24.2 C
Bengaluru
Friday, September 20, 2024

Lokayukta: ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ PDO

#Lokayukta #PDO #Bribe #Lokayukta trap

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಗನಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಲಂಚ ಪಡೆಯುವಾಗ ಪಿಡಿಓವೊಬ್ಬರು(PDO) ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.ಬಗನಕಟ್ಟೆ ಪಂಚಾಯತ್ ಡೆವಲಪ್ಮೆಂಟ್‌ ಆಫೀಸರ್ ಪಿಡಿಓ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.

ಶಿಕಾರಿಪುರ ತಾಲೂಕು ಸಂಕ್ಲಾಪುರ ವಾಸಿ ಸಾಕಮ್ಮ ಕೋಂ ವೆಂಕಟೇಶಪ್ಪ ಎಂಬುವವರ ಮನೆಯು 2021ರ ಮಹಾ ಮಳೆಯಿಂದ  ಗೋಡೆ ಕುಸಿದು ಬಿದ್ದ ಕಾರಣ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಸುನ‌ ನಿರ್ಮಾಣಕ್ಕಾಗಿ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಜಿಪಿಎಸ್‌ನಲ್ಲಿ ಮಾಹಿತಿ ಸಂಗ್ರಹಿಸಿ ವರದಿ ಮಾಡಲು ಬಗನಕಟ್ಟೆ ಗ್ರಾಪಂ ಪಿಡಿಓ ಮಂಜುನಾಥನವರು ಸಾಕಮ್ಮರವರಿಂದ ಇಪ್ಪತ್ತು ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟು, ಅದರಲ್ಲಿ 13 ಸಾವಿರ ರೂ. ಪಡೆದು ಬಾಕಿ ಹಣವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಸಾಕಮರವರಿಗೆ ಮನೆಯ ಪುನರ್ ನಿರ್ಮಾಣ ಕಾರ್ಯಕ್ಕೆ ರಾಜೀವ್‌ಗಾಂಧಿ ವಸತಿ ಯೋಜನೆಯಡಿಯಲ್ಲಿ 5 ಲಕ್ಷ ರೂ. ಪರಿಹಾರ ಧನ ಮಂಜೂರಾಗಿದ್ದು, ಮನೆಯ ಪುನರ್ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ. ಕಂತಿನ ಹಣ 1 ಲಕ್ಷ ರೂ. ಬಿಡುಗಡೆ ಮಾಡುವ ಸಂಬಂಧ ಪಿಡಿಓ ಮಂಜುನಾಥ ಮತ್ತೊಮ್ಮೆ 6000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನ. 16ರಂದು ಸಾಕಮ್ಮರವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ

Related News

spot_img

Revenue Alerts

spot_img

News

spot_img