ಕಲಬುರಗಿ;PSI & KEA ಹುದ್ದೆಗಳ ಪರೀಕ್ಷೆಗಳ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿ ಆರ್.ಡಿ ಪಾಟೀಲ್‌ನನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ಮಾಡಿರುವ ಆರೋಪದ ಹಿನ್ನೆಲೆ ಸಿಪಿಐ ಯೊಬ್ಬರನ್ನು ಅಮಾನತು(Suspend) ಮಾಡಲಾಗಿದೆ. ಕಲಬುರಗಿಯ ಅಫಜಲಪುರದ ಸಿಪಿಐ(CPI) ಪಂಡಿತ್ ಸಗರ್ ಎಂಬಾತರೇ ಅಮಾನತುಗೊಂಡ ಪೊಲೀಸ್ ಅಧಿಕಾರಿಯಾಗಿದ್ದಾರೆ. ನ.6ರಂದು ಆರ್.ಡಿ ಪಾಟೀಲ್ ಕಲಬುರಗಿಯ ತಾನು ಇದ್ದ ವಸತಿ ಸಮುಚ್ಚಯದಿಂದ(Apartment) ಪರಾರಿಯಾಗಿದ್ದನು. ಹೀಗಾಗಿ ಪೊಲೀಸರು ಸರಿಯಾದ ಪ್ಲ್ಯಾನ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಿಪಿಐ ಪಂಡಿತ ಸಗರ ಅವರನ್ನು ಅಮಾನತು ಮಾಡಿ ಐಜಿಪಿ(IGP) ಆದೇಶ ಹೊರಡಿಸಿದ್ದಾರೆ. ನವೆಂಬರ್ 7 ರಂದು ಕಲಬುರಗಿ ನಗರದ ವರ್ಧಾ ಲೇಔಟ್(Vardha layout) ನ ಅಪಾರ್ಟ್‌ಮೆಂಟ್‌ನಿಂದ ಕಾಂಪೌಂಡ್ ಜಿಗಿದು ಎಸ್ಕೇಪ್ ಆಗಿದ್ದ ಆರ್ ಡಿ ಪಾಟೀಲ್. ಪ್ರಕರಣದ ಕಿಂಗ್‌ಪಿನ್ ಅಪಾರ್ಟ್‌ಮೆಂಟ್‌ನಲ್ಲಿದ್ದಾನೆಂಬ ಮಾಹಿತಿ ಮುಂಚಿತವಾಗಿ ಸಿಕ್ಕರೂ ಬಂಧನಕ್ಕೆ ತೆರಳಲು ಸಿಪಿಐ ಪಂಡಿತ್ ಸಗರ್ ನಿರ್ಲಕ್ಷ್ಯ ಮಾಡಿದ ಆರೋಪ. ಕಣ್ಣೆದುರಲ್ಲೇ ಆರೋಪಿ ತಪ್ಪಿಸಿಕೊಂಡು ಹೋದ ಹಿನ್ನೆಲೆ ಅಮಾನತ್ತು ಮಾಡಲಾಗಿದೆ.