಿನ ಮಾ.31ರೊಳಗೆ ತಮ್ಮ ಗ್ಯಾಸ್ ಏಜೆನ್ಸಿ ಅಥವಾ ಆನ್‌ಲೈನ್‌ನಲ್ಲಿ KYC ಮಾಡಿಸುವುದು ಕಡ್ಡಾಯ. ಗ್ಯಾಸ್ ಸಿಲಿಂಡರ್‌ಗಳ ಮೇಲೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ನಿರಂತರವಾಗಿ ಪಡೆಯುವುದನ್ನು ಮುಂದುವರಿಸಲು ಈ ಪ್ರಕ್ರಿಯೆ ಮಾಡಬೇಕು. ಒಂದು ವೇಳೆ KYC ಮಾಡದಿದ್ದರೆ, ಮಾ.31ರ ನಂತರ ಸಬ್ಸಿಡಿ ನಿಮಗೆ ದೊರೆಯುವುದು ಅನುಮಾನ ಎನ್ನಲಾಗುತ್ತಿದೆ. ಹತ್ತಿರದ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ KYC ಮಾಡಿಸಬೇಕು ಎಂದು ವರದಿಯಾಗಿದೆ.ಗ್ಯಾಸ್ ಸಿಲಿಂಡರ್‌ಗಳ ಮೇಲೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ನಿರಂತರವಾಗಿ ಪಡೆಯುವುದನ್ನು ಮುಂದುವರಿಸಲು ಈ ಪ್ರಕ್ರಿಯೆ ಮಾಡಬೇಕು. ಒಂದು ವೇಳೆ KYC ಮಾಡದಿದ್ದರೆ, ಮಾ.31ರ ನಂತರ ಸಬ್ಸಿಡಿ ನಿಮಗೆ ದೊರೆಯುವುದು ಅನುಮಾನ ಎನ್ನಲಾಗುತ್ತಿದೆ. ಈ ಕೆವೈಸಿ ಅಪ್​ಡೇಟ್ ಮಾಡಲು ಎರಡು ವಿಧಾನಗಳಿವೆ. ಒಂದು ಗ್ಯಾಸ್ ಏಜೆನ್ಸಿ ಕಚೇರಿಯಿಂದ ನೇರವಾಗಿ ಹೋಗಿ ಆಫ್‌ಲೈನ್ ಮೂಲಕ ಅಪ್​ಡೇಟ್​ ಮಾಡಬಹುದು.

Gas Cylinder E- KYC ಮಾಡುವ ವಿಧಾನ ಹೇಗೆ?

* ಆನ್ಲೈನ್ KYC ಗಾಗಿ ಅದರ ಅಧಿಕೃತ ವೆಬ್ಸೈಟ್ https://www.mylpg.in/ ಗೆ ಭೇಟಿ ನೀಡಿ.

*HP, Bharat Gas, Indane Gas 0 ಸಂಪರ್ಕ ಹೊಂದಿರುವ ಗ್ಯಾಸ್ ಕಂಪನಿಯ ಕಾಣಿಸುವ ಚಿತ್ರದ ಮೇಲೆ ಕ್ಲಿಕ್ಕಿಸಿ

* KYC ಆಯ್ಕೆಯ ಆಯಾ ಕಂಪನಿ ಜಾಲತಾಣದ ಮೇಲೆ ಕ್ಲಿಕ್ಕಿಸಿ ಬಳಿಕ ಮೊಬೈಲ್, ಗ್ರಾಹಕ, LPG ID ಸಂಖ್ಯೆ ನಮೂದಿಸಿ

*ನಂತರ, ಆಧಾರ್ ಪರಿಶೀಲನೆಯನ್ನ ಕೇಳಲಾಗುತ್ತದೆ ಮತ್ತು ಒಟಿಪಿ ಜನರೇಟ್ ಆಯ್ಕೆ ಬರುತ್ತದೆ ಮತ್ತು OTP ರಚಿಸಿದ ನಂತರ ಹೊಸ ಪುಟ ತೆರೆಯುತ್ತದೆ

* ಈ ಪುಟದ ನಂತರ, ಕಂಪನಿಯು ಕೇಳಿದ ಮಾಹಿತಿಯನ್ನು ನೀಡಬೇಕಾಗುತ್ತದೆ ಮತ್ತು ನಿಮ್ಮ ಕೆವೈಸಿ ನವೀಕರಣ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Related News

spot_img

Revenue Alerts

spot_img

News

spot_img