24.8 C
Bengaluru
Sunday, May 19, 2024

ಶ್ರೀ ರಾಮ ನವಮಿಯಂದು ನಿಮಗೆ ತಿಳಿಯದ ರಾಮನ ಬಗ್ಗೆ ಮಾಹಿತಿ ಪಡೆಯಿರಿ

ಬೆಂಗಳೂರು, ಮಾ. 29 : ನಾಳೆ ಶ್ರೀ ರಾಮ ನವಮಿ ಹಬ್ಬ. ದೇಶಾದ್ಯಂತ ಎಲ್ಲರೂ ಸಂಭ್ರಮದಿಂದ ಶ್ರೀ ರಾಮ ನವಮಿ ಅನ್ನು ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ನಾವು ಶ್ರೀ ರಾಮನ ಬಗ್ಗೆ ತಿಳಿಯದ ಕೆಲ ವಿಚಾರಗಳನ್ನು ಅರಿತುಕೊಳ್ಳೋಣ. ಅದರಲ್ಲಿ ಶ್ರೀ ರಾಮನ ಹೆಸರಿನ ಅರ್ಥ, ವಿಷ್ಣು ಸಹಸ್ರನಾಮದಲ್ಲಿ ರಾಮ ಹೆಸರು ಸೇರಿದಂತೆ ಹಲವು ವಿಚಾರಗಳನ್ನು ತಿಳಿಯೋಣ.

ಶ್ರೀರಾಮ ಎಂದು ಹೆಸರನ್ನು ನೀಡಿದ್ದು ಸೂರ್ಯ ವಂಶದ ವಸಿಷ್ಠ ಗುರುಗಳು. ರಾಮ ಎಂದರೆ ಇದರಲ್ಲಿ ಎರಡು ಬೀಜಾಕ್ಷರಗಳು ಸೇರಿಕೊಂಡಿದೆ. ರಾ ಎಂದರೆ ಅದನ್ನು ರಾಂ ಎಂದು. ಇದನ್ನು ಅಗ್ನಿ ಬೀಜ ಮಂತ್ರ ಇನ್ನು ಮ ಎಂದರೆ ಅದು ಮಂ ಆಗಿದ್ದು, ಇದನ್ನು ಅಮೃತ ಬೀಜ ಮಂತ್ರದಿಂದ ತೆಗೆದುಕೊಳ್ಳಲಾಗಿದೆ. ಈ ಮೂಲಕ ರಾಮ ಎಂದು ಹೆಸರನ್ನಿಟ್ಟಿದ್ದು, ರಾ ಎಂಬ ಅಗ್ನಿ ಬೀಜಮಂತ್ರ ರಾಮನಿಗೆ ಆತ್ಮ ಹಾಗೂ ದೇಹಕ್ಕೆ ಚೈತನ್ಯವನ್ನು ತುಂಬುತ್ತದೆ. ಇನ್ನು ಮಾ ಎಂಬ ಅಮೃತ ಬೀಜವು ರಾಮನಿಗೆ ಆಯಾಸದಿಂದ ಪುನಶ್ಚೇತನಗೊಳಿಸಲು ಸಹಕಾರಿಯಾಗಿದೆ.

ಇನ್ನು ನಿತ್ಯ ಸಾಕಷ್ಟು ಮಂದಿ ವಿಷ್ಣು ಸಹಸ್ರನಾಮವನ್ನು ಹೇಳುತ್ತಾರೆ. ಇನ್ನು ದೇವಸ್ಥಾನಗಲಲ್ಲಿ, ಕೆಲವರ ಮನೆಯಲ್ಲೂ ಬೆಳಗ್ಗೆ ಹಾಗೂ ಸಂಜೆ ವಿಷ್ಣು ಸಹಸ್ರನಾಮವನ್ನು ಪ್ಲೇ ಮಾಡಲಾಗುತ್ತದೆ. ಈ ವಿಷ್ಣು ಸಹಸ್ರ ನಾಮದಲ್ಲಿ 394ನೇ ಹೆಸರು ಶ್ರೀರಾಮ ಅವರದ್ದಾಗಿದೆ. ಇನ್ನು ಇದರಲ್ಲಿ ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ’ ಎಂದು ಮೂರು ಬಾರಿ ಹೇಳಿದರೂ, ಇಡೀ ಸಹಸ್ರನಾಮವನ್ನು ಹೇಳಿದ ಫಲ ಸಿಗುತ್ತದೆ ಎಂದು ಹೇಳಲಾಗಿದೆ.

ಇನ್ನು ಪರಶುರಾಮನು ಒಂದು ಬಾರಿ ಶ್ರೀರಾಮನಿಗೆ ಮಹಾವಿಷ್ಣುವಿನ ಬಿಲ್ಲನ್ನು ಎಳೆಯುವಂತೆ ಸವಾಲು ಹಾಕುತ್ತಾನೆ. ಶ್ರೀರಾಮನು ಒಂದು ಕ್ಷಣವೂ ಯೋಚಿಸದೆ ಈ ಸವಾಲನ್ನು ಸ್ವೀಕರಿಸುತ್ತಾನೆ. ಬಿಲ್ಲನ್ನು ಎಳೆದು ಸವಾಲನ್ನು ಗೆಲ್ಲುತ್ತಾನೆ. ಆಗ ಪರಶುರಾಮನಿಗೆ ಶ್ರೀರಾಮನು ಸಾಮಾನ್ಯ ಮನುಷ್ಯನಲ್ಲ ಎಂಬುದರ ಬಗ್ಗೆ ಅರಿವಾಗುತ್ತದೆ.

Related News

spot_img

Revenue Alerts

spot_img

News

spot_img