#LK advani #bharatratna #announces # pm narendramodi
ನವದೆಹಲಿ;ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿ ಭೀಷ್ಮ ಹಿರಿಯ ನಾಯಕ,ಆರ್‌ಎಸ್‌ಎಸ್ ಮುಖಂಡ ಎಲ್ ಕೆ ಅಡ್ವಾಣಿ(LK.Advani) ಅವರಿಗೆ ಕೇಂದ್ರ ಸರ್ಕಾರ ಭಾರತದಲ್ಲಿ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ(Bharathratna) ಪ್ರಶಸ್ತಿ ನೀಡಿ ಗೌರವಿಸಿದೆ. ಈ ಕುರಿತು ಪ್ರಧಾನಿ ಮೋದಿ ಅವರು ಟ್ವಿಟ್(Tweet) ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ”ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂಬ ವಿಷಯವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಕೂಡ ಅವರೊಂದಿಗೆ ಮಾತನಾಡಿದ್ದೇನೆ. ಈ ಗೌರವ ಸಂದಿರುವುದಕ್ಕೆ ಅಭಿನಂದಿಸಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ರಾಜಕೀಯ ಸಾಧನೆಗಾಗಿ ಭಾರತ ರತ್ನ ಘೋಷಿಸಲಾಗಿದೆ-1927ರ ನವೆಂಬರ್ 8ರಂದು ಸ್ವತಂತ್ರ್ಯ ಪೂರ್ವ ಭಾರತದ ಸಿಂಥ್ ಪ್ರಾಂತ್ಯದ ಗೊರೆಗಾಂವ್‌ನಲ್ಲಿ ಜನಿಸಿದರು. ಕಿಶಿಂಚಂದ್ ಮತ್ತು ಜ್ಞಾನಿದೇವಿ ಅವರ ಪೋಷಕರು. 1947 ರಲ್ಲಿ ಅವರು ಕರಾಚಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು, 1951 ರಲ್ಲಿ ಭಾರತೀಯ ಜನಸಂಘದ ಸದಸ್ಯರಾದರು. ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವ, ಉಪಪ್ರಧಾನಿಯಾಗಿ ಕೆಲಸ ಮಾಡಿದ್ದರು.ರಾಮಮಂದಿರ ನಿರ್ಮಾಣಕ್ಕೆ ರಥಯಾತ್ರೆ, ರಾಮಮಂದಿರ ನಿರ್ಮಾಣಕ್ಕೆ ರಥಯಾತ್ರೆ, ರಾಮಮಂದಿರ ನಿರ್ಮಾಣ ಹೋರಾಟ ಸೇರಿದಂತೆ ಇನ್ನಿತರೆ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವ, ಉಪಪ್ರಧಾನಿಯಾಗಿ ಕೆಲಸ ಮಾಡಿದ್ದರು.