22.9 C
Bengaluru
Friday, July 5, 2024

ಒಂದು ಜಮೀನಿಗೆ ಸಂಬಂಧಪಟ್ಟಂತೆ ಸರ್ವೆ ದಾಖಲೆಗಳ ಮಹತ್ವ ಏನು ? ಬ್ರಿಟೀಷರಿಗಿಂತಲೂ ಮೊದಲೇ ಮೈಸೂರು ಸಂಸ್ಥಾನದಲ್ಲಿ ಸರ್ವೆ ಇಲಾಖೆ ಇತ್ತು!

ಬೆಂಗಳೂರು, ಡಿ. 06: ಯಾವುದೇ ಒಂದು ಜಮೀನಿನ ಹಕ್ಕನ್ನು ದೃಢಪಡಿಸುವುದು ಸರ್ವೆ ದಾಖಲೆಗಳು ಮಾತ್ರ. ಈ ಸರ್ವೆ ದಾಖಲೆಗಳೇ ಬಹುತೇಕ ಕಂದಾಯ ಇಲಾಖೆಯ ದಾಖಲೆಗಳಿಗೆ ಮುಲಾಧಾರ. ಯಾವುದೇ ಜಮೀನಿನ ಪರಭಾರೆ ಮಾಡಬೇಕಾದರೆ ಸರ್ವೆ ದಾಖಲೆಗಳು ತುಂಬಾ ಮಹತ್ವ ಪಡೆದುಕೊಳ್ಳುತ್ತವೆ. ಜಮೀನಿಗೆ ಸಂಬಂಧಪಟ್ಟಂತೆ ಯಾವೆಲ್ಲಾ ಸರ್ವೆ ದಾಖಲೆಗಳು ಇರುತ್ತವೆ. ಅವುಗಳ ಮಹತ್ವ ಏನು ? ಅವನ್ನು ಪಡೆಯುವ ವಿಧಾನದ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.

ಜಮೀನಿನ ವಿವರ, ನಕ್ಷೆ, ಭೂಮಿಯ ಸ್ವರೂಪ, ಅದರ ಒಡೆತನದ ಹಕ್ಕನ್ನು ಒಳಗೊಂಡಿರುವ ದಾಖಲೆಗಳೇ ಸರ್ವೆ ದಾಖಲೆಗಳು. ಸರ್ವೆ ಮಹತ್ವ ಅರಿತಿದ್ದ ಮೈಸೂರು ಸಂಸ್ಥಾನ ಸ್ವಾತಂತ್ರ್ಯಕ್ಕೂ ಮೊದಲೇ ಸರ್ವೆ ದಾಖಲೆಗಳನ್ನು ಪರಿಚಯಿಸಿತ್ತು. ಪ್ರಥಮವಾಗಿ ಮೈಸೂರು ಸಂಹಿತೆ ಕಾಯ್ದೆ (Mysore Code) ಸ್ಥಾಪಿಸಲಾಯಿತು.ಅದರ ಅಡಿಯಲ್ಲಿ ಇಲಾಖಾವಾರು ಭೂ-ಸಂಹಿತೆ ಕಾಯ್ದೆ (Land Revenue Code) ಸ್ವಾತಂತ್ರ್ಯ ಪೂರ್ವ ಜಾರಿಯಲ್ಲಿತ್ತು.

ಸ್ವಾತಂತ್ರ್ಯಾನಂತರ ಭೂ ಸಂಹಿತೆ ರದ್ದುಗೊಳಿಸಿದ ನಂತರ ದಿನಾಂಕ 1-4-1964ರಂದು ಭೂ ಕಂದಾಯ ಕಾಯ್ದೆ 1961 ಜಾರಿಗೆ ಬಂದಿದೆ. ತದನಂತರ ಅನೇಕ ತಿದ್ದುಪಡಿಗಳೊಂದಿಗೆ ಸೆಕ್ಷನ್ 1ರಿಂದ 202 ಸೆಕ್ಷನ್‌ಗಳು ಈ ಕಾಯ್ದೆಯಲ್ಲಿ ಉದ್ರುತವಾಗಿವೆ. ಇದರನುಸಾರ ಭೂ ಕಂದಾಯ ನಿಯಮ ಹಾಗೂ ಉಪನಿಯಮಗಳು ಜಾರಿಯಲ್ಲಿವೆ. ಅದರ ಅನುಸಾರ ಭೂ ಕಂದಾಯ ಕಾಯ್ದೆ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:

I. ಭೂ ಗ್ರಾಮಾಂತರ ಸರ್ವೆ:
1) ಭೂ ಕಂದಾಯ ಕಾಯ್ದೆ 1961ರ ಅಧ್ಯಾಯ 9ರಲ್ಲಿ ಸೆಕ್ಷನ್ 106ರಿಂದ 113, ಅಧ್ಯಾಯ 10ರಲ್ಲಿ ಸೆಕ್ಷನ್ 114ರಿಂದ 126, ಅಧ್ಯಾಯ 12ರಲ್ಲಿ ಸೆಕ್ಷನ್ 137 ರಿಂದ 147, ಅಧ್ಯಾಯ 13ರಲ್ಲಿ ಸೆಕ್ಷನ್ 148 ಸರ್ವೆ ಭೂದಾಖಲೆಗಳು ಒಳಗೊಂಡಿರುತ್ತವೆ:
ಅದರ ಅನುಸಾರ:

(1) ಭೂ ಸರ್ವೆ ಮೂಲ ಟಿಪ್ಪಣಿ ಹಾಗೂ ಪಕ್ಕಾ ಬುಕ್ :
ಒಂದು ಜಮೀನಿನ ಮೂಲ ಕರ್ದ ( ಮೂಲ ಮಾಲೀಕ)ನನ್ನು ಗುರುತಿಸುತ್ತದೆ. ಆಸ್ತಿಯ ಮಾಲೀಕತ್ವ ದೃಢಪಡಿಸುವಲ್ಲಿ ಇದು ಮಹತ್ವದ ಸರ್ವೆ ದಾಖಲೆ. ಜಮೀನನ್ನು ಕ್ರಯ, ವಿಭಾಗ ಮಾಡಲು, ಮಾರಾಟ ಮಾಡಲು ಈ ದಾಖಲೆ ಅತ್ಯವಶ್ಯಕ.

(2) ಭೂ ರೀ ಸರ್ವೆ ಮೂಲ ಟಿಪ್ಪಣಿ
(3) ಭೂ ಹಿಸ್ಸಾ ಸರ್ವೆ (ಆರ್ ಆರ್( ಎಡ-ಬಲ) ಪಕ್ಕಾ ಬುಕ್)
(4) ಭೂ ಆಕಾರ್‌ಬಂದ್
(5) ಭೂ ಸಪ್ಲಿಮೆಂಟಲ್ ಆಕಾರ್ ಬಂದ್ (ಪೋಡಿ ದುರಸ್ತಿ ಪ್ರಕಾರ)
(6) ‘ಎ’ ‘ಬಿ’ ಖರಾಬ್ ಉತಾರ್
(7) ಗ್ರಾಮ ಭೂ ನಕಾಶೆ (ಈ ಮೇಲ್ಕಂಡ ಎಲ್ಲಾ ಪ್ರಕ್ರಿಯೆ ನಂತರ ಅಂತಿಮಗೊಂಡ ವಿಲೇಜ್ ಮ್ಯಾಪ್)
(8) ಹದ್ದುಬಸ್ತು (ಒತ್ತುವರಿ ಇತ್ಯಾದಿ ಗುರುತಿಸುವಿಕೆ)

II. ಸಿಟಿ ಸರ್ವೆ:
ಈ ಮೇಲ್ಕಂಡ ಪ್ರಕ್ರಿಯೆಗಳು ನಗರ ಹಾಗೂ ಗ್ರಾಮಾಂತರ ಹಿಡುವಳಿ ಜಮೀನುಗಳು ಹಾಗೂ ಖರಾಬು ಜಮೀನುಗಳಿಗೆ ಒಳಗೊಂಡಂತಹ ಗ್ರಾಮಾಂತರ ಮೋಜಿಣಿ ವ್ಯವಸ್ಥೆ ಎಂದು ಗುರುತಿಸಿದೆ.
ಇದನ್ನು ಆದರಿಸಿ ಯಾವುದೇ ಸ್ಥಳೀಯ ನಗರ ಅಭಿವೃದ್ಧಿ ಸಂಸ್ಥೆಗಳು/ ಪ್ರಾಧಿಕಾರಗಳು ಕಂಟ್ರಿ ಪ್ಲಾನ್ ಆ್ಯಕ್ಟ್ ಪ್ರಕಾರ ವ್ಯವಸ್ಥಿತವಾಗಿ ವ್ಯವಸಾಯೇತರ ನಗರ ಅಭಿವೃದ್ಧಿಗಳು ನಡೆಸಲು ಪ್ರದೇಶ ಯೋಜನಾ ಕಾಯ್ದೆಯನ್ನು ಸ್ಥಳೀಯ ನಗರ ಅಭಿವೃದ್ಧಿ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ ಕಾಯ್ದೆ ಕಾನೂನು ನಿಯಮ ರೆಗುಲೇಷನ್‌ಗಳನ್ನು ಮಾಡಿಕೊಂಡು ನಗರದ ಬಡಾವಣೆ ವ್ಯವಸ್ಥೆ ಕಾನೂನು ಬದ್ಧವಾಗಿ ಜಾರಿಗೊಳಿಸಲಾಗಿದೆ.

ಅದರಲ್ಲಿ ಪ್ರಮುಖವಾಗಿ ಕೆಲವು ಮುನ್ಸಿಪಲ್ ಕಾರ್ಪೊರೇಷನ್‌ಗಳು, ಕೆಲವು ಮಹಾನಗರ ಪಾಲಿಕೆಗಳು, ಕೆಲವು ಬೃಹತ್ ಮಹಾನಗರ ಪಾಲಿಕೆಗಳು, ಕೆಲವು ಮೆಟ್ರೋ ಪಾಲಿಟನ್ ನಗರಗಳು ಆಗಿ ವರ್ಗೀಕರಿಸಿ ನಗರ ವ್ಯವಸ್ಥೆಯನ್ನು ಯೋಜನಾ ಬದ್ಧವಾಗಿ ಸುಸ್ಥಿರಗೊಳಿಸಲಾಗುತ್ತಿದೆ. ಅದರಂತೆ, ಬೆಂಗಳೂರು ಮಹಾನಗರ ಪಾಲಿಕೆ ಆದಂತಹ ಸಂದರ್ಭದಲ್ಲಿಖರಾಬ್/ ಭೂ ಹಿಡುವಳಿ ಜಮೀನುಗಳನ್ನು ವ್ಯವಸಾಯೇತರ ಜಮೀನುಗಳಾಗಿ ಕೈಗಾರಿಕೆ, ವಾಣಿಜ್ಯ, ವಸತಿ ಬಳಕೆಗೆ ಭೂ ಪರಿವರ್ತನೆ ಮಾಡಿದಂತಹ ಜಮೀನುಗಳನ್ನು ಸಿಟಿ ಸರ್ವೆ ವ್ಯಾಪ್ತಿಯಲ್ಲಿ ವರ್ಗೀಕರಿಸಿ ಕೆಲವು ನಗರ ಪಾಲಿಕೆ ಟೆರಿಟೋರಿಯಲ್ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತವೆ.

ಭೂ ಕಂದಾಯ ಕಾಯ್ದೆ 1961ರ ಅಧ್ಯಾಯ 9ರಲ್ಲಿ ಸೆಕ್ಷನ್ 106ರಿಂದ 113, ಅಧ್ಯಾಯ 10ರಲ್ಲಿ ಸೆಕ್ಷನ್ 114ರಿಂದ 126, ಅಧ್ಯಾಯ 12ರಲ್ಲಿ ಸೆಕ್ಷನ್ 137 ರಿಂದ 147, ಅಧ್ಯಾಯ 13ರಲ್ಲಿ ಸೆಕ್ಷನ್ 148 ಸರ್ವೆ ಭೂದಾಖಲೆಗಳು ಒಳಗೊಂಡಿರುತ್ತವೆ:

Related News

spot_img

Revenue Alerts

spot_img

News

spot_img