ಬೆಂಗಳೂರು, ಮೇ. 11 : ಜನರು ಹಣ ಉಳಿತಾಯ ಮಾಡಲು ನೂರಾರು ದಾರಿಗಳನ್ನು ಹುಡುಕುತ್ತಾರೆ. ತಮ್ಮ ಸುತ್ತಮುತ್ತಲಿನ ಜನರ ಬಳಿ ಚೀಟಿ ಹಾಕುವುದು, ಬ್ಯಾಂಕ್ ಅಕೌಂಟ್ ನಲ್ಲಿ ಕೂಡಿಡುವುದು, ಇಲ್ಲವೇ ಯಾವುದಾದರೂ ಯೋಜನೆಗಳಲ್ಲಿ ಹಣ ಹೂಡುವುದು ಮಾಡುತ್ತಾರೆ. ಅದು ಹೇಗಾದರೂ ಸರಿಯೇ ಹಣವನ್ನು ಸೇವ್ ಮಾಡಬೇಕು ಎಂಬುದು ಎಲ್ಲರ ಆಲೋಚನೆಯಾಗಿರುತ್ತದೆ. ಅದರಲ್ಲೂ ಕೆಲವರು ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ದರವಿದೆ. ಯಾವ ಬ್ಯಾಂಕ್ ನಲ್ಲಿ ಹಣ ಸೇವ್ ಮಾಡಿದರೆ, ಹೆಚ್ಚು ಲಾಭ ಎಂದು ನೋಡುತ್ತಾರೆ. ಅಂತಹವರಿಗೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಆರ್ ಡಿಗೆ ಬಡ್ಡಿ ಹೆಚ್ಚಿದೆ ಎಂದು ತಿಳಿಯೋಣ ಬನ್ನಿ..
ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಸಾಮಾನ್ಯರಿಗೆ ಶೇ. 7ರಷ್ಟು ವಾರ್ಷಿಕ ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇ. 7.5 ಬಡ್ಡಿ ಅನ್ನು ನೀಡುತ್ತದೆ. ಇದೇ ರೀತಿಯಲ್ಲಿ ಆ್ಯಕ್ಸಿಸ್ ಬ್ಯಾಂಕ್ ನಲ್ಲೂ ಇದೇ ರೀತಿ ಇದೆ. ಅದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆರ್ ಡಿಗೆ ಸಾಮಾನ್ಯರಿಗೆ ಶೇ. 6.8ರಷ್ಟು ಬಡ್ಡಿ ಕೊಟ್ಟರೆ, ಹಿರಿಯ ನಾಗರಿಕರಿಗೆ ಶೇ. 7.30 ಬಡ್ಡಿ ಬರುತ್ತದೆ. ಕರ್ಣಾಟಕ ಬ್ಯಾಂಕ್ನಲ್ಲಿ ಆರ್ಡಿ ಠೇವಣಿ ಮಾಡಿದರೆ ಸಾಮಾನ್ಯ ನಾಗರಿಕರಿಗೆ ಶೇ 7.20 ರಷ್ಟು ಹಾಗೂ ಹಿರಿಯರಿಗೆ ಶೇ. 7.6 ರಷ್ಟು ಬಡ್ಡಿ ದೊರೆಯುತ್ತದೆ.
ಇನ್ನು ಡಿಸಿಬಿ ಬ್ಯಾಂಕ್ನಲ್ಲಿ ಶೇ. 7.6 ರಷ್ಟು ಬಡ್ಡಿಯನ್ನು ಆರ್ ಡಿಗೆ ನೀಡಲಾಗುತ್ತದೆ. ಇದರಂತೆ ಸ್ಮಾಲ್ ಫೈನಾನ್ಸ್ ಗಳಲ್ಲೂ ಕೂಡ ಆರ್ ಡಿ ಗಳಿಗೆ ಹೆಚ್ಚಿನ ಬಡ್ಡಿಗಳನ್ನು ಕೂಡ ನೀಡುತ್ತದೆ. ಸೂರ್ಯೋದಯ್, ಉಜ್ಜೀವನ್ ಸೇರಿದಂತೆ ಹಲವು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಆರ್ಡಿಗೆ ಶೇ. 7ಕ್ಕಿಂತಲೂ ಹೆಚ್ಚು ಬಡ್ಡಿಯನ್ನು ನೀಡುತ್ತವೆ. ಆರ್ ಡಿ ಗಳನ್ನು ಎಲ್ಲಾ ಬ್ಯಾಂಕ್ ಗಳಲ್ಲಿ 1000 ರೂ. ನಿಂದ ಹಿಡಿದು 10,000 ವರೆಗೂ ಕಟ್ಟಬಹುದು. ಒಂದು ವರ್ಷ ಅವಧಿಯಿಂದ ಹತ್ತು ವರ್ಷ ಅವಧೀಯವರೆಗೂ ನಮಗೆ ಬೇಕಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.