27.4 C
Bengaluru
Monday, November 4, 2024

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂ ದಾಖಲೆ ಅಧಿಕಾರಿ

#Land records #officer # Lokayukta’s #trap # taking bribe

ಬೆಂಗಳೂರು;ಚಿತ್ರದುರ್ಗ(Chitradurga) ಜಿಲ್ಲೆಯ ಚಳ್ಳಕೆರೆ ನಗರದಲ್ಲಿರುವ ಭೂ ದಾಖಲೆ(Land record) ಅಧಿಕಾರಿ ಕಾರು ಡ್ರೈವರ್ ಕಿರಣ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ನಡೆದಿದೆ,ಪಹಣಿ ಬೇರೆಗೊಳಿಸಲು ಭೂದಾಖಲೆ ಇಲಾಖೆ(Land Records Department) ಸಹಾಯಕ ನಿರ್ದೇಶಕ ಗಂಗಯ್ಯ ಲಂಚಕ್ಕೆ (Bribe) ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ.ಭೂ ದಾಖಲೆ ಇಲಾಖೆ ಉಪನಿರ್ದೇಶಕ ಗಂಗಯ್ಯ ಎಂಬುವವರು 15ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು.ಕಾರಿನ ಡ್ರೈವರ್ ಕಿರಣ್ ಎಂಬುವರು ರೈತರಿಂದ 10ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ದೂರು ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಎಸ್​ಪಿ ವಾಸುದೇವರಾಮ್, ಡಿವೈಎಸ್​ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ,ಓಬಳಾಪುರದ ಜಯಣ್ಣ ಎಂಬುವರು ಗಂಗಯ್ಯ ಅವರು 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದಾರೆ.ದೂರು ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಎಸ್​ಪಿ ವಾಸುದೇವರಾಮ್, ಡಿವೈಎಸ್​ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತರ ದಾಳಿ ವೇಳೆ ಸ್ಥಳದಿಂದ ಅಧಿಕಾರಿ ಪಾರಾಗಿದ್ದರು ಎನ್ನಲಾಗಿದೆ. ಇನ್ನು, ಲೋಕಾಯುಕ್ತ ಪೊಲೀಸರು 10 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದ ಚಾಲಕ ಕಿರಣ್ ಎಂಬುವರು ವಶಕ್ಕೆ ಪಡೆದುಕೊಂಡಿದ್ದು, ಘಟನೆಯ ತನಿಖೆಯನ್ನು ಮುಂದುವರಿಸಿದ್ದಾರೆ.

Related News

spot_img

Revenue Alerts

spot_img

News

spot_img