25.3 C
Bengaluru
Friday, July 5, 2024

ಮನೆಯ ಅಲಂಕಾರ ಹೊಸ ವರ್ಷಕ್ಕೆ ಹೀಗಿರಲಿ;2023

ಡಿಸೆಂಬರ್ ತಿಂಗಳು ಬಂದಿದೆ ಮತ್ತು ಅದು ಮುಗಿದ ತಕ್ಷಣ, ಹೊಸ ವರ್ಷ ಅಂದರೆ 2023 ವರ್ಷವು ಪ್ರಾರಂಭವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಈ ಹೊಸ ವರ್ಷಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾನೆ ಮತ್ತು ಈ ವರ್ಷವು ಅವರಿಗೆ ಹೇಗೆ ಇರುತ್ತದೆ ಎಂಬುದರ ಕುರಿತು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ.

ಹೊಸ ವರ್ಷವನ್ನು ತುಂಬಾ ಖುಷಿ ಹಾಗೂ ಸಂತೋಷದಿಂದ ಸ್ವಾಗತಿಸುವುದು ಅಗತ್ಯ. ಹೊರಗಡೆ ಹೋಗಲು ಕೆಲವೊಂದು ನಿರ್ಬಂಧಗಳಿದ್ದರೂ ಮನೆಯಲ್ಲೇ ಸ್ನೇಹಿತರು ಹಾಗೂ ಸಂಬಂಧಿಕರ ಜತೆಗೆ ಹೊಸ ವರ್ಷವನ್ನು ಸ್ವಾಗತಿಸಬಹುದು. ಮನೆಯಲ್ಲೇ ಹೊಸ ವರ್ಷವನ್ನು ಆಚರಣೆ ಮಾಡುವುದಾದರೆ ಆಗ ಮನೆಯನ್ನು ಯಾವ ರೀತಿಯಿಂದ ಶೃಂಗಾರ ಮಾಡಬಹುದು ಎಂಬುವದನ್ನು ನಾವು ತಿಳಿದುಕೊಳ್ಳೋಣ

1.ಬಣ್ಣಮಯವಾದ ರಿಬ್ಬನ್ ಅಲಂಕಾರ
ಮನೆಯಲ್ಲಿ ಅದೇ ಹಳೆಯ ಕಾಗದಗಳ ಅಲಂಕಾರಗಳು ಇದ್ದರೆ ಅದನ್ನು ಬದಲಿಸಿ. ಬಣ್ಣದ ರಿಬ್ಬನ್ ಮತ್ತು ಬಣ್ಣದ ಕಾಗದಗಳ ಅಲಂಕಾರವನ್ನು ಕೈಗೊಳ್ಳಿ. ಅದು ಮನೆಯಲ್ಲಿ ಸಂಭ್ರಮದ ವಾತಾವರಣವನ್ನು ನೀಡುವುದು.

2,ಹೊಳೆಯುವ ದೀಪಗಳು

ಮನೆಯಲ್ಲಿ ಹೊಸ ತನದ ವಾತಾವರಣ ಮೂಡಲು ಹಾಲ್‍ನಲ್ಲಿ ಅಲಂಕರಿಸಿರುವ ಕ್ರಿಸ್‍ಮಸ್ ಮರಗಳನ್ನು ಹಾಗೂ ಮಿನುಗುವ ದೀಪಗಳನ್ನು ಜೋಡಿಸಿ. ಮೂಲೆಯಲ್ಲಿಮೇಣದ ಬತ್ತಿ ದೀಪಗಳನ್ನು ಇರಿಸಿ. ಇವು ಹೊಸ ವರ್ಷದ ಸಂಭ್ರಮ ಹಾಗೂ ಸ್ವಾಗತಕ್ಕೆ ಹೆಚ್ಚು ಉತ್ತೇಜನ ನೀಡುತ್ತವೆ.

3.​ಬಲೂನ್ ಗಳಿಂದ ಅಲಂಕಾರ ಮಾಡಿ
ಬಲೂನ್ ನಲ್ಲಿ ಹೊಸ ವರ್ಷದ ಸಂಖ್ಯೆಯನ್ನು ಬರೆದಿದ್ದರೆ ಅದು ಇನ್ನಷ್ಟು ಒಳ್ಳೆಯದು. ಹಳೆ ವರ್ಷದಲ್ಲಿ ನಿಮ್ಮ ಸಂತಸದ ಕ್ಷಣಗಳ ಕೆಲವು ಫೋಟೊಗಳನ್ನು ಈ ಬಲೂನ್ ಗೆ ಹಾಕಬಹುದು.ಕೇವಲ ಸ್ನೇಹಿತರ ಜತೆಗೆ ನೀವು ಹೊಸ ವರ್ಷಾಚರಣೆ ಆಚರಿಸಲು ಇಚ್ಛಿಸಿದ್ದರೆ ಆಗ ನೀವು ಬಲೂನ್ ಗಳಿಂದ ತುಂಬಾ ಸರಳವಾಗಿ ಆಚರಿಸಬಹುದು. ಮುಂದೆ ಕೂಡ ನೀವು ಇದನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಬಳಕೆ ಮಾಡಬಹುದು.

4.ಗೋಡೆಯ ಕರಕುಶಲ

ಕೆಲವೊಂದು ಕಲಾತ್ಮಕ ಅಥವಾ ಬೇರೆ ರೀತಿಯ ಗೋಡೆಯ ಕರಕುಶಲನ್ನು ನೀವು ನೇತು ಹಾಕಬಹುದು.
ಇದರಿಂದ ಪಾರ್ಟಿ ಮಾಡುವ ಜಾಗವು ತುಂಬಾ ಗಮನಸೆಳೆಯುವುದು.ಆನ್ ಲೈನ್ ನಿಂದಲೂ ನೀವು ಇದನ್ನು ತರಿಸಿಕೊಳ್ಳಬಹುದು.ಅಥವಾ ಮನೆಯಲ್ಲೇ ನೀವು ಇದನ್ನು ತಯಾರಿಸಬಹುದು. ಪೇಪರ್ ಬಳಸಿಕೊಂಡು ನಿಮ್ಮ ಚಿತ್ರಕೌಶಲ್ಯವನ್ನು ತೋರಿಸಬಹುದು.

Related News

spot_img

Revenue Alerts

spot_img

News

spot_img