22.1 C
Bengaluru
Monday, July 15, 2024

ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಸಾಲ ನೀಡುವ ಬ್ಯಾಂಕ್ ಗಳು ಯಾವುವು ಗೊತ್ತಾ..?

ಬೆಂಗಳೂರು, ಏ. 18 : ನಗರಗಳಲ್ಲಿ ಈಗ ಎಲ್ಲರ ಮನೆಯಲ್ಲೂ ಕಾರು, ಬೈಕ್ ಗಳು ಇರುತ್ತವೆ. ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಜೋರಾಗಿದೆ. ಲಕ್ಷಾಂತರ ರೂಪಾಯಿ ನೀಡಿ ಹೊಸ ಕಾರು ಖರೀದಿಸುವ ಬದಲು, ಕಡಿಮೆ ಬೆಲೆಗೆ ಸಿಗುವ ಹಳೆಯ ಕಾರುಗಳ ಖರೀದಿಗೆ ಎಲ್ಲರು ಮನಸ್ಸು ಮಾಡುತ್ತಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಗಾಗಿಯೇ ಹಲವು ಬ್ಯಾಂಕುಗಳು ಸಾಲ ಕೂಡ ನೀಡುತ್ತಿವೆ. ಅದರಲ್ಲೂ, ಕಡಿಮೆ ಬಡ್ಡಿ ದರದಲ್ಲಿ ಕಾರ್ ಲೋನ್ ಸಿಗುತ್ತಿವೆ.

ಹಾಗಾದರೆ ಯಾವ ಬ್ಯಾಂಕ್ ನಲ್ಲಿ ಸೆಕೆಂಡ್ ಹ್ಯಾಂಡ್ ಕಾರಿಗೆ ಕಡಿಮೆ ಬಡ್ಡಿದರದಲ್ಲಿ ಲೋನ್ ನೀಡುತ್ತದೆ ಎಂದು ತಿಳಿಯೋಣ ಬನ್ನಿ.. ಸೆಕೆಂಡ್ ಹ್ಯಾಂಡ್ ಖರೀದಿ ಮಾಡುವುದು ಮಧ್ಯಮ ವರ್ಗದವರಿಗೆ ಸಹಕಾರಿಯಾಗಿದೆ. ಹೀಗಾಗಿ ಇಂದು ಸೆಕೆಂಡ್ ಹ್ಯಾಂಡ್ ಕಾರುಗಳ ಬಿಸಿನೆಸ್ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಕಾರ್ ಲೋನ್ಗಾಗಿ ಆನ್ಲೈನ್ ನಲ್ಲೂ ಅಪ್ಲೈ ಮಾಡಬಹುದು. ಕೆಲ ಬ್ಯಾಂಕ್ ಗಳು 3 ವರ್ಷಕ್ಕಿಂತ ಹಳೆಯ ಕಾರುಗಳ ಖರೀದಿಗೆ ಲೋನ್ ನೀಡುವುದಿಲ್ಲ.

ಹೊಸ ಕಾರಿನ ರ್ಲೋನ್ ಬಡ್ಡಿದರಕ್ಕೆ ಹೋಲಿಸಿದರೆ, ಹಳೇ ಕಾರಿಗೆ ಹೆಚ್ಚಿನ ಬಡ್ಡಿದರ ಇರುತ್ತದೆ. ಕಾರಿನ ಮೌಲ್ಯ ಮತ್ತು ಸಾಲದ ಹಣದ ನಡುವಿನ ಅನುಪಾತ ಕೂಡ ಇದರಲ್ಲಿ ಗಮನಿಸಬೇಕಾಗುತ್ತದೆ. ನೀವು ಖರೀದಿಸುತ್ತಿರುವ ಕಾರಿನ ಮೌಲ್ಯವನ್ನು ಆಧರಿಸಿ ಬ್ಯಾಂಕ್ ಗಳಿ ಲೋನ್ ನೀಡಲಾಗುತ್ತದೆ. ಗರಿಷ್ಠ 5 ವರ್ಷದ ಅವಧಿಗೆ ಬ್ಯಾಂಕ್ ಗಳು ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಸಾಲ ಪಡೆಯಬಹುದು.

ಕೆನರಾ ಬ್ಯಾಂಕ್ ನಲ್ಲಿ ವಾರ್ಷಿಕ ಶೇ. 8.9 ರಿಂದ ಶೇ. 9.90ರವರೆಗೆ ಬಡ್ಡಿ ದರದಲ್ಲಿ ಕಾರು ಸಾಲಗಳು ಲಭ್ಯವಿದೆ. ಹಾಗೆಯೇ ಬ್ಯಾಂಕ್ ಆಫ್ ಬರೋಡ ವಿವಿಧ ಕ್ರೆಡಿಟ್ ಸ್ಕೋರ್ ಆಧರಿಸಿ ವಾರ್ಷಿಕ ಶೇ. 8.45ರಿಂದ ಬಡ್ಡಿದರವನ್ನು ಕಾರುಗಳಿಗೆ ವಿಧಿಸುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಾರ್ಷಿಕವಾಗಿ ಶೇ. 8.40 ರಿಂದ ಶೇ. 8.80ರ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಫಿಕ್ಸೆಡ್ ರೇಟ್ ಆಯ್ಕೆಯ ಅಡಿಯಲ್ಲಿ ಎಲ್ಲ ಗ್ರಾಹಕರಿಗೆ ವಾರ್ಷಿಕ ಶೇ. 9.30ರ ದರದಲ್ಲಿ ಕಾರಿನ ಮೇಲೆ ಸಾಲ ಲಭ್ಯವಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ವಿವಿಧ ಕ್ರೆಡಿಟ್ ಸ್ಕೋರ್ ಆಧರಿಸಿ ವಾರ್ಷಿಕ ಶೇ. 9.50ರಿಂದ ಶೇ. 10.50ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಕ್ರೆಡಿಟ್ ಸ್ಕೋರ್ ಆಧರಿಸಿ ಸಾಲ ನೀಡುತ್ತದೆ. ವಾರ್ಷಿಕವಾಗಿ ಶೇ. 10.40 ರಿಂದ ಶೇ. 10.50ರಷ್ಟು ಬಡ್ಡಿಯನ್ನು ಕಾರು ಲೋನ್ ಮೇಲೆ ವಿಧಿಸುತ್ತದೆ.

Related News

spot_img

Revenue Alerts

spot_img

News

spot_img