ಬೆಂಗಳೂರು, ಜು. 08 : ರೇಮಂಡ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರ ಆಸ್ತಿಯ ಬಗ್ಗೆ ಕೇಳಿದರೆ, ನಿಮ್ಮ ತಲೆ ತಿರುಗುವುದು ಗ್ಯಾರೆಂಟಿ, ಹತ್ತಾರು ಕಾರುಗಳು, ಸ್ವಂತ ಜೆಟ್, ನೌಕೆಗಳನ್ನು ಹೊಂದಿದ್ದಾರೆ. ಗೌತಮ್ ಸಿಂಘಾನಿಯಾ ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ನಿವ್ವಳ ಮೌಲ್ಯ ಸುಮಾರು USD 1.4 ಶತಕೋಟಿ. ಐಷಾರಾಮಿ ಜೀವನ ಇವರದ್ದಾಗಿದ್ದು, ಇವರ ಬಳಿ ಏನೆಲ್ಲಾ ಇದೆ..? ಎಷ್ಟು ಕಾರುಗಳಿವೆ ಎಂಬುದನ್ನು ತಿಳಿಯೋಣ ಬನ್ನಿ..
ಇವರ ಬಳಿ ಐಷಾರಾಮಿ ಕಾರುಗಳು ಇವೆ. ಗೌತಮ್ ಸಿಂಘಾನಿಯಾ ಅವರ ಗ್ಯಾರೇಜ್ನಲ್ಲಿ ಹಲವು ದುಬಾರಿ ಕಾರುಗಳು ಇವೆ. ಲಂಬೋರ್ಗಿನಿ ಗಲ್ಲಾರ್ಡೊ ಎಲ್ ಪಿ570 ಸೂಪರ್ ಲೆಗ್ಗೆರಾ, ಲೋಟಸ್ ಎಲಿಸ್ ಕನ್ವರ್ಟಿಬಲ್, ನಿಸ್ಸಾನ್ ಸ್ಟೈಲೈನ್ ಜಿಟಿಆರ್, ಹೋಂಡಾ ಎಸ್2000, ಫೆರಾರಿ 458 ಇಟಾಲಿಯಾ ಹೌಗೂ ಆಡಿ ಕ್ಯೂ7 ಸೇರಿವೆ. ಅಷ್ಟೇ ಅಲ್ಲದೇ, ಎರಡು ಹೆಲಿಕಾಪ್ಟರ್ಗಳನ್ನು ಹೊಂದಿದ್ದಾರೆ. ಇದರೊಂದಿಗೆ ಖಾಸಗಿ ಜೆಟ್ ಬೊಂಬಾರ್ಡಿಯರ್ ಚಾಲೆಂಜ 600 ಇವರ ಬಳಿ ಇದ್ದು, ಇದರ ಬೆಲೆ 150 ಕೋಟಿ ರೂಪಾಯಿಗಳು.
ಇನ್ನು ಸ್ಪೀಡ್ಬೋಟ್ಗಳನ್ನು ಗೌತಮ್ ಸಿಂಘಾನಿಯಾ ಅವರು ಬಹಳ ಇಷ್ಟಪಡುತ್ತಾರೆ. ಅದಕ್ಕಾಗಿಯೇ ತಮ್ಮ ಸ್ಪೀಡ್ಬೋಟ್ಗಳಿಗೆ ಜೇಮ್ಸ್ ಬಾಂಡ್ ಚಿತ್ರಗಳ ಹೆಸರನ್ನು ಇಟ್ಟಿದ್ದಾರೆ. ಗೋಲೊನಿ, ಗೋಲ್ಡ್ ಫಿಂಗರ್, ಆಕ್ಟೋಪಸ್ಸಿ ಹಾಗೂ ಥಂಡರ್ಬಾಲ್ ಎಂದು ಸ್ಪೀಡ್ ಬೋಟ್ ಗಳಿಗೆ ಹೆಸರಿಟ್ಟಿದ್ದಾರೆ. ಇದಿಷ್ಟೇ ಅಲ್ಲದೇ, ಎರಡು ಐಷಾರಾಮಿ ವಿಹಾರ ನೌಕೆಗಳನ್ನು ಕೂಡ ಗೌತಮ್ ಸಿಂಘಾನಿಯಾ ಅವರ ಬಳಿ ಇದೆ. ಮೂನ್ರೇಕರ್ ನಲ್ಲಿ 10 ಜನರು ಇರಬಹುದು ಎನ್ನಲಾಗಿದೆ.
ಈ ವಿಹಾರ ನೌಕೆಯಲ್ಲಿ ಸ್ಥಳವಿದೆ. ಇದು ಜಿಮ್, ಸಿನಿಮಾ ಹಾಲ್ ಕೂಡ ಇದ್ದು, ಇನ್ನೊಂದು ವಿಹಾರದ ಹೆಸರು ಅಶೇನಾ. ಇದನ್ನು ತೇಗದಿಂದ ನಿರ್ಮಿಸಿದ್ದು, 8 ಸಿಬ್ಬಂದಿಯ ಜೊತೆಗೆ 10 ಜನ ಇರಬಹುದು. ಇನ್ನು ಗೌತಮ್ ಸಿಂಘಾನಿಯಾ ಅವರು 6000 ಕೋಟಿ ಮೌಲ್ಯದ ಜೆಕೆ ಹೌಸ್ ನಲ್ಲಿ ವಾಸ ಮಾಡುತ್ತಿದ್ದಾರೆ. ಈ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಜೀವನ ವಾಸವಿದ್ದಾರೆ.